11:40 AM Wednesday18 - May 2022
ಬ್ರೇಕಿಂಗ್ ನ್ಯೂಸ್
ವೈದ್ಯರ ಹೂ ಕುಂಡ ಎತ್ತುವ ದಮ್ಮು ಇಲ್ಲದ ಪಾಲಿಕೆ ಆಡಳಿತ, ಅಕ್ರಮ ಕಟ್ಟಡಕ್ಕೆ… ಉಳ್ಳಾಲ: ಮಳೆಗೆ ಕಿನ್ಯಾ ಬೆಳರಿಂಗೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿತ ವಿಜಯನಗರ ಪೂಜಾರಹಳ್ಳಿ ತಾಂಡ: ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಗಾರೆ ಪಾಠ.!? ಮಧುಗುಂಡಿ: 2019ರ ಮಹಾಮಳೆ ಸಂತ್ರಸ್ತರಿಗೆ ಸರಕಾರದಿಂದ ಇನ್ನೂ ಸಿಕ್ಕಿಲ್ಲ ಮನೆಭಾಗ್ಯ! ಬಡವರ ಅನ್ನಕ್ಕೂ ಕನ್ನ: ಇಂದಿರಾ ಕ್ಯಾಂಟೀನ್ ಊಟ ಹೋಟೆಲ್ ಗಳಿಗೆ ಸಪ್ಲೈ: ದಿನಕ್ಕೆ… ಕಾಫಿನಾಡ ಬಯಲು ಸೀಮೆಯಲ್ಲಿ ಭಾರಿ ಮಳೆ ಅಬ್ಬರ: ತರೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ 2… ಮೂಡಿಗೆರೆ: ರಸ್ತೆಗೆ ಉರುಳಿದ ಬೃಹತ್ ಮರ; 2 ತಾಸು ಸಂಚಾರ ಬಂದ್; ಕಿಮೀಗಟ್ಟಲೆ… ಕರ್ನಾಟಕದಿಂದ ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ?: ರಾಜ್ಯದಿಂದ ಈ ಹಿಂದೆ ಇಂದಿರಾ, ಸೋನಿಯಾ… ಕೇರಳದ ಟೊಮೆಟೋ ಜ್ವರ: ಕೊಡಗಿನಲ್ಲಿ ಮುನ್ನೆಚ್ಚರಿಕಾ ಕ್ರಮ; ಗಡಿಯಲ್ಲಿ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಕೆಎಸ್ಸಾರ್ಟಿಸಿ ಬಸ್ ಪಾಸ್ ಕುರಿತು ಗೊಂದಲ ಬೇಡ: ಹಳೆ ಪಾಸ್ ತೋರಿಸಿ ವಿದ್ಯಾರ್ಥಿಗಳೇ…

ಇತ್ತೀಚಿನ ಸುದ್ದಿ

ಗಣರಾಜ್ಯೋತ್ಸವ ಪರೇಡ್‌ ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ನಿರಾಕರಣೆ: ಮಂಗಳೂರಿನಲ್ಲಿ ಸ್ವಾಭಿಮಾನ ನಡಿಗೆ

26/01/2022, 17:51

ಮಂಗಳೂರು(reporterkarnataka.com):  ಕೇರಳ ಸರಕಾರ ಗಣರಾಜ್ಯೋತ್ಸವ ಪರೇಡ್‌ಗೆ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ‘ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ’ ಬುಧವಾರ ನಡೆಯಿತು.


ನಗರದ ಕಂಕನಾಡಿ ಗರೋಡಿ ಕ್ಷೇತ್ರದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಕ್ಷೇತ್ರದ ಅರ್ಚಕರು ಪೂಜೆ ಸಲ್ಲಿಸುವ ಮೂಲಕ ಸ್ವಾಭಿಮಾನ ನಡಿಗೆಗೆ ಚಾಲನೆ ನೀಡಲಾಯಿತು. ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಉಪಸ್ಥಿತಿಯಲ್ಲಿ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು.ಜಾಥಾ ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಜನಾರ್ಧನ ಪೂಜಾರಿ ಮಾರ್ಗದರ್ಶನದಲ್ಲಿ ನಡೆಯುವ ಈ ನಡಿಗೆ ಇದು ರಾಜಕೀಯ ಪ್ರೇರಿತವಾದ ಹೋರಾಟ ಅಲ್ಲ ಸ್ವಾಭಿಮಾನದ ನಡಿಗೆ. ಪಕ್ಷ, ಧರ್ಮ, ಜಾತಿ ಬೇಧ ಮರೆತು ಹಳದಿ ಶಾಲಿನ ಗೌರವದೊಂದಿಗೆ ನಡೆಯುತ್ತಿದೆ ಎಂದರು.ಶಾಸಕ ಯು.ಟಿ ಖಾದರ್ ಮತ್ತಿರರು ಭಾಗಿಯಾಗಿದ್ದರು.

ಜಾಥಾದಲ್ಲಿ ಘೋಷಣೆಗಳಿರುವುದಿಲ್ಲ. ಯಾರ ವಿರುದ್ಧವೂ ಧಿಕ್ಕಾರ ಕೂಗಲು ಅವಕಾಶವಿಲ್ಲ. ಭಾಗವಹಿಸುವ ವಾಹನಗಳು ನಾರಾಯಣಗುರುಗಳು ಶಾಂತಿಯ ಸಂಕೇತವಾಗಿ ನೀಡಿರುವ ಹಳದಿ ಪತಾಕೆಯನ್ನು ಹಾಗೂ ಭಾಗವಹಿಸುವ ನಾರಾಯಣ ಗುರುಗಳ ಅನುಯಾಯಿಗಳು ಹಳದಿ ಶಾಲು ಮಾತ್ರ ಧರಿಸಲು ಅವಕಾಶವಿರುತ್ತದೆ ಸಂಘಟಕರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು