10:28 AM Saturday20 - April 2024
ಬ್ರೇಕಿಂಗ್ ನ್ಯೂಸ್
ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ

ಇತ್ತೀಚಿನ ಸುದ್ದಿ

ಟೈಲರ್ ಕ್ಷೇಮ ನಿಧಿ ಮಂಡಳಿ ರಚನೆ: ಮುಖ್ಯಮಂತ್ರಿಗೆ ಶಾಸಕ‌ ವೇದವ್ಯಾಸ ಕಾಮತ್ ಮನವಿ

22/01/2022, 21:47

ಬೆಂಗಳೂರು(reporterkarnataka.com) : ಕರ್ನಾಟಕ ರಾಜ್ಯದಾದ್ಯಂತ ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಸ್ತ್ರೀ – ಪುರುಷ ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸಲು ಟೈಲರ್ ಕ್ಷೇಮ ನಿಧಿ ಮಂಡಳಿಯನ್ನು ರಚಿಸುವಂತೆ ಶಾಸಕ ಕಾಮತ್ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. 

ಈ ಕುರಿತು ಹೇಳಿಕೆ ನೀಡಿರುವ‌ ಶಾಸಕ ಕಾಮತ್, ಕರ್ನಾಟಕ ಟೈಲರ್ ಅಸೋಸಿಯೇಷನ್ ನನಗೆ ಸಲ್ಲಿಸಿದ ಮನವಿಯನ್ವಯ ಮುಖ್ಯಮಂತ್ರಿಗಳಿಗೆ ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸುವಂತೆ ಮನವಿ ಸಲ್ಲಿಸಿದ್ದೇನೆ. ಭವಿಷ್ಯ ನಿಧಿ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು ಮತ್ತು ಆರೋಗ್ಯ ವಿಮೆ ಜಾರಿಗೊಳಿಸುವುದು, ಈ ವರೆಗೆ ಹಣ ಸಂದಾಯ ಮಾಡಿದ 57 ವರ್ಷ ತುಂಬಿದ ಎಲ್ಲಾ ಎನ್.ಪಿ.ಎಸ್ ಲೈಟ್ ಫಲಾನುಭವಿಗಳ ನಿವೃತ್ತಿ ವೇತನ ಘೋಷಿಸುವಂತೆ, ಹೊಲಿಗೆ ಕೆಲಸಗಾರರ ಹೆಣ್ಣು ಮಕ್ಕಳಿಗೆ ವಿವಾಹ ಧನ ಮತ್ತು ಹೆರಿಗೆ ಭತ್ಯೆ ನೀಡುವುದು, ಹೊಲಿಗೆ ಕೆಲಸಗಾರರ ಮಕ್ಕಳ ವಿಧ್ಯಾರ್ಥಿ ವೇತನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ‌ ಸಲ್ಲಿಸಿದ್ದೇನೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು