1:42 AM Sunday3 - July 2022
ಬ್ರೇಕಿಂಗ್ ನ್ಯೂಸ್
ಸುಂಕ ಕಡಿತ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟು ಇಳಿಕೆಯಾಗಿದೆ? ಇಲ್ಲಿದೆ… ಗಡಿ ಗ್ರಾಮಗಳಲ್ಲಿ ನಿದ್ದೆ ಬಾರದ ರಾತ್ರಿಗಳು!!: ಭೂಕಂಪನ, ಭೂಕುಸಿತ, ವರ್ಷಧಾರೆಗೆ ತತ್ತರಿಸಿದ ಕೊಡಗು ಬೈಕ್ ಕಳ್ಳತನ ಮಾಡುತ್ತಿದ್ದ ಯುವ ಗ್ಯಾಂಗ್ ಪೊಲೀಸ್ ಬಲೆಗೆ: ಅಥಣಿ ಪೊಲೀಸರ ಯಶಸ್ವಿ… ಬೆಂಗಳೂರು ಸಹಿತ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ‘ಅಗ್ನಿವೀರ’ ಅವಕಾಶ: ಆ.10ರಿಂದ ಹಾಸನದಲ್ಲಿ ಭೂ ಸೇನಾ Rally ಮತ್ತೆ ಮತ್ತೆ ಭೂಕಂಪನ: ನಡುಗಿದ ಕಲ್ಲುಗುಂಡಿ, ಸಂಪಾಜೆ; ಭಯಬೇಡ, ಪಶ್ಚಾತ್ ಕಂಪನ ಅಷ್ಟೇ  ಕೊಡಗಿನಲ್ಲಿ ಪ್ರವಾಹದ ಭೀತಿ: ಜಲಾನಯನ ಪ್ರದೇಶದ ನಿವಾಸಿಗಳಿಗೆ ಮುನ್ನೆಚ್ಚರಿಕೆ ಸೂಚನೆ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ನೂಪುರ್ ಶರ್ಮ  ಹೇಳಿಕೆ ಕಾರಣ, ಕ್ಷಮೆಯಾಚಿಸಲಿ: ಸುಪ್ರೀಂ ಕೋರ್ಟ್ ಕನ್ನಯ್ಯ ಲಾಲ್ ಸಾವಿಗೆ ರಾಜಸ್ಥಾನ ಸರಕಾರವೇ ನೇರ ಹೊಣೆ, ಆರೋಪಿಗಳ ಗಲ್ಲಿಗೇರಿಸಿ: ಶಾಸಕ… ಮೂಡಿಗೆರೆ: ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಸ್ವಯಂ ಪ್ರೇರಿತ ಬಂದ್, ವಾರದ ಸಂತೆ… ಅಪಾಯವನ್ನು ಲೆಕ್ಕಿಸದೇ ಟ್ರಾಕ್ಟರ್ ಹಗ್ಗ ಜಗ್ಗಾಟ ಆಟ ಆಯೋಜನೆ: ಜಿಲ್ಲಾಡಳಿತ, ಪೊಲೀಸ್ ಇಲಾಖೆ…

ಇತ್ತೀಚಿನ ಸುದ್ದಿ

ವಿಜಯನಗರ ಪೂಜಾರಹಳ್ಳಿ ತಾಂಡ: ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಗಾರೆ ಪಾಠ.!?

17/05/2022, 19:54

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಮೇ17ರಂದು ಕೆಲ ಮಕ್ಕಳನ್ನು ಬಳಸಿ ಶಾಲೆ ಸ್ವಚ್ಚತೆ ಮಾಡಿಸಲಾಗಿದೆ. ಶಾಲಾ ಕೊಠಡಿಯ ಮೇಲೆ ಮಕ್ಕಳನ್ನು ಹತ್ತಿಸಿ ಮಾಳಿಗಿ ಮೇಲ್ಭಾಗದಲ್ಲಿದ್ದ, ಭಾರೀ ಗಾತ್ರದ ಸಿಮೆಂಟ್ ತ್ಯಾಜ್ಯದ ಗುಪ್ಪೆಯನ್ನು ತೆರವುಗೊಳಿಸಲು ಮಕ್ಕಳನ್ನು ಬಳಸಲಾಗಿದೆ.   ಮಕ್ಕಳನ್ನು ಕಟ್ಟಡದ ಮೇಲ್ಭಾಗದ ಚಾವಣೆ ಮೇಲೆ ಹತ್ತಲು ತಿಳಿಸಿದ್ದು, ಕಸ ಹಾಗೂ ತ್ಯಾಜ್ಯ ನೀರು ಮತ್ತು ಸಿಮೆಂಟ್ ತ್ಯಾಜ್ಯವನ್ನು ಕೀಳಲು ಸೂಚಿಸಿದ್ದಾರೆ.

ತ್ಯಾಜ್ಯ ತೆಗೆಯಲು ತಾಸು ಗಟ್ಟಲೆ ಮಕ್ಕಳಿಗೆ ಸಾಮಾಗ್ರಿಗಳನ್ನು ನೀಡಿ ತಾಸುಗಟ್ಟಲೆ ಕೆಲಸ ಮಾಡಿಸಲಾಗಿದೆ. ಶಾಲಾ ಬಿಸಿಯೂಟ ಕೋಣೆಯ ಮೇಲ್ಭಾಗದಲ್ಲಿದ್ದ ಕಸ ಹಾಗೂ ತ್ಯಾಜ್ಯ  ಸಿಮೆಂಟ್ ಕಿತ್ತು ತೆಗೆಯಲು, ಅವರಿಗೆ ಸುತ್ತಿಗೆ ಹಾಗೂ ಕಿರಿ ಹಾರೆ ಕೊಟ್ಟು ಕೆಲಕ್ಕೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಸಲಿಗೆ ಪೂಜಾರ ಹಳ್ಳಿ ತಾಂಡ ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯುವರಾಜ ನಾಯಕ ರವರ ಅಜ್ಜಿಯ ತವರು ಊರೆಂದು ತಿಳಿದುಬಂದಿದೆ. ಬಿ.ಇ.ಓರವರ ನಂಟಿರುವ ಗ್ರಾಮದ ಶಾಲೆಯಲ್ಲಿ ಈ ದುರಾವಸ್ತೆ ಜರುಗಿದೆ. ಶಾಲಾವರಣ ದನಗಳ ಕೊಟ್ಟಿಗೆ ರೂಪದಲ್ಲಿದೆ. ಕಸ ತ್ಯಾಜ್ಯದಿಂದ ಶಾಲಾವರಣ ತುಂಬಿದೆ. ಮಳೆ ನೀರು ನಿಂತು ಕೊಚ್ಚೆ ಗುಂಡಿ ನಿರ್ಮಾಣವಾಗಿದೆ. ಆದರೂ ಸಂಬಂಧಿಸಿದವರು ಕ್ರಮ ಜರುಗಿಸಿಲ್ಲ. ಮಕ್ಕಳಿಗೆ ಶಿಸ್ಥಿನೊಂದಿಗೆ ಶಿಕ್ಷಣ ನೀಡಬೇಕಾಗಿರುವ ಗುರುಗಳು, ಅವರೇ ನಿಂತು ಮಕ್ಕಳಿಗೆ ಗಾರೆ ಹಾಗೂ ಕಸ ಮತ್ತು ಸಿಮೆಂಟ್,ತ್ಯಾಜ್ಯ ನೀರು ಬಳಿಯಲು ಬಳಸಿಕೊಂಡಿದ್ದಾರೆ, ಏನೂ ತಿಳಿಯದ ಮಕ್ಕಳಿಗೆ ಶಿಕ್ಷಣ ನೀಡದೇ ಅವರಿಗೆ ಗಾರೆ ಕೆಲದ ತರಬೇತಿ ನೀಡಿದಂತಹ ದೃಶ್ಯ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.ಈ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ, ಹಾಗೂ ನಾಗರೀಕರಲ್ಲಿ ಕೆಲವರಲ್ಲಿ ಮಾತ್ರ ಪರವಾದ ಅಭಿಪ್ರಾಯವಿದೆ. ಬಹುತೇಕರಲ್ಲಿ ಖಂಡನೀಯ ಅಭಿಪ್ರಾಯ ವ್ಯಕ್ತವಾಗಿದೆ. ಸಂಬಂಧಿಸಿದಂತೆ ಸಿಬ್ಬಂದಿ ವಿರುದ್ಧ ಶಿಸ್ಥು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು