10:40 AM Tuesday30 - November 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಆರೋಪಿ ಡಾ. ರತ್ನಾಕರ್ ಗೆ… ದಂಪತಿ ಜತೆ ಸುರತ್ಕಲ್ ಟೋಲ್ ಸಿಬ್ಬಂದಿ ಅನುಚಿತ ದುರ್ವರ್ತನೆ: ಪೋಲೀಸ್ ಕಮಿಷನರ್ ಶಶಿಕುಮಾರ್… ಕಾಫಿನಾಡಲ್ಲಿ ಪ್ರಾಮಾಣಿಕ ಕಳ್ಳರು!: 4 ಬಾರ್ ಗಳಿಗೆ ಹೊಕ್ಕ ಚೋರರು: ಹಣ ಸಿಕ್ಕಿಲ್ಲ, ಆದ್ರೆ… ಕಡೂರು: ನೀರಿನ ಟ್ಯಾಂಕ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು; ಒಬ್ಬ ಗಂಭೀರ ಬೆಂಗಳೂರು: ನವಜಾತ ಹೆಣ್ಣು ಶಿಶುವನ್ನು ದೇವರ ಗುಡಿ ಮುಂದಿಟ್ಟು ಪರಾರಿ ಮೂಡಿಗೆರೆ: ಒಣ ಗಾಂಜಾ ಮಾರಾಟ; ಮಾಲು ಸಹಿತ ಆರೋಪಿ ಬಂಧನ ಕಲಬುರಗಿ ಪಾಲಿಕೆ ಕಮಿಷನರ್ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ: ಕಮಿಷನರ್ ಈ… ಸೋವೇನ ಹಳ್ಳಿ, ಹಗರಿಬೊಮ್ಮನ ಹಳ್ಳಿಗೆ ಸಮರ್ಪಕ ಬಸ್ ವ್ಯವಸ್ಥೆ: ಗ್ರಾಮಸ್ಥರ ಹಕ್ಕೊತ್ತಾಯ 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಡಾ. ರತ್ನಾಕರ್ ಬಂಧನ; 2…

ಇತ್ತೀಚಿನ ಸುದ್ದಿ

ಕೂಡ್ಲಿಗಿ ಪಟ್ಟಣದ ಗ್ರಾಮದೇವತೆ ಊರಮ್ಮದೇವಿ ದೇವಸ್ಥಾನ ನಿರ್ಮಾಣಕ್ಕೆ1 ಲಕ್ಷ ದೇಣಿಗೆ

13/11/2021, 11:03

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಗ್ರಾಮದೇವತೆ ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನದ ನಿರ್ಮಾಣಕ್ಕೆ ಕೂಡ್ಲಿಗಿ ಪಟ್ಟಣದ ಹಿರಿಯರಾದ ಹೋಟೆಲ್ ತಿಪ್ಪಣ್ಣನವರು ಒಂದು ಲಕ್ಷ ರೂ.ಹಣವನ್ನು ದೇವಸ್ಥಾನದ ದೈವಸ್ತರಲ್ಲಿಗೆ ಜಮಾ ಮಾಡಿದ್ದಾರೆ.

ಶ್ರೀಊರಮ್ಮ ದೇವಿಯ ಸನ್ನಿದಾನದಲ್ಲಿ ತಮ್ಮ ಕುಟುಂಬ ಸದಸ್ಯರೊಡಗೂಡಿ ದೇವಸ್ಥಾನದ ಸನ್ನಿದಾನದಲ್ಲಿ ಸಮಿತಿಯ ಪ್ರಮುಖರಿಗೆ ಹಣ ಸಂದಾಯ ಮಾಡಿದ್ದಾರೆ. ದೈವಜ್ಞರಾದ ಹಿ.ಮ.ಚಿದಾನಂದ ಸ್ವಾಮಿರವರ ನೇತೃತ್ವದಲ್ಲಿ ದೇವಸ್ಥಾನದ ದೈವಸ್ಥರು ದೇಣಿಗೆ ಹಣ ಸ್ವೀಕರಿಸಿದ್ದಾರೆ. ದೇಣಿಗೆ ಹಣ ನೀಡಿದ ಪಟ್ಟಣದ ಹಿರಿಯರಾದ ಹೋಟೆಲ್ ತಿಪ್ಪಣ್ಣ ಹಾಗೂ ಅವರ ಕುಟುಂಬಕ್ಕೆ, ಶ್ರೀಊರಮ್ಮ ದೇವಿ ಶುಭವನ್ನುಂಟು ಮಾಡಲೆಂದು  ಶ್ರೀಊರಮ್ಮ ದೇವಿಯಲ್ಲಿ ಕೋರಿದ್ದಾರೆ. ಇದೇ ಸಂದರ್ಭದಲ್ಲಿ  ದೈವಸ್ಥರು ತಿಪ್ಪಣ್ಣನವರನ್ನು ಅಭಿನಂದಿಸಿದ್ದಾರೆ. ಶ್ರೀಊರಮ್ಮ ದೇವಿ ದೇವಸ್ಥಾನದ ಸಮತಿಯ ಪ್ರಮುಖರು, ಪಟ್ಟಣ ಪಂಚಾಯ್ತಿ ಸದಸ್ಯರು ಹಾಗೂ ನಾಗರೀಕರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು