1:16 PM Saturday4 - December 2021
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ಗಂಜಿಗುಂಟೆ ಲಂಬಾಣಿ ತಾಂಡದಲ್ಲಿ ಹೆಚ್ಚುತ್ತಿದೆ ಬೀದಿ ನಾಯಿಗಳ ಕಾಟ: ಶ್ವಾನ ಕಡಿತಕ್ಕೆ ಯುವಕ ಬಲಿ ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ ಅಪಘಾತ: ಓರ್ವ ಸಿಬ್ಬಂದಿಗೆ ತೀವ್ರ… ಮಲೆನಾಡಲ್ಲಿ ಮತ್ತೆ ಮಳೆ ಅಬ್ಬರ: ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಕೃಷಿಕರು  ರಂಗಾಪುರ: ಇದು ಅಂಗನವಾಡಿ ಕಟ್ಟಡ ನಾ? ಅಥವಾ ಸಾರ್ವಜನಿಕ ಶೌಚಾಲಯ ನಾ? ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಹೆತ್ತವರು ಮದುವೆ ಮಾಡಿಸದ ಬೇಸರ: ನೇಣು ಬಿಗಿದು ಪ್ರೇಮಿಗಳು ಆತ್ಮಹತ್ಯೆ  ಸರ್ವಧರ್ಮಿಯರು ಸಂದರ್ಶಿಸುವ ಪುಣ್ಯ ಕ್ಷೇತ್ರ ಧರ್ಮಸ್ಥಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ… ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು;… ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್

ಇತ್ತೀಚಿನ ಸುದ್ದಿ

ನನ್ನ ಶಿಕ್ಷಕ ವೃತ್ತಿ ಮತ್ತು ಬೊಮ್ಮನಹಳ್ಳಿಯ ಮೇಘ ಹಾಗೂ ಚೇತನ್ ಎಂಬ ಶಿಷ್ಯಂದಿರು

14/11/2021, 11:02

ಸುಮಾರು 12 ವರ್ಷಗಳ ಹಿಂದೆ… ಸಿಇಟಿಯಲ್ಲಿ ಸೆಲೆಕ್ಟ್ ಆಗಿ ಸರ್ಕಾರಿ ಉದ್ಯೋಗ ಪಡೆದುಕೊಂಡು ಸರ್ಕಾರಿ ಉದ್ಯೋಗ ಎಂಬ ಖುಷಿಯಲ್ಲಿದ್ದ ನನಗೆ ಅಷ್ಟೇ ಆಘಾತಕ್ಕೊಳಗಾಗಿದ್ದೆ.ಅದೇನೆಂದರೆ ನನಗೆ ನೇಮಕಾತಿಯಾಗಿದ್ದು ನಾನು ಹುಟ್ಟಿ ಬೆಳೆದ ನನ್ನ ಜಿಲ್ಲೆ ಬಿಟ್ಟು ದೂರದ ಚಾಮರಾಜ ನಗರ ಜಿಲ್ಲೆಗೆ. ದೂರದ ಚಾಮರಾಜನಗರ ಜಿಲ್ಲೆಗೆ ಉದ್ಯೋಗಕ್ಕೆ ಹೋಗಲೋ ಬೇಡವೋ ಎಂಬ ಗೊಂದಲದಲ್ಲಿದ್ದ ನನಗೆ ನನ್ನ ಗಂಡ,  ಸ್ನೇಹಿತರ ಪ್ರೋತ್ಸಾಹ ಮಾತುಗಳಿಂದ ಕಟ್ಟಿ ಬಿದ್ದು, ಒಲ್ಲದ ಮನಸ್ಸಿನಿಂದ 6 ತಿಂಗಳ ಮಗುವನ್ನು ಮಡಿಲಲ್ಲಿ ಹೊತ್ತುಕೊಂಡು ದೂರದ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಸೇರಿಕೊಂಡೆ.

ಗುರುತು ಪರಿಚಯ ಇಲ್ಲದ ಊರೂ ಅರ್ಥವಾಗದ ಗ್ರಾಮೀಣ ಭಾಷೆ, ಒಗ್ಗದ ಹವಾಮಾನ ಇವೆಲ್ಲದರ ಮಧ್ಯೆ ನನಗೆ ಖುಷಿ  ಕೊಟ್ಟದ್ದು ನನ್ನ ಶಾಲೆಯ ಶಿಕ್ಷಕರು ಎಲ್ಲಕ್ಕಿಂತಲೂ ಮುಖ್ಯವಾಗಿ ಅಲ್ಲಿನ ವಿದ್ಯಾರ್ಥಿಗಳು. ಅದುವರೆಗೂ ಕನ್ನಡದಲ್ಲಿ ವಿಜ್ಞಾನ ಬೋಧಿಸದ ನನಗೆ sslc ಗೆ  ಕನ್ನಡದಲ್ಲಿ,ವಿಜ್ಞಾನ ಬೋಧಿಸದ ನನಗೆ, ಟೆಕ್ನಾಲಾಜಿ ಇಲ್ಲದ ಸಮಯದಲ್ಲಿ ಸವಾಲಾಗಿತ್ತು. ಹೇಗೆ ಬೋಧಿಸಲಿ ಅವರ ಭಾಷೆಯಲ್ಲಿ, ಮಕ್ಕಳಿಗೆ ಆಸಕ್ತಿ ಹೇಗೆ ಮೂಡಿಸಲಿ,ಸಾಲದಕ್ಕೆ ಪೋಷಕರ ಅಸಹಕಾರ. ಹೆಣ್ಣುಮಕ್ಕಳಿಗೆ ಬೇಗನೆ ಮದುವೆ ಮಾಡುವ ತವಕ, ಗಂಡು ಮಕ್ಕಳನ್ನು ಹೊಲದಲ್ಲಿ ದುಡಿಸುವ ಮನಸ್ಸಿರುವವರು. ಹೆಣ್ಣುಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕೆ ಕಳುಹಿಸುವ ಯೋಚನೆಯೂ ಇಲ್ಲ, ನಾನು ಮಾತ್ರ ಪ್ರಾಮಾಣಿಕವಾಗಿ ಸಾಧ್ಯವಾದಷ್ಟು ಪ್ರಯೋಗಗಳ ಮೂಲಕ  ವಾಟ್ಸಪ್ ಗಳಂತಹ ಟೆಕ್ನಾಲಜಿ ಆಗಿರಲಿಲ್ಲ. ವಿಜ್ಞಾನ ಬೋಧಿಸಲು ಪ್ರಯತ್ನಿಸಿದೆ. ನನ್ನ ಮೊದಲ ಪ್ರಯತ್ನದಲ್ಲೇ 102 ವಿದ್ಯಾರ್ಥಿ ಗಳಲ್ಲಿ 99 ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಪಾಸ್ ಆಗಿರುವುದು ನನಗೆ ಹೆಮ್ಮೆಯ ವಿಚಾರ. 

ಮೇಘ ಮತ್ತು ಚೇತನ್ ಕುಮಾರ್

ನನ್ನ ಸಮಸ್ಯೆಗಳ ಮಧ್ಯೆ ನನಗೆ ಸಂತೋಷ ನೆಮ್ಮದಿಯನ್ನು ತಂದುಕೊಟ್ಟದ್ದು ಬೊಮ್ಮನಹಳ್ಳಿಯ ವಿದ್ಯಾರ್ಥಿಗಳು. ಅವರಲ್ಲೂ ಮೇಘ ಮತ್ತು ಚೇತನ್ ಕುಮಾರ್ ನನಗೆ ತುಂಬಾ ಅಚ್ಚುಮೆಚ್ಚಿನ ವಿದ್ಯಾರ್ಥಿಗಳು. ಒಂದು ಒಂದುವರೆ ವರ್ಷಗಳಲ್ಲಿ ಮೇಘ ಮತ್ತು  ನನ್ನ ನಡುವೆ   ಆತ್ಮೀಯತೆ ಬೆಳೆಯಿತು. ಸಣ್ಣಪುಟ್ಟ ವಿಷಯಗಳು ವಿಜ್ಞಾನದ ಸಂದೇಹಗಳು.  ಏನೇ ಸಮಸ್ಯೆಗಳಿದ್ದರೂ ಮೊದಲಿಗೆ ನನ್ನಲ್ಲಿ ಬಂದು ಪರಿಹರಿಸುತ್ತಿದ್ದಳು. ಎಸೆಸ್ಸೆಲ್ಸಿಯಲ್ಲಿ  ಉತ್ತಮ ಅಂಕ ಗಳಿಸಿದ್ದಳು. ಯಾವುದೇ ಟ್ಯೂಷನ್, ಈಗ  ಇರುವಂತಹ ಸಾಮಾಜಿಕ ಜಾಲತಾಣಗಳ ಸಹಾಯವಿಲ್ಲದೆ 100ಕ್ಕೆ 95 ಅಂಕ ಪಡೆದು ನನ್ನ  ಗೌರವವನ್ನು ಹೆಚ್ಚಿಸಿದಳು. 

ನನ್ನ ಅದೃಷ್ಟಕ್ಕೆ ಅದೇ ವರ್ಷ 2011 ಜೂನ್ ನಲ್ಲಿ ನನಗೆ ನನ್ನ ಊರಿಗೆ ವರ್ಗಾವಣೆ ಭಾಗ್ಯ ದೊರೆಯಿತು. ಆದರೂ ಮೇಘ ಇವತ್ತಿನವರೆಗೂ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾಳೆ.  ಅವಳ ಕಾಲೇಜು ಶಿಕ್ಷಣ ಮಾಸ್ಟರ್ ಡಿಗ್ರಿ ಪಡೆಯುವಲ್ಲಿಯೂ ನನ್ನ ಮಾರ್ಗದರ್ಶನ ಪಡೆದು ಉದ್ಯೋಗದ ಆಯ್ಕೆಯಲ್ಲಿಯೂ ನನ್ನ ಸಲಹೆ ಪಡೆದು ಇವತ್ತು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಪ್ರತಿವರ್ಷ ಸೆಪ್ಟೆಂಬರ್ 5  ಶಿಕ್ಷಕ ದಿನಾಚರಣೆಯ ಶುಭಾಶಯ  ಮೊದಲಿಗೆ ಬರುವುದು ಮೇಘಳಿಂದ.. ಅದರಂತೆ ಚೇತನ್ ಕುಮಾರ್ ಎಂಬ ವಿದ್ಯಾರ್ಥಿಯು ಕೂಡ ನನಗೆ ಅಚ್ಚುಮೆಚ್ಚು. ಇವತ್ತು ಅವನು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.  ನನ್ನ ಜೊತೆ ಪ್ರತಿಯೊಂದು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾನೆ.  ಮೇಘ ಚೇತನ್ ಕುಮಾರ್ ರಂತಹ ವಿದ್ಯಾರ್ಥಿಗಳನ್ನು ಪಡೆದುಕೊಂಡದ್ದು,ನನ್ನ ಅದೃಷ್ಟ.

✍️

ಇತ್ತೀಚಿನ ಸುದ್ದಿ

ಜಾಹೀರಾತು