10:27 AM Saturday27 - November 2021
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಪುಂಡರ ಎರಡು ತಂಡಗಳ ನಡುವೆ ಮಾರಾಮಾರಿ; ರಸ್ತೆಯಲ್ಲಿ ಓಡಾಡಿ ಹೊಡೆದಾಟ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ  ಭೂಮಿ ಕಂಪನ: ಭಯಭೀತರಾದ ಜನ ಆರೋಗ್ಯ ಇಲಾಖೆಯಲ್ಲೊಬ್ಬ ಕಚ್ಚೆ ಹರುಕ ವೈದ್ಯ!!: ಗುತ್ತಿಗೆ ಸಿಬ್ಬಂದಿ ಯುವತಿಯರ ಜತೆಗಿನ ರಾಸಲೀಲೆ… ದೇವಸ್ಥಾನದೊಳಗೆ ಸೀದಾ ಪ್ರವೇಶಿಸಿದ ಆ ಭಿಕ್ಷುಕಿ ಅಜ್ಜಿ ಸ್ವಾಮೀಜಿ ಕೈಗೆ ಕೊಟ್ಟಿದ್ದೇನು? ಆಂಜನೇಯ… ವೇದಾವತಿ ಡ್ಯಾಂ: ನದಿಯಲ್ಲಿ ಈಜದಂತೆ, ನೀರಿಗಿಳಿದು ಸೆಲ್ಫಿ ತೆಗೆಯದಂತೆ ಶಾಸಕ ರಘುಮೂರ್ತಿ ಮನವಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ಎದೆ ನೋವು: ಪುಣೆ ಆಸ್ಪತ್ರೆಗೆ ದಾಖಲು ವೇದಾವತಿ ಚೆಕ್ ಡ್ಯಾಂನಲ್ಲಿ ನೀರು ಪಾಲಾದ ಇಬ್ಬರ ಪೈಕಿ ಒಂದು ಶವ ಪತ್ತೆ:… ನಿರಂತರ ಮಳೆ: ಅಥಣಿಯಲ್ಲಿ ಸಾವಿರಾರು ಎಕರೆ ದ್ರಾಕ್ಷೆ ಬೆಳೆ ನಾಶ; ಆಕಾಶದತ್ತ ಮುಖ… ಅಮೃತ ಮಹೋತ್ಸವ: ನ.27ರಂದು ಮಂಗಳೂರು ರಾಮಕೃಷ್ಣ ಮಠಕ್ಕೆ ಗೌರವಾಭಿನಂದನೆ ಹಾಗೂ ಪೌರಸಮ್ಮಾನ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: 4 ಮಂದಿ ಬಂಧನ; ತುಟಿ ಬಿಚ್ಚದ…

ಇತ್ತೀಚಿನ ಸುದ್ದಿ

ಕಿಕ್ಕಿರಿದು ತುಂಬಿದ್ದ ಬಸ್ ಬಾಗಿಲಿಗೆ ಜೋತು ಬಿದ್ದು ವಿದ್ಯಾರ್ಥಿಗಳ ಪ್ರಯಾಣ: ಮಾಜಿ ಸಾರಿಗೆ ಸಚಿವ ಸವದಿ ತವರಿನಲ್ಲಿ ಇದು ಸಾಮಾನ್ಯ!

11/11/2021, 18:46

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಸಾಮಾನ್ಯ ಅಂದ್ರೆ ಬಸ್ಸಿನಲ್ಲಿ 40ರಿಂದ ಅಥವಾ 50 ಜನರು ಪ್ರಯಾಣ ಮಾಡಬಹುದು. ಆದರೆ ಪ್ರಯಾಣಿಕರ ಸಂಖ್ಯೆ 100ರ ಗಡಿ ದಾಟಿದರೆ ಹೇಗೆ? ಇದು ಮಾಜಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯ.

ಅಥಣಿ ಕೆ ಎಸ್ ಆರ್ ಟಿ ಬಸ್ ನಲ್ಲಿ ಸರಿ ಸುಮಾರು 120 ಕಿಂತಲೂ ಹೆಚ್ಚೂ ಜನರು ಪ್ರಯಾಣ ಮಾಡುತ್ತಾರೆ. ಸಕಾಲದಲ್ಲಿ ಮನೆಗೆ, ಮನೆಯಿಂದ ಶಾಲಾ – ಕಾಲೇಜು, ಕಚೇರಿ, ಪಟ್ಟಣ ತಲುಪಬೇಕಾದರೆ ಇದು ಅನಿವಾರ್ಯ ಕೂಡ. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರ ಸಂಖ್ಯೆ ವಿಪರೀತವಿರುತ್ತದೆ. ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣ ಮಾಡುವ ಪರಿಸ್ಥಿತಿ ಎದುರಾಗಿದೆ. ಆರ್ ಟಿಒ ನಿಯಮ ಪ್ರಕಾರ ಸೀಟು ಭರ್ತಿಯಾದ ಬಳಿಕ 10 ಮಂದಿಗೆ ನಿಂತು ಪ್ರಯಾಣಿಸಲು ಅವಕಾಶವಿರುತ್ತದೆ. ಅದಕ್ಕಿಂತ ಹೆಚ್ಚು ಪ್ರಯಾಣಿಕರು ಬಸ್ ತುಂಬಿದ್ದರೆ ಅದನ್ನು ಓವರ್ ಲೋಡ್ ಎಂದೇ ವ್ಯಾಖ್ಯಾನಿಸಲಾಗುತ್ತದೆ.

ಅಥಣಿ ಪಟ್ಟಣದಿಂದ ಖೀಳೆಗಾವ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಸ್ಸಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿ ಅಪಾಯವನ್ನು ಲೆಕ್ಕಿಸದೆ ಪ್ರಯಾಣ ಮಾಡುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಬಸ್  ಬಾಗಿಲಿಗೆ ಜೋತು ಬಿದ್ದು ಪ್ರಯಾಣ ಮಾಡುತ್ತಿದ್ದು, ನೋಡುಗರ ಎದೆ ಝಳ್ ಎನಿಸುತ್ತದೆ.

ಈ ಮಾರ್ಗವಾಗಿ ಹಲವು ಗ್ರಾಮಗಳು ಬರುವುದರಿಂದ ಸಾಮಾನ್ಯವಾಗಿ ಜನರು ಇದೇ ಬಸ್ಸನ್ನು ಅವಲಂಬಿಸಿದ್ದಾರೆ. ಒಂದು ಬಸ್ನಲ್ಲಿ 40ರಿಂದ 45 ಸೀಟು ಮಾತ್ರ ಇರುತ್ತದೆ. 10 ಮಂದಿಗೆ ನಿಂತು ಪ್ರಯಾಣಿಸಲು ಅವಕಾಶವಿರುತ್ತದೆ.ಆದರೆ ಈ ಬಸ್ ನಲ್ಲಿ ಸರಿಸುಮಾರು 120 ಹೆಚ್ಚು ಪ್ರಾಮಾಣಿಕರು ಸಂಚಾರ ಮಾಡುವ ಅನಿವಾರ್ಯತೆ ಎದುರಾಗಿದೆ. ಅಥಣಿ ಕೆಎಸ್ ಆರ್ ಟಿಸಿ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಅಪಾಯದಲ್ಲಿ ವಿದ್ಯಾರ್ಥಿಗಳು ಸಂಚಾರ ಮಾಡುವಂತಾಗಿದೆ. ಸಂಚಾರ ಸಂದರ್ಭದಲ್ಲಿ ಒಂದು ಕಡೆ ವಾಲಿಕೊಂಡು ಬಸ್ ಚಲಿಸುತ್ತದೆ.

ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾಮಾನ್ಯವಾಗಿ ಒಂದು ಕಡೆ ವಾಲಿಕೊಂಡು ಬಸ್ ಚಲಿಸುತ್ತದೆ. ಒಳಗೆ ಕುಳಿತ ಪ್ರಯಾಣಿಕರು ಆತಂಕದಲ್ಲಿ ಸಂಚಾರ ಮಾಡುವಂತಾಗಿದೆ.

ದಿನನಿತ್ಯ ಬಸ್ನಲ್ಲಿ ಜನದಟ್ಟಣೆ ಆಗುವುದು ಸಹಜ ಇದರಿಂದ ಪ್ರಯಾಣಿಕರು ಜೀವಭಯದಲ್ಲಿ ಸಂಚಾರ ಮಾಡುವಂತಾಗಿದೆ. 

ವಯೋವೃದ್ಧರು, ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಿಗೆ ಜನದಟ್ಟನೆಯಿಂದ ಸಂಕಷ್ಟ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ‌.

ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಪಾದಸಲಗಿ ಮಾತನಾಡಿ, ಸರಿಯಾದ ಬಸ್ ವ್ಯವಸ್ಥೆ ತಕ್ಷಣ
ಕಲ್ಪಿಸಿ. ಏನಾದರೂ ಅನಾಹುತ ಕಂಡು ಬಂದಲ್ಲಿ ನೇರ ಹೊಣೆಗಾರರು ನೀವೇ ಆಗುತ್ತೀರಿ. ಇನ್ನೆರಡು ದಿನದಲ್ಲಿ ಬಸ್ ವ್ಯವಸ್ಥೆಯಾಗದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು