2:33 PM Thursday2 - December 2021
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ… ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು;… ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಸಾಲು ಸಾಲಾಗಿ ಆಸ್ಪತ್ರೆ ಸೇರುತ್ತಿರುವ ಪಚ್ಚನಾಡಿ ತ್ಯಾಜ್ಯ ದುರಂತ ಸಂತ್ರಸ್ತರು: ಜಿಲ್ಲಾಧಿಕಾರಿ ಇತ್ತ… ನಾದಬ್ರಹ್ಮ ಹಂಸಲೇಖಗೆ ಹೈಕೋರ್ಟ್ ಬಿಗ್‌ ರಿಲೀಫ್ : ಪ್ರಕರಣ ದಾಖಲಾತಿಗೆ ತಡೆಯಾಜ್ಞೆ; ದೂರುದಾತರಿಗೆ… ಚಿತ್ರದುರ್ಗ: ಕಾರು- ಬೈಕ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು; ಇನ್ನೊರ್ವ ಗಂಭೀರ… ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಚಿತ್ರದುರ್ಗದಲ್ಲಿ ಸಿದ್ದು… ಕಡಲನಗರಿಯಲ್ಲಿ ಮತ್ತೆ ತಲೆ ಎತ್ತಿದ ಗ್ಯಾಂಗ್ ವಾರ್; ಮಾರಕಾಸ್ತ್ರದಿಂದ ದಾಳಿ; ಓರ್ವ ಗಂಭೀರ ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಆರೋಪಿ ಡಾ. ರತ್ನಾಕರ್ ಗೆ…

ಇತ್ತೀಚಿನ ಸುದ್ದಿ

ಆರೋಗ್ಯ ಇಲಾಖೆಯಲ್ಲೊಬ್ಬ ಕಚ್ಚೆ ಹರುಕ ವೈದ್ಯ!!: ಗುತ್ತಿಗೆ ಸಿಬ್ಬಂದಿ ಯುವತಿಯರ ಜತೆಗಿನ ರಾಸಲೀಲೆ ವೀಡಿಯೊ ವೈರಲ್ !

26/11/2021, 12:43

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಾಜಕಾರಣಿಗಳ ಸೆಕ್ಸ್ ವೀಡಿಯೊ ರಾಜ್ಯದಲ್ಲಿ ಆಗಾಗ ಸದ್ದು ಮಾಡುವುದನ್ನು ನಾವು ಕೇಳಿದ್ದೇವೆ. ಕಾಮತೀಟೆಯಿಂದ ಅಧಿಕಾರ ಕಳೆದುಕೊಂಡವರನ್ನೂ ನಾವು ಕಂಡಿದ್ದೇವೆ. ಇನ್ನೂ ಹಲವು ರಾಜಕಾರಣಿಗಳು ಕದ್ದು ಮುಚ್ಚಿ ನಡೆಸುತ್ತಿರುವ ವ್ಯವಹಾರ ಕೂಡ ಜನಸಾಮಾನ್ಯರಿಗೂ ಗೊತ್ತಿದೆ. ಇದರ ನಡುವೆ ಅಧಿಕಾರಿಗಳ ಕಾಮದ ಹಸಿವು ಕೂಡ ಆಗೊಮ್ಮೆ ಈಗೊಮ್ಮೆ ಇಣುಕಿ ಮರೆಯಾಗುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಅಂತಹದ್ದೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ.

ದ.ಕ. ಆರೋಗ್ಯ ಇಲಾಖೆಯ ವೈದ್ಯನೊಬ್ಬನ ರಾಸಲೀಲೆಯ ಕಥೆ ಇದು. ವೈದ್ಯನಾಗಿರುವ ಡಾ.ರತ್ನಾಕರನ  ಕಾಮಕಾಂಡದ ಕರ್ಮ ಕಥೆ ಇದೀಗ ಒಂದೊಂದಾಗಿ ಬಿಚ್ಚಿಕೊಳ್ಳಲಾರಂಭಿಸಿದೆ.

ಇದನ್ನೆಲ್ಲ ಬರೆಯಲು ‘ರಿಪೋರ್ಟರ್ ಕರ್ನಾಟಕ’ಕ್ಕೂ ಮುಜುಗರ ಆಗುತ್ತಿದೆ. ಆದರೆ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಗಳ ದುರ್ನಡತೆ ಬಗ್ಗೆ ವರದಿ ಮಾಡುವ ಅನಿವಾರ್ಯತೆಯೂ ನಮಗಿದೆ.

ಸರಕಾರಿ ಆಸ್ಪತ್ರೆಯ ಆವರಣದ ಕೊಠಡಿಯಲ್ಲೇ ಈತ ಗುತ್ತಿಗೆ ಸಿಬ್ಬಂದಿ ಯುವತಿಯ ಜತೆ ಸರಸ ಸಲ್ಲಾಪ ನಡೆಸುತ್ತಾನೆ. ಮುಖ್ಯಸ್ಥ ಹುದ್ದೆಯನ್ನೇ ಬಂಡಾವಳವಾಗಿಸಿಕೊಂಡು ತಿಂಗಳಿಗೆ 10 ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುವ ಹೊರ ಗುತ್ತಿಗೆ ಸಿಬ್ಬಂದಿಯನ್ನು ಹೆದರಿಸಿ, ಬೆದರಿಸಿ ತನ್ನ ತೀಟೆಯನ್ನು ತೀರಿಸಿಕೊಳ್ಳುತ್ತಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ. ಈತನ ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯವನ್ನು ದೂರು ಕೊಡಲು ಮುಂದಾದ ಯುವತಿಯರಿಗೆ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಡಾ. ರತ್ನಾಕರ್ ರಾಸಲೀಲೆಯ ಹಲವು ವಿಡಿಯೋಗಳು ವೈರಲ್ ಆಗಿದೆ.

ಆಸ್ಪತ್ರೆಯ 9 ಮಂದಿ ಮಹಿಳಾ ಸಿಬ್ಬಂದಿ ಜತೆಗೆ ರತ್ನಾಕರ್ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ತನ್ನ ತೊಡೆಯ ಮೇಲೆ ಓರ್ವ ಮಹಿಳೆಯನ್ನು ಕೂರಿಸಿದ್ದಾನೆ. ಮಹಿಳಾ ಸಿಬ್ಬಂದಿ ಮೂಲಕ ರತ್ನಾಕರ್ ಪಾದ ಸೇವೆ ಮಾಡಿದ್ದಾನೆ. ಇಬ್ಬರು ಮಹಿಳಾ ಸಿಬ್ಬಂದಿಯನ್ನು ಕೂರಿಸಿಕೊಂಡು ರತ್ನಾಕರ್ ಆಸ್ಪತ್ರೆಯಲ್ಲಿಯೇ ರಂಗಿನಾಟವಾಡಿದ್ದಾನೆ. 

ಈ ಹಿಂದೆಯೂ ಡಾ. ರತ್ನಾಕರ್ ಸಸ್ಪೆಂಡ್ ಆಗಿದ್ದರು. ಆದರೆ ಸರ್ಕಾರದ ಆದೇಶಕ್ಕೆ ತಡೆ ತಂದು ಮತ್ತೆ ಅದೇ ಕೃತ್ಯ ಮುಂದುವರಿಸುತ್ತಿದ್ದಾನೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದವನಾದ ರತ್ನಾಕರ್, ಮಂಗಳೂರಿನ ದೇರಳಕಟ್ಟೆಯಲ್ಲಿ ವಾಸವಾಗಿದ್ದಾನೆ. ಕಿರುಕಳ ಪ್ರಕರಣದಲ್ಲಿಯೇ ಭಟ್ಕಳಕ್ಕೆ ವರ್ಗಾವಣೆಯಾಗಿ ಮತ್ತೆ ಈಗ ಮಂಗಳೂರಿಗೇ ಬಂದಿದ್ದಾನೆ ಎನ್ನಲಾಗಿದೆ.

ಆರೋಗ್ಯ ಇಲಾಖೆ ವೈದ್ಯ ರತ್ನಾಕರ ಸರ್ಕಾರದ ಹಣದಲ್ಲೇ ಕಚೇರಿಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ನಿತ್ಯ ಸಾವಿರಾರು ರೂ. ಮೊತ್ತದ ಚಹಾ, ತಿಂಡಿ ಖರೀದಿ ಮಾಡುತ್ತಿದ್ದ. ಚಹಾ, ತಿಂಡಿ ಹೆಸರಲ್ಲಿ 10 ರಿಂದ 12 ಸಾವಿರ ರೂ. ಬಿಲ್ ಮಾಡುತ್ತಿದ್ದ. ಅಲ್ಲದೇ ಮಾನಸಿಕ ರೋಗಗಳ ವಿಭಾಗದ ಅಧಿಕಾರಿಯಾಗಿದ್ದಾಗ ಕಚೇರಿಯ ‌ಮಹಿಳಾ ಸಿಬ್ಬಂದಿಗೆ ಭರ್ಜರಿ ಬಾಡೂಟ ಕೊಡಿಸುತ್ತಿದ್ದ.

ರತ್ನಾಕರ್ ಮಹಿಳಾ ಸಿಬ್ಬಂದಿ ಜತೆ ಆಗಾಗ ಟ್ರಿಪ್ ಹೋಗುತ್ತಿದ್ದ. ಈ ಸಂದರ್ಭದಲ್ಲೂ ಆತ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ರತ್ನಾಕರ ಕಿರುಕುಳದಿಂದ ನೊಂದ ಮಹಿಳೆಯರು ಆರೋಪಿ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು