11:59 AM Tuesday30 - November 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಆರೋಪಿ ಡಾ. ರತ್ನಾಕರ್ ಗೆ… ದಂಪತಿ ಜತೆ ಸುರತ್ಕಲ್ ಟೋಲ್ ಸಿಬ್ಬಂದಿ ಅನುಚಿತ ದುರ್ವರ್ತನೆ: ಪೋಲೀಸ್ ಕಮಿಷನರ್ ಶಶಿಕುಮಾರ್… ಕಾಫಿನಾಡಲ್ಲಿ ಪ್ರಾಮಾಣಿಕ ಕಳ್ಳರು!: 4 ಬಾರ್ ಗಳಿಗೆ ಹೊಕ್ಕ ಚೋರರು: ಹಣ ಸಿಕ್ಕಿಲ್ಲ, ಆದ್ರೆ… ಕಡೂರು: ನೀರಿನ ಟ್ಯಾಂಕ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು; ಒಬ್ಬ ಗಂಭೀರ ಬೆಂಗಳೂರು: ನವಜಾತ ಹೆಣ್ಣು ಶಿಶುವನ್ನು ದೇವರ ಗುಡಿ ಮುಂದಿಟ್ಟು ಪರಾರಿ ಮೂಡಿಗೆರೆ: ಒಣ ಗಾಂಜಾ ಮಾರಾಟ; ಮಾಲು ಸಹಿತ ಆರೋಪಿ ಬಂಧನ ಕಲಬುರಗಿ ಪಾಲಿಕೆ ಕಮಿಷನರ್ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ: ಕಮಿಷನರ್ ಈ… ಸೋವೇನ ಹಳ್ಳಿ, ಹಗರಿಬೊಮ್ಮನ ಹಳ್ಳಿಗೆ ಸಮರ್ಪಕ ಬಸ್ ವ್ಯವಸ್ಥೆ: ಗ್ರಾಮಸ್ಥರ ಹಕ್ಕೊತ್ತಾಯ 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಡಾ. ರತ್ನಾಕರ್ ಬಂಧನ; 2…

ಇತ್ತೀಚಿನ ಸುದ್ದಿ

ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದ ನೇತಾರ ಪಮ್ಮಿ ಕೊಡಿಯಾಲ್ ಬೈಲ್ ಗೆ ನಿಗಮ – ಮಂಡಳಿಗಳಲ್ಲಿ ಪ್ರಾತಿನಿಧ್ಯ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಗೆ ಮನವಿ

11/11/2021, 15:28

ಮಂಗಳೂರು(reporterkarnataka.com):
ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದ ಮುಂದಾಳು ಪ್ರವೀಣ್ ಕುಮಾರ್ (ಪಮ್ಮಿ) ಕೊಡಿಯಾಲ್ ಬೈಲ್ ಅವರು ತಮ್ಮ ವಿಶಿಷ್ಟ ಸೇವಾ ಮನೋಭಾವದಿಂದ ನಾಡಿನೆಲ್ಲೆಡೆ ಪರಿಚಿತರಾಗಿದ್ದಾರೆ. ಜನ ಸಾಮಾನ್ಯರ  ನೋವು- ನಲಿವು, ದುಃಖ- ದುಮ್ಮಾನಗಳಿಗೆ ತನ್ನ ಬದುಕನ್ನೇ ಧಾರೆಯೆರೆದ ಅವರಿಗೆ ನಿಗಮ -ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಲಾಗಿದೆ.

ಪ್ರವೀಣ್ ಕುಮಾರ್  ಅವರು ಧಾಮಿ೯ಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅಸಂಖ್ಯಾತ ಬಡ ಬಗ್ಗರ, ದೀನ, ದುಖಿ:ತರ ಆಶ್ರಯದಾತರಾಗಿರುವ  ಪಮ್ಮಿ ಅವರು ವಿಭಿನ್ನ ರೀತಿಯ ಅಧ್ಯಾಯವನ್ನು ಸೃಷ್ಠಿಸಿದ ಮೇರು ವ್ಯಕ್ತಿತ್ವದ ಯುವ  ಧುರೀಣರಾಗಿದ್ದಾರೆ.  ತನ್ನ ವರಮಾನದ ಬಹು ಭಾಗವನ್ನು ಧಾಮಿ೯ಕ, ಸಾಮಾಜಿಕ ರಂಗಗಳಲ್ಲಿ ಧಾರೆಯೆರೆದು ಸಮಾಜದ ಬಹುಮುಖ ಪ್ರಗತಿಗಾಗಿ ರಾತ್ರಿ ಹಗಲೆನ್ನದೆ ದುಡಿಯುತ್ತಿರುವ ಕ್ರಿಯಾಶೀಲ ವ್ಯಕ್ತಿ.

ಶ್ರೀ ಭಗವತಿ ದೇವಸ್ಥಾನದ ಅಭಿವೃದ್ಧಿಗಾಗಿ ರಾತ್ರಿ, ಹಗಲೆನ್ನದೆ ದುಡಿಯುತ್ತಿರುವ  ಅವರು ಧಾಮಿ೯ಕ, ಸಾಂಸ್ಕ್ರತಿಕ, ಸಾಹಿತ್ಯಿಕ, ಚಲನ ಚಿತ್ರ ನಿಮಾ೯ಣ ಮುಂತಾದ ವಿವಿಧ ರಂಗಗಳಲ್ಲಿ ವಿಜೃಂಭಿಸಿ ಜನ ಮನಗಳ ಹೃದಯದಲ್ಲಿ ನೆಲೆಸಿದ್ದಾರೆ.

ಸಾಮಾಜಿಕ ರಂಗದ ಬಹುದೊಡ್ಡ ಹೆಸರಾದ ಪಮ್ಮಿ ಕೊಡಿಯಾಲ್ ಬೈಲ್ ಬಡವ – ಬಲ್ಲಿದ,  ಹಿರಿಯ – ಕಿರಿಯ ಭೇದಭಾವವಿಲ್ಲದ ಎಲ್ಲರೊಂದಿಗೆ ಮಾನವೀಯತೆಯಿಂದ ವತಿ೯ಸುವ ಹೃದಯ ಶ್ರೀಮಂತಿಕೆಯ ಓವ೯ ತ್ಯಾಗ ಜೀವಿಯಾಗಿದ್ದಾರೆ.  ಅಹಂಕಾರ, ಅಹಂಭಾವಗಳ ಪರಿಚಯವೇ ಇಲ್ಲದ, ದ್ವೇಷ ಮತ್ಸರಗಳ ಅರಿವಿಲ್ಲದ ಸರಳ ನಿರಾಂಡಬರ ವ್ಯಕ್ತಿತ್ವದ ನಿಷ್ಕಳಂಕತೆಯ ನಿಜರೂಪದ ಸದ್ಗುಣ ಸಂಪನ್ನತೆ, ಸಚ್ಚಾರಿತ್ಯಗಳ ಸಂಗಮವಾಗಿರುವ  ಪ್ರವೀಣ್ ಕುಮಾರ್ (ಪಮ್ಮಿ) ಕೊಡಿಯಾಲ್ ಬೈಲ್ ರವರಿಗೆ ಕನಾ೯ಟಕ ಸರಕಾರವು ನಿಗಮ ಮಂಡಳಿಗಳನ್ನು  ಪುನಾ ರಚನೆ ಮಾಡುವ ಸಂದಭ೯ದಲ್ಲಿ ಸೂಕ್ತ ಪ್ರಾತಿನಿಧ್ಯ  ನೀಡ ಬೇಕಾಗಿದೆ.  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಪ್ರವೀಣ್ ಕುಮಾರ್ (ಪಮ್ಮಿ) ರವರಿಗೆ ರಾಜ್ಯದ ನಿಗಮ ಮಂಡಳಿಯ ಸೂಕ್ತ ಹುದ್ದೆ ದೊರಕಿಸಿ ಕೊಡುತ್ತಾರೆಂಬ ಭರವಸೆ ಜಿಲ್ಲೆಯ ಜನತೆಯದ್ದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು