1:02 AM Thursday20 - January 2022
ಬ್ರೇಕಿಂಗ್ ನ್ಯೂಸ್
ಲಾಕ್ ಡೌನ್, ಕರ್ಫ್ಯೂ ವಿಧಿಸುವುದಾಗಿದ್ದರೆ ವ್ಯಾಕ್ಸಿನ್ ಏಕೆ ನೀಡಬೇಕಿತ್ತು: ಸಂಸದ ಪ್ರತಾಪ್ ಸಿಂಹ… ಇಬ್ಬರು ಅಂತರ್ ಜಿಲ್ಲಾ ಚೋರರ ಬಂಧನ: 8 ಲಕ್ಷ ರೂ. ಮೌಲ್ಯದ ವಾಹನಗಳ… ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಸಖರಾಯಪಟ್ಟಣ ರಥೋತ್ಸವ ಆಚರಣೆ: ಅರ್ಚಕರು ಸೇರಿ 9 ಮಂದಿ ವಿರುದ್ಧ ಕೇಸ್ ಹೋಂ ಐಸೋಲೇಷನ್’ ಆಗಿರೋರಿಗೆ ಇನ್ಮುಂದೆ  ‘ಮೆಡಿಸಿನ್ ಕಿಟ್’ ವಿತರಣೆ:  ‘ಔಷಧಿಗಳ ಪಟ್ಟಿ ಹೀಗಿದೆ… ಖಾಸಗಿ ಮೆಡಿಕಲ್ ಕಾಲೇಜಿನ ಪ್ರಯೋಗ ಶಾಲೆಯೇ ಸರಕಾರಿ ವೆನ್ಲಾಕ್ ಅಸ್ಪತ್ರೆ?: ಬಡ ರೋಗಿಗಳ… ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು!: ಸಖರಾಯಪಟ್ಟಣದ ಶಕುನ ರಂಗನಾಥ ಸ್ವಾಮಿಗೆ ನಡೆಯಿತು… ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕೆಮ್ಮಿದ್ರೆ ಕೊರೊನಾ ಅನ್ನೋ ಕಾಲವಿದು!; ಆದರೆ ಹೆದ್ದಾರಿ ಪ್ರಾಧಿಕಾರ 10 ಹಳ್ಳಿಗಳನ್ನೇ ಕೆಮ್ಮು… ಕಾಫಿನಾಡಿನ ಖಾಕಿಗಳಿಗೆ ಕೊರೊನಾ ಕಾಟ: 27 ಮಂದಿ ಪೊಲೀಸರಿಗೆ ಹೋಂ ಐಸೋಲೇಶನ್! ಕೋಸ್ಟಲ್ ವುಡ್ ನ ಬಹು ನಿರೀಕ್ಷಿತ ತುಳು ಚಿತ್ರ  ‘ಸರ್ಕಸ್’ ನ ಚಿತ್ರೀಕರಣ…

ಇತ್ತೀಚಿನ ಸುದ್ದಿ

ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು: ಶಾಸಕ ವೇದವ್ಯಾಸ ಕಾಮತ್

26/11/2021, 20:47

ಮಂಗಳೂರು(reporterkarnataka.com): ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಭವಿಷ್ಯವನ್ನು ಚಿಂತಿಸಿ ಬರೆದ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯರೂ ಆಧರಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ ಬಿಜೆಪಿ ಎಸ್.ಸಿ. ಮೋರ್ಚಾದ ವತಿಯಿಂದ ನಡೆದ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರದ ಭಾರತವು ಹೀಗಿರಬೇಕು ಎನ್ನುವ ಪರಿಕಲ್ಪನೆಯೊಂದಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಿದ್ಧಪಡಿಸಿದ ಸಂವಿಧಾನವನ್ನು ಗೌರವಿಸುವ ಕಾರ್ಯ ಆಗಬೇಕಿದೆ. ದೇಶದ ಪ್ರಗತಿಗೆ ಸಂವಿಧಾನವೆಂಬ ಪವಿತ್ರ ಗ್ರಂಥವು ದಾರಿದೀಪವಾಗಿದೆ ಎಂದು ಹೇಳಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ, ರಾಷ್ಟ್ರೀಯ ಅಂತಃ ಸತ್ವವನ್ನು ಅರಿತು ಡಾ. ಬಿ.ಆರ್ ಅಂಬೇಡ್ಕರ್ ಅವರ ನೀಡಿರುವ ಸಂವಿಧಾನವು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವಲ್ಲಿ ಮಹತ್ತರದ ಪಾತ್ರ ವಹಿಸಿದೆ. ಇಂದಿನ ದಿನ ದೇಶಕ್ಕೆ ಸಂವಿಧಾನವನ್ನು ಸಮರ್ಪಿಸುವ ಮೂಲಕ ರಾಷ್ಟ್ರದ ಅಭ್ಯುದಯಕ್ಕೆ ಮಹತ್ತರದ ಕೊಡುಗೆ ನೀಡಿದ ಅಂಬೇಡ್ಕರ್ ಅವರನ್ನು ಭಾರತವು ಎಂದಿಗೂ ಮರೆಯದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ‌ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೀಲಾವತಿ ಪ್ರಕಾಶ್, ಕಾರ್ಪೋರೇಟರ್ ಪೂರ್ಣಿಮಾ, ಭರತ್, ಗಣೇಶ್ ಕುಲಾಲ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ‌ ಕಾರ್ಯದರ್ಶಿ ರೂಪಾ. ಡಿ ಬಂಗೇರ, ಉಪಾಧ್ಯಕ್ಷರಾದ ಕಿರಣ್ ರೈ,  ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ವಿನಯ್ ನೇತ್ರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಿ ಎಲ್ತಿಮಾರ್, ಬೋಜರಾಜ್ ಕೋಟ್ಯಾನ್, ಎಸ್.ಸಿ ಮೋರ್ಚಾ ಮಂಡಲಾಧ್ಯಕ್ಷ ರಘುವೀರ್ ಬಾಬುಗುಡ್ಡೆ, ಬಿಜೆಪಿ ಮುಖಂಡರಾದ ಮಂಗಳಾ ಆಚಾರ್, ಸಂದೇಶ್ ಗಾಂಧಿನಗರ, ಪ್ರಜ್ವಲ್ ಚಿಲಿಂಬಿ, ರಾಧಾಕೃಷ್ಣ ಕಂಕನಾಡಿ, ಸಂದೀಪ್ ಬೋಳೂರು, ಮೇಘರಾಜ್ ಬಲ್ಲಾಳ್ ಭಾಗ್, ಸುನಂಧ ಕೊಟ್ಟಾರ ಕ್ರಾಸ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು