12:19 PM Tuesday30 - November 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಆರೋಪಿ ಡಾ. ರತ್ನಾಕರ್ ಗೆ… ದಂಪತಿ ಜತೆ ಸುರತ್ಕಲ್ ಟೋಲ್ ಸಿಬ್ಬಂದಿ ಅನುಚಿತ ದುರ್ವರ್ತನೆ: ಪೋಲೀಸ್ ಕಮಿಷನರ್ ಶಶಿಕುಮಾರ್… ಕಾಫಿನಾಡಲ್ಲಿ ಪ್ರಾಮಾಣಿಕ ಕಳ್ಳರು!: 4 ಬಾರ್ ಗಳಿಗೆ ಹೊಕ್ಕ ಚೋರರು: ಹಣ ಸಿಕ್ಕಿಲ್ಲ, ಆದ್ರೆ… ಕಡೂರು: ನೀರಿನ ಟ್ಯಾಂಕ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು; ಒಬ್ಬ ಗಂಭೀರ ಬೆಂಗಳೂರು: ನವಜಾತ ಹೆಣ್ಣು ಶಿಶುವನ್ನು ದೇವರ ಗುಡಿ ಮುಂದಿಟ್ಟು ಪರಾರಿ ಮೂಡಿಗೆರೆ: ಒಣ ಗಾಂಜಾ ಮಾರಾಟ; ಮಾಲು ಸಹಿತ ಆರೋಪಿ ಬಂಧನ ಕಲಬುರಗಿ ಪಾಲಿಕೆ ಕಮಿಷನರ್ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ: ಕಮಿಷನರ್ ಈ… ಸೋವೇನ ಹಳ್ಳಿ, ಹಗರಿಬೊಮ್ಮನ ಹಳ್ಳಿಗೆ ಸಮರ್ಪಕ ಬಸ್ ವ್ಯವಸ್ಥೆ: ಗ್ರಾಮಸ್ಥರ ಹಕ್ಕೊತ್ತಾಯ 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಡಾ. ರತ್ನಾಕರ್ ಬಂಧನ; 2…

ಇತ್ತೀಚಿನ ಸುದ್ದಿ

ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿ: ರಸ್ತೆ ಮೇಲೆ ಹೊರಟಿದ್ದ ಬೈಕ್ ಸವಾರ ಸಾವು; ಇನ್ನೊಬ್ಬ ಗಂಭೀರ

06/11/2021, 20:19

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ  ಅನಂತಪುರ- ತಾಂವಶಿ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಬ್ಬರು ಸಾವನ್ಬಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ.

ಖಾಲಿ ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿಯಾದ ಪರಿಣಾಮ ರಸ್ತೆ ಮೇಲೆ ಹೊರಟಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ.

ಕಾರ್ಖಾನೆಯಿಂದ ಕಬ್ಬು ಖಾಲಿ ಮಾಡಿ ಅನಂತಪುರ ಮಾರ್ಗವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್ ಹಿಂದಿನ ಟ್ರೇಲರ್ ಜೋಡನೆ ಪಿನ್ ಸ್ಲಿಪ್ಆಗಿ ಟ್ರೇಲರ್ ಪಲ್ಟಿ ಆಗಿದೆ. ಟ್ರೇಲರ್ ಪಕ್ಕದಲ್ಲೆ ತಾಂವಶಿ ಮಾರ್ಗವಾಗಿ ಹೊರಟಿದ್ದ ದ್ವಿಚಕ್ರ ವಾಹನ ಮೇಲೆ ಟ್ರೇಲರ್ ಪಲ್ಟಿಯಾಗಿದೆ.


ದ್ವಿಚಕ್ರ ವಾಹನದ ಮೇಲಿದ್ದ ಇಬ್ಬರ ಪೈಕಿ ಒಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನೊಬ್ಬರಿಗೆ ಗಂಭೀರ ಗಾಯಗೊಂಡಿದ್ದಾರೆ. ಅಥಣಿ ತಾಲೂಕಿನ ಮಧಭಾವಿ ಗ್ರಾಮದ ಸಚಿನ ರಾಯಪ್ಪ ನಿವಲಗಿ (25) ಮೃತಪಟ್ಟ ದುರ್ದೈವಿ.

ಅಪಘಾತ ಸಂಭವಿಸಿದ ಸ್ಥಳದಿಂದ ಸ್ಥಳೀಯರು 108 ಸಹಾಯವಾಣಿಗೆ ಕರೆ ಮಾಡಿದ್ದಾರೆ.

ಸರ್ಕಾರಿ 108 ತುರ್ತು ಸೇವೆ ಆಂಬುಲೆನ್ಸ್ ಅಪಘಾತ ಸ್ಥಳಕ್ಕೆ ತಲುಪಲು ಒಂದು ತಾಸಿಗೂ ಹೆಚ್ಚು ಸಮಯ ತಗೆದುಕೊಂಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಧ್ಯಮ ಜತೆ ಮಾತನಾಡಿದ ಸ್ಥಳೀಯರು ಸಂಪೂರ್ಣ ಹದಗೆಟ್ಟು ಹೋಗಿರುವ ರಸ್ತೆ ಹಾಗೂ ಅತಿ ವೇಗದಲ್ಲಿ ಚಲಿಸುತ್ತಿರುವ ಕಬ್ಬಿಣ ಟ್ರ್ಯಾಕ್ಟರಗಳು ತಗ್ಗು ಗುಂಡಿ ಬಿದ್ದು ಹದಗೆಟ್ಟಿರುವ ರಸ್ತೆಗಳು ಅಮಾಯಕರನ್ನು ಬಲಿ ಪಡೆಯುತ್ತಿವೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು