8:38 PM Friday19 - April 2024
ಬ್ರೇಕಿಂಗ್ ನ್ಯೂಸ್
ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ…

ಇತ್ತೀಚಿನ ಸುದ್ದಿ

ಶಿಕ್ಷಣಕ್ಕೆ ಕುತ್ತು ತಂದ ಕೊರೊನಾ: ಶಾಲಾ – ಕಾಲೇಜಿನ ಕಥೆಯೇನು!?……

29/11/2021, 22:14

2019ರ ಸಮಯ ವಿಶ್ವದೆಲ್ಲೆಡೆ ಎಲ್ಲವೂ ಚೆನ್ನಾಗಿತ್ತು. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹೀಗೆ ಇನ್ನೂ ಅನೇಕ ಚಟುವಟಿಕೆಗಳು ಅದರ ಪಾಡಿಗೆ ವ್ಯವಸ್ಥಿತವಾಗಿ ನಡೆಯುತ್ತಿತ್ತು. ನವೆಂಬರ್ ತಿಂಗಳಲ್ಲಿ ಅದೆಲ್ಲಿಂದ ವಕ್ಕರಿಸಿತೋ  ಶನಿ. ಕೊರೋನಾ ರೂಪದಲ್ಲಿ ಚೀನಾದ ತವರೂರಿನಿಂದ ಬಂದು, ಇಡೀ ಜಗತ್ತನ್ನೇ ನಲುಗಿಸಿಬಿಟ್ಟಿತ್ತು. 

ಭಾರತವನ್ನು ಪ್ರವೇಶಿಸಿದ ಈ ವೈರಸ್ ಮಾರ್ಚ್  ತಿಂಗಳಿಂದ ತನ್ನ ಅಟ್ಟಹಾಸವನ್ನು ಪ್ರಾರಂಭಿಸಿತು. ಇದರ ನಿಯಂತ್ರಣಕ್ಕಾಗಿ ಹೇರಿದ ಲಾಕ್ಡೌನ್  ತಡೆಗೋಡೆ ಎಲ್ಲಾ ಕ್ಷೇತ್ರದ ಮೇಲೆ ಪರಿಣಾಮ ಬೀರಿತು. ಶಿಕ್ಷಣ ಕ್ಷೇತ್ರವು ಇದರಿಂದ ಹೊರತಾಗಿಲ್ಲ, ಅಂದಿನಿಂದ ಅಸ್ತವ್ಯಸ್ತವಾದ ಶಿಕ್ಷಣ ಕ್ಷೇತ್ರವು ಇವತ್ತಿನವರೆಗೂ ಪೂರ್ಣ ವ್ಯವಸ್ಥಿತ ರೂಪ ಪಡೆದಿಲ್ಲ. ಎಲ್ಲಾ ಶೈಕ್ಷಣಿಕ ಚಟುವಟಿಕೆಗಳು ಸ್ತಬ್ಧವಾಯಿತು. ಪೂರ್ವ ಪ್ರಾಥಮಿಕ, ಪ್ರಾಥಮಿಕ,  ಪ್ರೌಢ ಶಿಕ್ಷಣ,  ಕಾಲೇಜು ಶಿಕ್ಷಣ ಉನ್ನತ ಶಿಕ್ಷಣ ಎಲ್ಲ ರೀತಿಯ ವೃತ್ತಿಪರ ಶಿಕ್ಷಣ ಕೇಂದ್ರಗಳು ವಿದ್ಯಾರ್ಥಿಗಳಿಲ್ಲದೆ ಬಣ ಗುಟ್ಟುತ್ತಿದ್ದವು. ನಿಧಾನವಾಗಿ ಉನ್ನತ ಶಿಕ್ಷಣ ವ್ಯವಸ್ಥೆಯು ಆನ್ ಲೈನ್ ಮಾದರಿಯಲ್ಲಿ ಪುನರಾರಂಭಗೊಂಡಿತು.  

ಅಕ್ಷರ ಕಲಿಯದ ಪುಟ್ಟ  ಪುಟ್ಟ ಕಂದಮ್ಮಗಳು. ಅದಾಗ ತಾನೇ ಶಾಲೆಯ ಮೆಟ್ಟಿಲೇರಿದ 5,6 ವರ್ಷದ ಮಕ್ಕಳು,ಪ್ರಾಥಮಿಕ ಪ್ರೌಢ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಅಯೋಮಯವಾಯಿತು. 

ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗೆ ಶಿಕ್ಷಣ ನಿರಂತರತೆಯನ್ನು ಕಾಯ್ದುಕೊಳ್ಳಲು ದೂರದರ್ಶನ,  ಚಂದನ ವಾಹಿನಿಗಳಲ್ಲಿ “ಸಂವೇದ ಕಾರ್ಯಕ್ರಮದ ಮೂಲಕ ಪಾಠಗಳನ್ನು ಪ್ರಾರಂಭಿಸಿತು. 

ಇದರ ಜೊತೆಗೆ ವಿದ್ಯಾಗಮವೆನ್ನುವ ವಿನೂತನ ಕಾರ್ಯಕ್ರಮದ ಮೂಲಕ  ವಿದ್ಯಾರ್ಥಿಗಳ ಬಳಿಗೆ  ಶಿಕ್ಷಕರು ತೆರಳಿ ಬೋಧಿಸುವ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು ಕಾರಣಾಂತರಗಳಿಂದ ಈ ಯೋಜನೆಯು ರದ್ದಾಯಿತು. ಶಿಕ್ಷಕರು ಆನ್ ಲೈನ್ ಅಥವಾ ಮುದ್ರಿತ ಪಾಠಗಳನ್ನು ವಾಟ್ಯಾಪ್ ನಂತಹ ಜಾಲತಾಣಗಳ ಮೂಲಕ ಬೋಧಿಸಲು ಶ್ರಮ ಪಡುತ್ತಿದ್ದರು.


ಸುಮಾರು ಒಂದುವರೆ ವರ್ಷಗಳ ಕಾಲ ಶಾಲೆ ಶಿಕ್ಷಕರ ನೇರ ಸಂಪರ್ಕದಿಂದ ವಂಚಿತರಾದ ಮಕ್ಕಳು ಸಪ್ಟೆಂಬರ್ 2021ರಲ್ಲಿ ಕೊರೋನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ವಿದ್ಯಾ ದೇಗುಲಕ್ಕೆ ಕಾಲಿಟ್ಟರು. ಶಾಲೆ ಪ್ರಾರಂಭವಾಯಿತು ಎನ್ನುವ ಸಂತಸದಲ್ಲಿದ್ದ ಶಿಕ್ಷಕರಿಗೆ ಕಾದಿತ್ತು, ವಿದ್ಯಾರ್ಥಿಗಳ  ಹದಗೆಟ್ಟ ಮಾನಸಿಕ ಸ್ಥಿತಿ. ಪಾಠವನ್ನು ಗ್ರಹಿಸಲು, ಓದಲು ಚಡಪಡಿಸುವ ವಿದ್ಯಾರ್ಥಿಗಳ ಗ್ರಹಿಕೆ ಸಾಮರ್ಥ್ಯ ಬರವಣಿಗೆ ಕೌಶಲ್ಯ ವಾಕ್ಚತುರ್ಯ, ಇವೆಲ್ಲವೂ ತುಂಬಾ ಕ್ಷೀಣಿಸಿ ಬಿಟ್ಟಿವೆ. ಮಾನಸಿಕ ದೈಹಿಕ ಸಾಮರ್ಥ್ಯಗಳು ಕೂಡ ಕಡಿಮೆಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಮೊಬೈಲ್ ಎಂಬ ಮಾಯಾಜಾಲದ ಗುಲಾಮರಾಗಿದ್ದಾರೆ. ಅದರಿಂದ ಹೊರಬರಲಾಗದೆ ನರಳಾಡುತ್ತಿದ್ದಾರೆ. ಹೆತ್ತವರು ಮಕ್ಕಳನ್ನು ಮೊಬೈಲ್ ದಾಸ್ಯದಿಂದ ಮುಕ್ತಗೊಳಿಸಲು ಚಡಪಡಿಸುತ್ತಿದ್ದಾರೆ. ಸಾಮಾಜಿಕ ಜಾಲ ತಾಣಕ್ಕೆ ಅಂಟಿಕೊಂಡಿರುವ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. 

ಒಟ್ಟಿನಲ್ಲಿ ಕೊರೋನ ವೈರಸ್ ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಅನಾಹುತಗಳನ್ನು ಮಾಡಿದೆ. ವಿದ್ಯಾರ್ಥಿಗಳ ಮೇಲಾಗುವ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಶಿಕ್ಷಕರು ಪೋಷಕರು ಸೂಕ್ತ ಮಾರ್ಗದರ್ಶನದ ಮೂಲಕ ಹೆಚ್ಚಿನ ಕ್ರಮ,ಜವಾಬ್ದಾರಿ ವಹಿಸಬೇಕಾಗಿದೆ ವಿದ್ಯಾರ್ಥಿ ಜೀವನವನ್ನು ಮತ್ತೆ  ಸದೃಢ ಗೊಳಿಸಬೇಕಾಗಿದೆ. 

ಶಿಕ್ಷಕರು ಪೋಷಕರು ಪ್ರಸ್ತುತ ಇರುವ ಸನ್ನಿವೇಶವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದರೆ ಮತ್ತೆ ವಕ್ಕರಿಸಿದ ರೂಪಾಂತರಿ  ವೈರಸ್. ಮತ್ತೊಮ್ಮೆ ಜಗತ್ತಿನೆಲ್ಲೆಡೆ  ಜ್ಞಾನದ ಗಣಿಗಳಾಗ ಬೇಕಾದ ವಿದ್ಯಾರ್ಥಿಗಳ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ.

✍️

ಇತ್ತೀಚಿನ ಸುದ್ದಿ

ಜಾಹೀರಾತು