10:29 AM Friday29 - March 2024
ಬ್ರೇಕಿಂಗ್ ನ್ಯೂಸ್
ಕಾಜೂರು ದರ್ಗಾಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ: ಚುನಾವಣಾ ಉಸ್ತುವಾರಿ ರಮಾನಾಥ… ವಿಶಾಖಪಟ್ಟಣದಿಂದ ತಂದ 6 ಕೆಜಿಗೂ ಅಧಿಕ ಗಾಂಜಾ ವಶ: ಆರೋಪಿ ಬಂಧನ; 9… ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್: ಸಚಿವ ತಂಗಡಗಿ ಹೇಳಿಕೆಗೆ ಶಾಸಕ ಹರೀಶ್ ಪೂಂಜ… ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ವಿಶೇಷ ಪೂಜೆ ಸಲ್ಲಿಕೆ; ಹೊಸಳಿಗಮ್ಮ… ಮಂಗಳೂರು: ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿ ಆಗಮಿಸಿದ ಡಾ. ಮಂಜುನಾಥ… ಜೆಡಿಎಸ್ ಸ್ಪರ್ಧಿಸಲಿರುವ 3 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ: ಮಂಡ್ಯದಿಂದ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್… ಮನೆಯಲ್ಲಿ ಅಕ್ರಮ ನಾಡ ಬಂದೂಕು: ಬಣಕಲ್ ಸಮೀಪದ ವ್ಯಕ್ತಿಯ ಬಂಧನ ಅಭಿವೃದ್ಧಿ ಮತ್ತು ಕಾಂಗ್ರೆಸ್- ಎರಡೂ ವಿರೋಧ ಪದಗಳು: ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕ… ಲೋಕಸಭೆ ಚುನಾವಣೆ: ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ: ಹಿರಿಯ ಮುತ್ಸದ್ಧಿ ಜನಾರ್ದನ ಪೂಜಾರಿ… ಅಂಬೇಡ್ಕರ್ ವೃತ್ತ ಹೆಸರಿಡಲು ಕೈಗೊಂಡ ನಿರ್ಣಯದ ಪ್ರತಿ ಪಾಲಿಕೆಯಲ್ಲಿ ಇಲ್ಲವಂತೆ: ದಲಿತ ಮುಖಂಡರ…

ಇತ್ತೀಚಿನ ಸುದ್ದಿ

ಹಸಿರು ಉಸಿರು: ಐಎಸ್ ಸಿ ಮಂಗಳೂರು ಲೀಜೆನ್ ನಿಂದ ರಸ್ತೆ ವಿಭಾಜಕದಲ್ಲಿ ಗಿಡ ನೆಡುವ ಕಾರ್ಯಕ್ರಮ

14/11/2021, 18:16

ಮಂಗಳೂರು( reporterkarnataka.com):

ಇಂಡಿಯನ್ ಸೀನಿಯರ್ ಚೇಂಬರ್ ಮಂಗಳೂರು ಲೀಜೆನ್, ಮಂಗಳೂರು ಬ್ಲೂಂ ಹಾಗೂ ಲಯನ್ಸ್ ಕ್ಲಬ್ ಬಲ್ಮಠ ಇದರ ಸಂಯುಕ್ತಾಶ್ರಯದಲ್ಲಿ ನಗರದ ಅಶೋಕನಗರ ಅಂಚೆ ಕಚೇರಿಗೆ ಹಾದು ಹೋಗುವ ರಸ್ತೆ ವಿಭಾಜಕದಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿತು.

ಮುಂಜಾನೆ 7.30 ರಿಂದ 9.30ರ ವರೆಗೆ ಈ ಕಾರ್ಯಕ್ರಮ ನಡೆದಿದ್ದು 105 ಗಿಡಗಳನ್ನು ನೆಟ್ಟು ನೀರುಣಿಸಲಾಯಿತು.  

ಗಿಡ ನೆಡುವ ಕಾರ್ಯಕ್ರಮದ ಮುಂದಾಳತ್ವವನ್ನು ಇಂಡಿಯನ್ ಸೀನಿಯರ್ ಚೇಂಬರ್ ಅಧ್ಯಕ್ಷ

ಹರಿಪ್ರಸಾದ್ ರೈ  ಅವರು ವಹಿಸಿ ಎಲ್ಲರನ್ನು ಹುರಿದುಂಬಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 85ರ ಹರೆಯದ ಪರಿಸರವಾದಿ ಕೃಷ್ಣಪ್ಪ ಅವರು 

ಅತ್ಯಂತ ಉತ್ಸಾಹದಿಂದ ಗುಂಡಿಯನ್ನು ತೋಡಿ ಗಿಡವನ್ನು ನೆಟ್ಟು ನಮಗೆಲ್ಲ ಮಾದರಿಯಾದರು. ಗಿಡ ನೆಡುವ ಯಾವುದೇ ಕಾರ್ಯಕ್ರಮವಿದ್ದರೆ ಅಲ್ಲಿ ಅವರು ಹಾಜರಾಗಿ ತಮ್ಮ ಕೈಯ್ಯಾರೆ ಗಿಡವನ್ನು ನೆಡುತ್ತಾರೆ.  ಅವರ ಈ ಉತ್ಸಾಹವನ್ನು ನೋಡಿದಾಗ ಅವರಿಗೆ ಪರಿಸರದ ಮೇಲಿನ ಕಾಳಜಿ ಅರ್ಥವಾಗುತ್ತದೆ. ಮಂಗಳೂರಿನವರಾದ ಇವರನ್ನು ಸರಕಾರವು ಗುರುತಿಸಿ ಈ ಹಿರಿ ಜೀವವನ್ನು ಗೌರವಿಸುವುದು ಅತೀ ಮುಖ್ಯ. 

ಇಂದಿನ ಈ ಕಾರ್ಯಕ್ರಮಕ್ಕೆ ಗಿರಿಜಾ ಟ್ರಸ್ಟ್‌ ನವರು ಸಹಕಾರ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು