10:09 AM Tuesday3 - October 2023
ಬ್ರೇಕಿಂಗ್ ನ್ಯೂಸ್
ಅನಧಿಕೃತ ಕೃಷಿ ಕೀಟ ನಾಶಕ ಮಾರಾಟ: ಕೆಮಿಕಲ್ ಮಳಿಗೆಗೆ ಕೃಷಿ ಅಧಿಕಾರಿಗಳ ದಿಢೀರ್… ಹೈಕೋರ್ಟ್ ಆದೇಶ ಉಲ್ಲಂಘಿಸಿ ವಿದ್ಯಾರ್ಥಿಗಳ ಮರುಹಂಚಿಕೆಗೆ ಕ್ರಮ? ವೈದ್ಯಕೀಯ ಶಿಕ್ಷಣ ಸಚಿವ ಶರಣ್… ಕೆಜೆ ಹಳ್ಳಿ-ಡಿಜೆಹಳ್ಳಿ-ಹುಬ್ಬಳ್ಳಿ ಕೇಸ್ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತಿತ್ತು: ಕೇಂದ್ರ ಸಚಿವೆ… ಜೆಡಿಎಸ್- ಬಿಜೆಪಿ ಸಖ್ಯ: ಕೇಸರಿ ಪಾಳಯ ತೊರೆದು ದಳ ಸೇರಿದ್ದ ಮೂಡಿಗೆರೆ ಮಾಜಿ… ಕೊಟ್ಟಿಗೆಹಾರ ಸುತ್ತಮುತ್ತ 3 ದಿನಗಳಿಂದ ನಿರಂತರ ಧಾರಾಕಾರ ಮಳೆ: ಆತಂಕಕ್ಕೀಡಾದ ಕಾಫಿ ಬೆಳೆಗಾರರು ಮೆಸ್ಕಾಂ ನಿರ್ಲಕ್ಷ್ಯ: ಹೆಮ್ಮಾಡಿ ಕಾಲು ದಾರಿಯಲ್ಲಿ ವಿದ್ಯುತ್ ಶಾಕ್ ತಗುಲಿ ದಂಪತಿ ದಾರುಣ… ಬೆಳಗಾವಿಯಲ್ಲಿ 2 ದಿನಗಳ ಮೋಡ ಬಿತ್ತನೆಗೆ ಚಾಲನೆ: 20 ಸಾವಿರ ಅಡಿ ಎತ್ತದರದಲ್ಲಿರುವ… ಶೃಂಗೇರಿ: ತುಂಗಾ ನದಿಯ ನಡುಗಡ್ಡೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಇಬ್ಬರ ರಕ್ಷಣೆ; ಅಗ್ನಿ ಶಾಮಕ… ಕಾವೇರಿ ನದಿ ನೀರು ಹಂಚಿಕೆ ವಿವಾದ: ಅಥಣಿಯಲ್ಲಿ ಪ್ರತಿಭಟನೆ; ಮಾನವ ಸರಪಳಿ ಮಂಗಳೂರಿನಲ್ಲಿ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಸ್ ಶೆಲ್ಟರ್ ಇಲ್ಲ!: ಆದ್ಯತೆ ಮೇರೆಗೆ ನಿರ್ಮಾಣ…

ಇತ್ತೀಚಿನ ಸುದ್ದಿ

‘ನಮ್ಮ ಭೂಮಿ ನಮ್ಮ ಆರೋಗ್ಯ’: ಬನ್ನಿ ವಿಶ್ವ ಆರೋಗ್ಯ ದಿನವನ್ನು ಪೂರ್ಣಗೊಳಿಸೋಣ

07/04/2022, 11:42

ಆರೋಗ್ಯ  ಮತ್ತು ರೋಗಕ್ಕೆ ಯಾವುದೇ ರೀತಿಯ ರಾಜಕೀಯ ಅಥವಾ ಭೌಗೋಳಿಕ ಗಡಿಗಳ ಮಿತಿಯಿಲ್ಲ. ಪ್ರಪಂಚದ ಯಾವುದೇ ದೇಶದಲ್ಲಿ  ಸಾಂಕ್ರಮಿಕ ರೋಗದ ಲಕ್ಷಣಗಳಿದ್ದರೂ ಕೂಡ ಇನ್ನೊಂದು ಮೂಲೆಯ ದೇಶದ ಜನರೂ ಸಹ ಜಾಗರೂಕಾರಾಗಿ ಇರಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೇವಲ ಖಾಯಿಲೆಯಿಂದ ಬಳಲದೇ ಇರುವುದನ್ನು ಆರೋಗ್ಯ ಎಂದು ಪರಿಗಣಿಸದೆ ಒಬ್ಬ ಮನುಷ್ಯನ ಸಂಪೂರ್ಣವಾದ ದೈಹಿಕ, ಮಾನಸಿಕ, ಸಾಮಾಜಿಕ ಸ್ವಾಸ್ತ್ಯವನ್ನು ಆರೋಗ್ಯ ಎಂದು ವ್ಯಾಖ್ಯಾನ ಮಾಡಲಾಗಿದೆ.

ಪ್ರಪಂಚದಾದ್ಯಂತ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹುಟ್ಟಿಕೊಂಡಿತು.1948 ರಲ್ಲಿ ಜಿನಿವಾದಲ್ಲಿ ನಡೆದ ಶೃಂಗ ಸಭೆಯಲ್ಲಿ ಏಪ್ರಿಲ್ 6ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.1950 ಏಪ್ರಿಲ್ 7 ರಿಂದ ಪ್ರತೀ ವರ್ಷ ಒಂದೊಂದು ವಿಷಯವನ್ನಧರಿಸಿಕೊಂಡು ಆ ಕುರಿತಾಗಿ ಪ್ರಪಂಚದಾದ್ಯಂತ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು WHO ಮಾಡುತ್ತಿದೆ. ಅಂತೆಯೇ ಈ ವರ್ಷ “ನಮ್ಮ ಭೂಮಿ ನಮ್ಮ ಆರೋಗ್ಯ ” ಎನ್ನುವ ದ್ಯೇಯದಡಿ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಕಲುಷಿತಗೊಳ್ಳುತ್ತಿರುವ ಪರಿಸರದಿಂದಾಗಿ ಕೊರೋನದಂತಹ ಸಾಂಕ್ರಾಮಿಕ ರೋಗ ಹಾಗೂ ಕ್ಯಾನ್ಸರ್ ನಂತ,ಹಲವಾರು ಅನಿಷ್ಟ  ಮಾರಣಾಂತಿಕ ಕಾಯಿಲೆಗಳು ನಮ್ಮನ್ನು ಕಾಡುತ್ತಿದೆ. ಇದು ಎಚ್ಚರಿಕೆಯ ಗಂಟೆಯಾಗಿದೆ.
ಭೂಮಿಯಲ್ಲಿರುವ ಪ್ರತಿಯೊಬ್ಬರೂ ಸಹ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.ತುರ್ತುಪರಿಸ್ಥಿತಿ ಇದೆ ಎಂದು ಹೇಳಿದರೆ ತಪ್ಪಾಗಲಾರದು. WHO ಪ್ರಕಾರ ಪ್ರತಿವರ್ಷ 13 ಲಕ್ಷ ದಶ ಲಕ್ಷ ಕ್ಕೂ ಹೆಚ್ಚು ಸಾವುಗಳು ಕಲುಷಿತ ಹವಾಮಾನ ಬದಲಾವಣೆಯ ಪರಿಸರದಿಂದಾಗಿದೆ ಎಂದು ಅಂದಾಜಿಸಿದೆ.

ಕೆಲವು ಕಡೆ ಅತಿ ವೃಷ್ಠಿಯಾಗಿ ಸಾಂಕ್ರಾಮಿಕ ರೋಗಗಳು ಹರಡಿದರೆ ಇನ್ನೂ ಕೆಲವುಕಡೆ ಅನಾ ವೃಷ್ಠಿಯಿಂದಾಗಿ ಅನೇಕ ತೊಂದರೆಗಳು ಉಂಟಾಗುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ತಾಪಮಾನ, ಮಿತಿಮೀರಿದ ಪ್ಲಾಸ್ಟಿಕ್ ಬಳಕೆ, ಮರಗಳ ಕಡಿಯುದರಿಂದ, ಸಂಸ್ಕರಿಸಿದ ಆಹಾರ ಬಳಕೆ, ಕಲುಷಿತಗೊಂಡ ನೀರು, ಮಣ್ಣಿನಿಂದಾಗಿ ಮಾನವ ಜನಾಂಗವಲ್ಲದೇ, ಎಲ್ಲ ಜೀವ ವೈವಿಧ್ಯಗಳು ಸಂಕಟದಲ್ಲಿದೆ.ನಮ್ಮ  ಬದಲಾದ  ಒತ್ತಡಯುತ ಜೀವನ ಶೈಲಿಯ ಹಾಗೂ ಆಹಾರ ಕ್ರಮ, ಕಲುಷಿತಗೊಂಡ ಪರಿಸರದಿಂದಾಗಿ, ಡಯಬಿಟಿಸ್, ಅಸ್ತಮ, ಬಿ. ಪಿ, ಅಲರ್ಜಿ, ಸ್ಥೂಲ ಕಾಯ, ಹೃದ್ರೋಗ, ಥೈರಾಯ್ಡ್, PCOD, ಕ್ಯಾನ್ಸರ್ ನಂತಹ ಸಮಸ್ಯೆಗಳು ಸರ್ವೇಸಾಮಾನ್ಯ ಎನ್ನುವಷ್ಟು ನಮ್ಮನ್ನು ಅವರಿಸಿಬಿಟ್ಟಿದೆ. ಆದ್ದರಿಂದ ನಮ್ಮ ಮುಂದಿನ ಅರೋಗ್ಯಕ್ಕರ ಭವಿಷ್ಯತ್ತಿಗಾಗಿ ನಮ್ಮ ಭೂಮಿಯನ್ನು ರಕ್ಷಿಸುವುದರ ಪ್ರತಿ ಜನರ ಜವಾಬ್ದಾರಿಯಾಗಿದೆ.

ವಾಯುಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಜನನಿಬಿಡಿದ  ಪ್ರದೇಶದಲ್ಲಿ ಸಾರ್ವಜನಿಕ ವಾಹನಗಳನ್ನು ಬಳಸುವುದು,ಹತ್ತಿರವಿರುವ ಜಾಗಗಳಿಗೆ ಕಾಲ್ನಡಿಗೆಯಲ್ಲಿ ಹೋಗುವುದರಿಂದ  ಮಾಲಿನ್ಯವನ್ನು ತಡೆಗಟ್ಟ ಬಹುದಲ್ಲದೇ, ನಿಮ್ಮ ಅರೋಗ್ಯವನ್ನು ವೃದ್ಧಿಸಬಹುದು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರು ಅಥವಾ ಪಾನೀಯಗಳ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯದೆ ಇರುವುದು, ತರಕಾರಿಗಳನ್ನು ಕೊಂಡುಕೊಳ್ಳುವಾಗ  ಬಟ್ಟೆ ಚೀಲವನ್ನು  ಬಳಸುವುದು ಉತ್ತಮ.

ಸ್ಥಳೀಯವಾಗಿ ಬೆಳೆಸಿದ ಹಣ್ಣು ತರಕಾರಿ ಬಳಸುವುದು, ಸಾಧ್ಯವಾದರೆ ಮನೆಯಲ್ಲೇ ಸಾವಯವ ಗೊಬ್ಬರಗಳನ್ನು ಬಳಸಿ ತರಕಾರಿ ಬೆಳೆಸುವುದು. ನೀರಿನ  ಮಿತವಾದ ಬಳಕೆ  ಹಾಗೂ ಕಲುಷಿತಗೊಳ್ಳುವುದನ್ನು ಕಾಪಾಡುವುದು.

ಎಲ್ಲೆಂದರಲ್ಲಿ ಉಗಿಯುವುದು ಸಾರ್ವಜನಿಕ  ಪ್ರದೇಶದಲ್ಲಿ ಬೀಡಿ ಸಿಗರೇಟ್ ಸೇದುದರಿಂದ ನಿಮ್ಮ ಆರೋಗ್ಯವಲ್ಲದೆ, ನಿಮ್ಮ ಸುತ್ತ ಮುತ್ತಲಿರುವವರ ಆರೋಗ್ಯಕ್ಕೂ ಕೂಡ ಸಂಚಿಕಾರ  ತಂದಂತೆ, ಸಾಧ್ಯವಾದಷ್ಟು ಗಿಡ ಮರಗಳನ್ನು ನೆಡುದರಿಂದ ಕಾರ್ಬನ್ ಡೈ ಆಕಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯಕ ಹಾಗೂ ಮಳೆಗಾಲದಲ್ಲಿ ಮಣ್ಣು ಸವೆದು ಹೋಗದಂತೆ ತಡೆಯುತ್ತದೆ.

ಮಾಂಸಾಹಾರ ಸೇವನೆಯನ್ನು ಮಿತ ಗೊಳಿಸುದರಿಂದ ಬೊಜ್ಜು, ಸ್ಥೂಲ ಕಾಯ, ಹೃದ್ರೋಗವನ್ನು ತಡೆಯಬಹುದು. ಸಾಧ್ಯವಾದಷ್ಟು ಸಂಸ್ಕರಿಸಿದ ಆಹಾರಗಳಿಂದ ದೂರ ವಿರುವುದು.ಇಂತಹ ಇನ್ನಷ್ಟು ಕ್ರಮಗಳನ್ನು ಪಾಲಿಸಿ ಮಕ್ಕಳಿಗೂ ಅದರ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದರಿಂದ ಆರೋಗ್ಯಕರ ಭವಿಷ್ಯ ರೂಪಿಸಲು ಸಹಾಯಕವಾಗುತ್ತದೆ. ಈ ಮೂಲಕ ನಾವೆಲ್ಲರೂ ಪರಿಸರ ಹಾಗೂ ನಮ್ಮ ಆರೋಗ್ಯ ರಕ್ಷಣೆ ಮಾಡುವಲ್ಲಿ ದೃಢ ನಿರ್ಧಾರ ಕೈಕೊಂಡಲ್ಲಿ ಈ ವರ್ಷದ ವಿಶ್ವ ಆರೋಗ್ಯದಿನವನ್ನು ಅರ್ಥ ಪೂರ್ಣವಾಗಿ ಆಚರಿಸದಂತಾಗುತ್ತದೆ.

ಡಾ.ಭವ್ಯ.ಶೆಟ್ಟಿ
✍️

ಇತ್ತೀಚಿನ ಸುದ್ದಿ

ಜಾಹೀರಾತು