9:05 PM Thursday2 - December 2021
ಬ್ರೇಕಿಂಗ್ ನ್ಯೂಸ್
ಸರ್ವಧರ್ಮಿಯರು ಸಂದರ್ಶಿಸುವ ಪುಣ್ಯ ಕ್ಷೇತ್ರ ಧರ್ಮಸ್ಥಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ… ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು;… ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಸಾಲು ಸಾಲಾಗಿ ಆಸ್ಪತ್ರೆ ಸೇರುತ್ತಿರುವ ಪಚ್ಚನಾಡಿ ತ್ಯಾಜ್ಯ ದುರಂತ ಸಂತ್ರಸ್ತರು: ಜಿಲ್ಲಾಧಿಕಾರಿ ಇತ್ತ… ನಾದಬ್ರಹ್ಮ ಹಂಸಲೇಖಗೆ ಹೈಕೋರ್ಟ್ ಬಿಗ್‌ ರಿಲೀಫ್ : ಪ್ರಕರಣ ದಾಖಲಾತಿಗೆ ತಡೆಯಾಜ್ಞೆ; ದೂರುದಾತರಿಗೆ… ಚಿತ್ರದುರ್ಗ: ಕಾರು- ಬೈಕ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು; ಇನ್ನೊರ್ವ ಗಂಭೀರ… ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಚಿತ್ರದುರ್ಗದಲ್ಲಿ ಸಿದ್ದು… ಕಡಲನಗರಿಯಲ್ಲಿ ಮತ್ತೆ ತಲೆ ಎತ್ತಿದ ಗ್ಯಾಂಗ್ ವಾರ್; ಮಾರಕಾಸ್ತ್ರದಿಂದ ದಾಳಿ; ಓರ್ವ ಗಂಭೀರ ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಕಣ್ಣಾರೆ ಕಂಡ ಪದ್ಮಶ್ರೀ: ಹತ್ತಾರು ಹಾಜಬ್ಬರು ನಮ್ಮ ನಡುವೆ ಹುಟ್ಟಿಬರಲಿ

20/11/2021, 22:46

ನವೆಂಬರ್ 14, 2021, ಮಕ್ಕಳ ದಿನಾಚರಣೆಯ ಸಂಭ್ರಮ. ಹೊರಗೆ ಜೋರಾಗಿ ಮಳೆ ಸುರಿಯುತ್ತಿತ್ತು. ನಮ್ಮ ಊರಿನ ಹೆಮ್ಮೆಯ ಪದ್ಮಶ್ರೀ ಪುರಸ್ಕೃತ ಹಾಜಬ್ಬ ರವರನ್ನು ಜೆಸಿಐ ಮಂಗಳಗಂಗೋತ್ರಿ ಘಟಕದ ವತಿಯಿಂದ ಭೇಟಿ ಮಾಡುವುದೆಂದು ಮೊದಲೇ ನಿರ್ಧರಿಸಲಾಗಿತ್ತು.

ಮಳೆಯ ಆರ್ಭಟ ನೋಡುವಾಗ ಕತ್ತಲಿನಲ್ಲಿ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲಿ ನಾನು  ಮುಳುಗಿದೆ. ಏನೇ ಆಗಲಿ ಅವರನ್ನು ಭೇಟಿ ಮಾಡುವುದಾಗಿ ದೃಢ ನಿಶ್ಚಯ ಮಾಡಿ ಅವರ ಮನೆಯಾದ ನ್ಯೂಪಡ್ಪು ಕಡೆಗೆ ನಮ್ಮ ಪ್ರಯಾಣ ಸಾಗಿತ್ತು.

ಅಂದಾಜು 06:45ಕ್ಜೆ ಅವರ ಮನೆಯ ದಾರಿ ತಲುಪಿದೆವು. ವರುಣರಾಯನ ಆರ್ಭಟ ಇನ್ನೂ ಜೋರಾಗಿತ್ತು. ಅದಾಗಲೇ ಕಟೀಲಿನಲ್ಲಿ ಸನ್ಮಾನ ಸಮಾರಂಭ ಮುಗಿಸಿ ಮನೆಗೆ ಬಂದಿದ್ದ ಹಾಜಬ್ಬರು. ಆ ಸುರಿಯುತ್ತಿರುವ ಮಳೆಯಲ್ಲಿ ಮನೆಯ ಜಗಲಿಯಲ್ಲಿ ನಮ್ಮನ್ನು ಎದುರುಗೊಂಡರು.

ಅವರ ಮನೆಯ ಅಂಗಳಕ್ಕೆ ಇಳಿದಾಗ ನಮಗೆ ಅದೇನೋ ಪುನೀತ ಭಾವ.ನಮ್ಮನ್ನು ನೋಡಿದ ತಕ್ಷಣ ಅದೇನು ಆದರಾತಿಥ್ಯ…..

ಅದೇ ಸರಳತೆ, ಅದೇ ನಿರ್ಲಿಪ್ತ ಭಾವ, ಅಹಂಕಾರ ಆಡಂಬರದ ಲವಲೇಶವೂ ಸುಳಿವಿಲ್ಲ..ಅದೇ ಪೂರ್ತಿ ಗುಂಡಿ ಹಾಕದ ಶರ್ಟು…

ಮನೆಯೊಳಗೆ ಬಂದ ತಕ್ಷಣ ಹಲವಾರು ಪ್ರಶಸ್ತಿಗಳು ನಮ್ಮ ಕಣ್ಣನ್ನು ಸೆಳೆದವು.

ನನ್ನ ಮನದಲ್ಲಿದ್ದ ಕುತೂಹಲ, ಆಸೆ ಎಂದರೆ ರಾಷ್ಟ್ರಪತಿಯವರು ಕೊಟ್ಟ ಪದ್ಮಶ್ರೀ ಪುರಸ್ಕಾರವನ್ನು ಕಣ್ಣಾರೆ ನೋಡಿ ಮುಟ್ಟಿ ನಮಸ್ಕರಿಸಬೇಕು ಎಂಬುದಾಗಿತ್ತು.

ಕೇವಲ ಟಿವಿಯಲ್ಲಿ ಮಾತ್ರ ಪದ್ಮಶ್ರೀ ಪುರಸ್ಕಾರದ ದೃಶ್ಯಾವಳಿ ನೋಡುತ್ತಿದ್ದ ನನಗೆ ಪದ್ಮಶ್ರೀಯನ್ನು ನೋಡಿದಾಗ ಆದ ಆನಂದ ಹೇಳತೀರದು.

ಹಾಜಬ್ಬರ ಪದ್ಮಶ್ರೀ ಪುರಸ್ಕಾರದ ಹಿಂದಿರುವ ಸಾಧನೆ ಮತ್ತು ಹಳ್ಳಿಯಿಂದ ದಿಲ್ಲಿಯವರೆಗೆ ಆದಂತಹ ಅನುಭವ ಕೇಳಿದಾಗ ರೋಮಾಂಚನವಾಯಿತು.

ಪ್ರಶಸ್ತಿಯ ಬಗ್ಗೆ ಎಂದಿಗೂ ಕನಸು ಕಾಣದೆ ತನ್ನ ಮಹದಾಸೆಯನ್ನು ಈಡೇರಿಸಲು ಪಣತೊಟ್ಟ ಸಾಮಾನ್ಯ ವ್ಯಕ್ತಿಗೆ ಇಂತಹ ಪುರಸ್ಕಾರ ಬಂದಾಗ ಅದರ ಮೌಲ್ಯ ಹೆಚ್ಚಾಗುತ್ತದೆ. ಪ್ರಶಸ್ತಿಗೆ ಹಣ ಶ್ರೀಮಂತಿಕೆ ಮುಖ್ಯವಲ್ಲ ಸಾಧಿಸಲೇಬೇಕೆಂಬ ಛಲ ಒಂದಿದ್ದರೆ ಸಾಕು ಎಂಬುದಕ್ಕೆ ಹಾಜಬ್ಬರೇ ಸಾಕ್ಷಿ.


ಹಾಜಬ್ಬರ ನಿರ್ಮಲ ಮನಸ್ಸು ಸರಳತೆ ಸಹೃದಯತೆ ಮುಗ್ಧತೆ ಸಾಧಿಸುವ ಛಲ ಅಭಿಮಾನಕ್ಕೆ ಶರಣು ಶರಣು. ಇಂತಹ ಹತ್ತಾರು ಹಾಜಬ್ಬರು ನಮ್ಮ ಭಾರತ ಮಾತೆಯ ಒಡಲಿನಲ್ಲಿ ಹುಟ್ಟಿಬರಲಿ ಎಂಬುದೇ ನಮ್ಮೆಲ್ಲರ ಆಶಯ.

ಇವರ ಜೊತೆ ಮಾತನಾಡುವಾಗ ನನಗೆ ಅನಿಸಿದ್ದು ಇಷ್ಟೇ ಇವರಿಂದ ಇನ್ನೂ ನಾನು ಎಷ್ಟೊಂದು ಕಲಿಯಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು