9:16 AM Friday24 - May 2024
ಬ್ರೇಕಿಂಗ್ ನ್ಯೂಸ್
ಬುದ್ಧ ಪೂರ್ಣಿಮೆ: ದಕ್ಷಿಣ ಕಾಶಿ ನಂಜನಗೂಡು ದೇಗುಲಕ್ಕೆ ಹರಿದು ಬಂದ ಭಕ್ತ ಸಾಗರ;… ಕುಡುಕ ಪತಿಯಿಂದ ಪತ್ನಿಯ ಬರ್ಬರ ಹತ್ಯೆ: ಮಕ್ಕಳ ಕಣ್ಣೆದುರೇ ಸಲಾಕೆಯಿಂದ ಹೊಡೆದು ಕೊಲೆ… ಪೂರ್ವ ಮುಂಗಾರು: ದ.ಕ., ಉಡುಪಿ ಸಹಿತ ರಾಜ್ಯದ 7 ಜಿಲ್ಲೆಗಳಲ್ಲಿ ಭಾರೀ ಮಳೆ… ಪಡೀಲು ಸಮೀಪ ಬೈಕಿಗೆ ಡಿಕ್ಕಿ ಹೊಡೆದು ಸವಾರ ಸಹಿತ ದೂರಕ್ಕೆ ಎಳೆದೊಯ್ದ ಕಾರು:… ವಿಜಯಪುರ: ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನ ಅಮಾನುಷ ಹತ್ಯೆ; ಹಣಕಾಸಿನ ವ್ಯವಹಾರ… ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ

ಇತ್ತೀಚಿನ ಸುದ್ದಿ

ಎಂ.ಕಾಂ ಪರೀಕ್ಷೆ: ಕುಡ್ಲದ ಪೊಣ್ಣು, ನಟಿ- ನಿರೂಪಕಿ ಶೀತಲ್ ಮಂಗಳೂರು ಪ್ರಥಮ Rank

18/04/2022, 21:19

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ನಗರದ ಬೆಸೆಂಟ್ ಸಂಧ್ಯಾ ಕಾಲೇಜಿನ ವಿದ್ಯಾರ್ಥಿನಿ,ನಟಿ, ನಿರೂಪಕಿ ಶೀತಲ್ ಅವರು ಎಂ.ಕಾಂ ಪರೀಕ್ಷೆಯಲ್ಲಿ ಪ್ರಥಮ rank ಪಡೆದಿದ್ದಾರೆ.


ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ವಿದ್ಯಾಭ್ಯಾಸವನ್ನು ಪೂರೈಸಿದ ಅವರು ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಎಂ.ಕಾಂ ಶಿಕ್ಷಣ ಪಡೆದರು.


ಅತೀ ಸಣ್ಣ ವಯಸ್ಸಿನಲ್ಲಿ ತುಳು ರಂಗಭೂಮಿ ಪ್ರವೇಶಿಸಿದರು. ನಾಯಕಿ ನಟಿಯಾಗಿ ನಟನೆಯಲ್ಲೂ ಎತ್ತಿದ ಕೈ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಖಾಸಗಿ ಟಿವಿ ವಾಹಿನಿಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು.

ಈಕೆ ಕೆ.ಪ್ರಕಾಶ್ ಹಾಗೂ ಗೀತಾ ದಂಪತಿಯ ಏಕೈಕ ಪುತ್ರಿ. ಪ್ರಸ್ತುತ ಅವರು ಎ. ಜೆ. ಸಂಸ್ಥೆಯಲ್ಲಿ  ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ನಟನೆಯಿಂದ ದೂರ ಸರಿದಿದ್ದಾರೆ.


ಬೇರೆ ಭಾಷೆಗಳಲ್ಲಿ ನಟನೆ ಮಾಡುವ ಆಸಕ್ತಿ ಸದ್ಯಕ್ಕಿಲ್ಲ. ತುಳು ಭಾಷೆಯ ಮೇಲೆ ಅಭಿಮಾನ ಮತ್ತು ಪ್ರೀತಿ ಇದೆ. ಹಾಗಾಗಿ ಅವಕಾಶ ಸಿಕ್ಕಾಗ ಬಳಸಿಕೊಂಡೆ. ನಟಿಯಾಗಬೇಕೆಂಬ ಕನಸು ಯಾವತ್ತು ಕಂಡಿಲ್ಲ. ಕಾಲೇಜು ಜೀವನದಲ್ಲಿ ನಟನೆಯಿಂದ ಬರುತ್ತಿದ್ದ ಹಣ ನನ್ನ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತಿತ್ತು. ಮೊದಲು ಓದಿಗೆ ಪ್ರಾಮುಖ್ಯತೆ, ಆಮೇಲೆ ಇತರ ವಿಷಯಕ್ಕೆ ಎಂದು ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿದ ಅವರು ನುಡಿದರು.

ನನ್ನ ತಂದೆ-ತಾಯಿ ಯಾವತ್ತು ಒತ್ತಡ ಮಾಡಿಲ್ಲ ಇಷ್ಟೇ ಅಂಕ ಗಳಿಸಬೇಕು ಅಥವಾ ಇದೇ ಫೀಲ್ಡಿಗೆ ಹೋಗಬೇಕು ಎಂದು ಒತ್ತಡ ಹೇರಿಲ್ಲ.


ಯಾವುದೇ ರಂಗಕ್ಕೆ ಹೋಗು ನಮ್ಮ ಸಹಾಯ ಇದೆ ಎಂದು ಇವತ್ತಿಗೂ ಬೆನ್ನು ತಟ್ಟುತ್ತಿರುವ ತಂದೆ-ತಾಯಿಯೇ ನನಗೆ ಸ್ಪೂರ್ತಿ ಎಂದು ಶೀತಲ್ ಹೇಳುತ್ತಾರೆ. ನನಗೆ ಸಹಕಾರ ನೀಡಿದ ಎಲ್ಲಾ ಶಿಕ್ಷಕರಿಗೂ ಹಾಗೂ ನನಗೆ ಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.ದಬಕ್ ದಬ ಐಸಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಮೆಹಂದಿ ಆರ್ಟಿಸ್ಟ್, ಡ್ಯಾನ್ಸರ್ ಕೂಡ ಹೌದು.

ಇತ್ತೀಚಿನ ಸುದ್ದಿ

ಜಾಹೀರಾತು