11:05 AM Wednesday18 - May 2022
ಬ್ರೇಕಿಂಗ್ ನ್ಯೂಸ್
ಉಳ್ಳಾಲ: ಮಳೆಗೆ ಕಿನ್ಯಾ ಬೆಳರಿಂಗೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿತ ವಿಜಯನಗರ ಪೂಜಾರಹಳ್ಳಿ ತಾಂಡ: ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಗಾರೆ ಪಾಠ.!? ಮಧುಗುಂಡಿ: 2019ರ ಮಹಾಮಳೆ ಸಂತ್ರಸ್ತರಿಗೆ ಸರಕಾರದಿಂದ ಇನ್ನೂ ಸಿಕ್ಕಿಲ್ಲ ಮನೆಭಾಗ್ಯ! ಬಡವರ ಅನ್ನಕ್ಕೂ ಕನ್ನ: ಇಂದಿರಾ ಕ್ಯಾಂಟೀನ್ ಊಟ ಹೋಟೆಲ್ ಗಳಿಗೆ ಸಪ್ಲೈ: ದಿನಕ್ಕೆ… ಕಾಫಿನಾಡ ಬಯಲು ಸೀಮೆಯಲ್ಲಿ ಭಾರಿ ಮಳೆ ಅಬ್ಬರ: ತರೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ 2… ಮೂಡಿಗೆರೆ: ರಸ್ತೆಗೆ ಉರುಳಿದ ಬೃಹತ್ ಮರ; 2 ತಾಸು ಸಂಚಾರ ಬಂದ್; ಕಿಮೀಗಟ್ಟಲೆ… ಕರ್ನಾಟಕದಿಂದ ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ?: ರಾಜ್ಯದಿಂದ ಈ ಹಿಂದೆ ಇಂದಿರಾ, ಸೋನಿಯಾ… ಕೇರಳದ ಟೊಮೆಟೋ ಜ್ವರ: ಕೊಡಗಿನಲ್ಲಿ ಮುನ್ನೆಚ್ಚರಿಕಾ ಕ್ರಮ; ಗಡಿಯಲ್ಲಿ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಕೆಎಸ್ಸಾರ್ಟಿಸಿ ಬಸ್ ಪಾಸ್ ಕುರಿತು ಗೊಂದಲ ಬೇಡ: ಹಳೆ ಪಾಸ್ ತೋರಿಸಿ ವಿದ್ಯಾರ್ಥಿಗಳೇ… ಕೊಟ್ಟಿಗೆಹಾರದಲ್ಲಿ ಯೂನಿವರ್ಸಲ್  ಚೆಕ್‍ಪೋಸ್ಟ್ ಗೆ ಚಿಂತನೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ 6ರಿಂದ 8ನೇ ತರಗತಿ ಶಿಕ್ಷಕ ಹುದ್ದೆಗೆ ಪದವಿ ಕಡ್ಡಾಯ: ಸರಕಾರದ ಕರಡು ನಿಯಮ ಪ್ರಕಟ

22/01/2022, 12:06

ಬೆಂಗಳೂರು(reporterkarnataka.com):

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ 6ರಿಂದ 8 ನೇ ತರಗತಿ ಶಿಕ್ಷಕ ಹುದ್ದೆಗಳಿಗೆ ಪದವಿ ಕಡ್ಡಾಯ ಸೇರಿದಂತೆ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ರಾಜ್ಯ ಸರ್ಕಾರ ಕರಡು ನಿಯಮಾವಳಿ ಪ್ರಕಟಿಸಿದೆ.

ಸರ್ಕಾರಿ ಶಾಲೆಗಳಲ್ಲಿನ 6-8 ನೇ ತರಗತಿ ಶಿಕ್ಷಕ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಫಲಿತಾಂಶದ ಶೇ.50ರಷ್ಟು ಅಂಕ, ಅರ್ಜಿ ಸಲ್ಲಿಸಲು ಅರ್ಹತೆಗಾಗಿ ಪ್ರತಿ ವರ್ಷ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷಾ (TET) ಫಲಿತಾಂಶದ ಶೇ. 20 ರಷ್ಟು ಅಂಕ, ಪದವಿಯ ಶೇ. 20ರಷ್ಟು ಮತ್ತು ಬಿ.ಇಡಿ. ಡಿಎಡ್ ಸೇರಿದಂತೆ ಅರ್ಹ ಶಿಕ್ಷಕರ ಶಿಕ್ಷಣದ ಶೇ. 10 ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ನೇಮಕಗೊಂಡವರಿಗೆ 14,550 ರಿಂದ 26,700 ರೂ.ವರೆಗೆ ಮೂಲ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

ಸರ್ಕಾರಿ ಶಾಲೆಗಳಲ್ಲಿನ 6-8 ನೇ ತರಗತಿ ಶಿಕ್ಷಕರಾಗಲು ಇನ್ಮುಂದೆ ಪದವಿಯಲ್ಲಿ ಕಡ್ಡಾಯವಾಗಿ ಸೇ. 50 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಯಾವುದೇ ಭಾಷಾ ವಿಷಯವನ್ನು ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡಿರಬೇಕು. ಜೊತೆಗೆ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ,ಭೂಗೋಳ ಶಾಸ್ತ್ರ ಈ ಯಾವುದಾದರೂ ಒಂದು ವಿಷಯವನ್ನು ಮತ್ತೊಂದು ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡಬೇಕು ಎಂದು ಕರಡು ನಿಯಮಾವಳಿಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು