5:53 PM Friday19 - April 2024
ಬ್ರೇಕಿಂಗ್ ನ್ಯೂಸ್
ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ…

ಇತ್ತೀಚಿನ ಸುದ್ದಿ

ವೈದ್ಯರ ಹೂ ಕುಂಡ ಎತ್ತುವ ದಮ್ಮು ಇಲ್ಲದ ಪಾಲಿಕೆ ಆಡಳಿತ, ಅಕ್ರಮ ಕಟ್ಟಡಕ್ಕೆ ಕೈಹಾಕಿತೇ?: ಇದು ಮಂಗಳೂರಿಗರ ಪ್ರಶ್ನೆ

18/05/2022, 11:16

ಮಂಗಳೂರು(reporterkarnataka.com): ಪ್ರತಿಷ್ಠಿತರ ಅತಿಕ್ರಮಣದ ವಿರುದ್ಧ ಕೈಚೆಲ್ಲಿದ ಮಂಗಳೂರು ಮಹಾನಗರಪಾಲಿಕೆ ಆಡಳಿತ ಸಾರ್ವಜನಿಕರ ಛೀಮಾರಿಗೆ ಒಳಗಾಗಿದೆ. ನಗರದ ಡೊಂಗರಕೇರಿಯಲ್ಲಿ ವೈದ್ಯರೊಬ್ಬರು ಸಾರ್ವಜನಿಕ ಫುಟ್ ಪಾತ್ ಪ್ರದೇಶವನ್ನು ಅತಿಕ್ರಮಣ ಮಾಡಿ ಇಟ್ಟಿದ್ದ ಹೂ ಕುಂಡವನ್ನು ತೆಗೆಸುವಲ್ಲಿ ವಿಫಲವಾಗಿದೆ. ಗಡುವು ಮುಗಿದರೂ ಹೂ ಕುಂಡ ತೆರವಾಗದಿರುವುದನ್ನು ಕಂಡು ಮತ್ತೆ ಸಾಮಾಜಿಕ ಕಾರ್ಯಕರ್ತರೇ ತೆರವುಗೊಳಿಸಿದ ಘಟನೆ ನಡೆದಿದೆ.


ಹಲವು ತಿಂಗಳಿಗಳಿಂದ ಡೊಂಗರಕೇರಿಯಲ್ಲಿ ಅನಧಿಕೃತವಾಗಿ ಪ್ರತಿಷ್ಠಿತ ಹೃದಯತಜ್ಞ ವೈದ್ಯರ ಮನೆಯ ಮುಂಭಾಗದಲ್ಲಿ ಇಟ್ಟಂಥಹ ಹೂವಿನ- ಕುಂಡದ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ, ದಕ್ಷಿಣ ವಿಧಾನ ಸಭೆ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಬಂದರು ಪೊಲೀಸ್ ಠಾಣೆಗೆ ಈ ವಿಚಾರಗಳ ಬಗ್ಗೆ ಮನವಿಯನ್ನ ಸಲ್ಲಿಸಲಾಗಿತ್ತು

ರಾಜಕೀಯ ಒತ್ತಡಕ್ಕೆ ಮಣಿದ ಪಾಲಿಕೆ ಆಡಳಿತ ತರವುಗೊಳಿಸುವಲ್ಲಿ ವಿಫಲವಾಗಿತ್ತು. ಇದರಿಂದ ಡೊಂಗರಕೇರಿ ಪರಿಸರದ ನಾಗರೀಕರಿಗೆ ಯಾವುದೇ ರೀತಿಯಲ್ಲಿ ನ್ಯಾಯ ಸಿಗಲಿಲ್ಲ. ಮೇ 4ರಂದು ಅದೇ ಸ್ಥಳದಲ್ಲಿ ಪ್ರತಿಭಟನೆ ಮಾಡಿ ಮಂಗಳೂರು ಮಹಾನಗರ ಪಾಲಿಕೆಗೆ, ಮಾಧ್ಯಮ ಸ್ನೇಹಿತರ ಮುಖಾಂತರ ಮುಂದಿನ 10 ದಿನಗಳಲ್ಲಿ ಈ ಹೂವಿನ ಕುಂಡವನ್ನು ತೆರವುಗೊಳಸದೇ ಇದ್ದಲ್ಲಿ ಸಾರ್ವಜನಿಕರೇ ಸೇರಿ ಮಹಾನಗರ ಪಾಲಿಕೆ ಮಾಡುವಂತಹ ಕೆಲಸ ಮಾಡಿ ತೋರಿಸುತ್ತೇವೆ ಎಂಬ  ಸ್ಪಷ್ಟ ಎಚ್ಚರಿಕೆಯ ಸಂದೇಶವನ್ನು ಕೂಡ ರವಾನಿಸಲಾಗಿತ್ತು. ಇದೀಗ ಶಾಂತಿ ಸಂದೇಶವನ್ನು ಜಗತ್ತಿಗೆ ಸಾರಿದ ಗೌತಮ ಬುದ್ಧರ ಬುದ್ಧ ಪೂರ್ಣಿಮೆಯ ವಿಶೇಷ ದಿನದಂದು ಸಾಮಾಜಿಕ ಕಾರ್ಯಕರ್ತರ ಮಂಜುಳಾ ನಾಯಕ್ ನೇತೃತ್ವದಲ್ಲಿ ಹೂ ಕುಂಡಗಳನ್ನು ತೆರವುಗೊಳಿಸಲಾಯಿತು.

ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾದಾಗ ಪಾಲಿಕೆ ಆಡಳಿತ ಸ್ಪಂದಿಸಿ ತೆರವುಗೊಳಿಸಬೇಕಿತ್ತು. ಆದರೆ ಈ ಕೆಲಸವನ್ನು ಪಾಲಿಕೆ ಆಡಳಿತ ಮಾಡಿಲ್ಲ. ಇಲ್ಲಿನ ಕಾರ್ಪೊರೇಟರ್,  ಮೇಯರ್ ಮುಂತಾದವರು ಹಣವಂತರ, ಪ್ರಭಾವಿಗಳ ಓಟು ಮಾತ್ರ ಪಡೆದು ಗೆದ್ದವರೇ? ಸಾಮಾನ್ಯರ ಓಟು ಇವರಿಗೆ ಬಿದ್ದಿಲ್ಲವೇ? ಹೂ ಕುಂಡು ಎತ್ತುವ ದಮ್ಮು ಇಲ್ಲದ ಪಾಲಿಕೆ ಆಡಳಿತ ಮತ್ತೆ ಅಕ್ರಮ ಕಟ್ಟಡಗಳಿಗೆ ಕೈ ಹಾಕಿತೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪಾಲಿಕೆ ಮೇಯರ್ ಮತ್ತು ಕಮಿಷನರ್ 
ಉತ್ತರಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು