11:12 AM Saturday27 - November 2021
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಪುಂಡರ ಎರಡು ತಂಡಗಳ ನಡುವೆ ಮಾರಾಮಾರಿ; ರಸ್ತೆಯಲ್ಲಿ ಓಡಾಡಿ ಹೊಡೆದಾಟ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ  ಭೂಮಿ ಕಂಪನ: ಭಯಭೀತರಾದ ಜನ ಆರೋಗ್ಯ ಇಲಾಖೆಯಲ್ಲೊಬ್ಬ ಕಚ್ಚೆ ಹರುಕ ವೈದ್ಯ!!: ಗುತ್ತಿಗೆ ಸಿಬ್ಬಂದಿ ಯುವತಿಯರ ಜತೆಗಿನ ರಾಸಲೀಲೆ… ದೇವಸ್ಥಾನದೊಳಗೆ ಸೀದಾ ಪ್ರವೇಶಿಸಿದ ಆ ಭಿಕ್ಷುಕಿ ಅಜ್ಜಿ ಸ್ವಾಮೀಜಿ ಕೈಗೆ ಕೊಟ್ಟಿದ್ದೇನು? ಆಂಜನೇಯ… ವೇದಾವತಿ ಡ್ಯಾಂ: ನದಿಯಲ್ಲಿ ಈಜದಂತೆ, ನೀರಿಗಿಳಿದು ಸೆಲ್ಫಿ ತೆಗೆಯದಂತೆ ಶಾಸಕ ರಘುಮೂರ್ತಿ ಮನವಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ಎದೆ ನೋವು: ಪುಣೆ ಆಸ್ಪತ್ರೆಗೆ ದಾಖಲು ವೇದಾವತಿ ಚೆಕ್ ಡ್ಯಾಂನಲ್ಲಿ ನೀರು ಪಾಲಾದ ಇಬ್ಬರ ಪೈಕಿ ಒಂದು ಶವ ಪತ್ತೆ:… ನಿರಂತರ ಮಳೆ: ಅಥಣಿಯಲ್ಲಿ ಸಾವಿರಾರು ಎಕರೆ ದ್ರಾಕ್ಷೆ ಬೆಳೆ ನಾಶ; ಆಕಾಶದತ್ತ ಮುಖ… ಅಮೃತ ಮಹೋತ್ಸವ: ನ.27ರಂದು ಮಂಗಳೂರು ರಾಮಕೃಷ್ಣ ಮಠಕ್ಕೆ ಗೌರವಾಭಿನಂದನೆ ಹಾಗೂ ಪೌರಸಮ್ಮಾನ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: 4 ಮಂದಿ ಬಂಧನ; ತುಟಿ ಬಿಚ್ಚದ…

ಇತ್ತೀಚಿನ ಸುದ್ದಿ

ಸತ್ತವರಿಗೆ ಸಾಲ ನೀಡಿದ್ದರೆ ಶೀಘ್ರ ತನಿಖೆ ನಡೆಸಿ ಎಫ್‌ಐಆರ್‌ ಹಾಕಿಸಿ: ಸಚಿವ ಮುನಿರತ್ನಗೆ  ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಸವಾಲು

06/11/2021, 15:20

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಮೃತಪಟ್ಟವರ ಹೆಸರಿನಲ್ಲಿ ಕೋಲಾರ – ಚಿಕ್ಕಬಳ್ಳಾಪುರ ಡಿಸಿaaಸಿ ಬ್ಯಾಂಕ್ ಮೂಲಕ ಸಾಲ ಮಂಜೂರಾಗಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಎಂದು ಉಸ್ತುವಾರಿ ಸಚಿವ ಮುನಿರತ್ನ ಅವರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು. ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಸತ್ತವರ ಹೆಸರಲ್ಲಿ ಸಾಲ ನೀಡಲಾಗಿದೆ ಎಂಬ ಸಚಿವರ ಆರೋಪವನ್ನು ತಳ್ಳಿಹಾಕಿದರು.

ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಿದ್ದೇವೆ . ಸಹಕಾರ ವ್ಯವಸ್ಥೆ ಬಡವರ ವ್ಯವಸ್ಥೆಯಾಗಿದೆ , ಸತ್ತವರ ಹೆಸರಿನಲ್ಲಿ ಸಾಲ ಕೊಟ್ಟಿದ್ದರೆ ನಿಮ್ಮ ಆರೋಪ ಗಂಭೀರವಾದುದು ಎಂದರು. 

ಅಧಿಕಾರ ತಮ್ಮ ಬಳಿಯೇ ಇದೆ, ನೀವು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದೀರಿ. ವ್ಯವಸ್ಥೆಗೆ ಯಾರು ದೊಡ್ಡವರಲ್ಲ. ತಪ್ಪು ಮಾಡಿದವರ ವಿರುದ್ಧ ಎಫ್‌ಐಆರ್ ಹಾಕಿಸಿ ಎಂದು ಸಲಹೆ ನೀಡಿದರು . ಸತ್ತವರ ಹೆಸರಿನಲ್ಲಿ ಸಾಲ ನೀಡಲು ಸಾಧ್ಯವೇ ಇಲ್ಲ . ಹೇಳಿಕೆ ಹೇಳಿಕೆಯಾಗಿ ಇರಬಾರದು. ತಕ್ಷಣ ತನಿಖೆ ನಡೆಸಿ ಎಫ್‌ಐಆರ್‌ ಹಾಕಿಸಿ . ತಪ್ಪು ಮಾಡಿದವರನ್ನು ಶಿಕ್ಷೆಗೆ ಒಳಪಡಿಸುವುದು ಅಧಿಕಾರದಲ್ಲಿರುವವರ ಜವಾಬ್ದಾರಿ. ಅಧ್ಯಕ್ಷನಾಗಿ ತಪ್ಪುಗಳು ಆಗದಂತೆ ಎರಡೂ ಜಿಲ್ಲೆಯಲ್ಲಿ ಎಚ್ಚರಿಕೆಯಿಂದ ನಡೆದುಕೊಂಡಿರುವ ಆತ್ಮತೃಪ್ತಿ ಇದೆ ಎಂದರು.

ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿರುವುದೇ ಆದರೆ ತ್ವರಿತವಾಗಿ ತನಿಖೆ ನಡೆಸಿ , ಕ್ರಮ ಕೈಗೊಳ್ಳಲಿ , ದಯಮಾಡಿ ಬ್ಯಾಂಕಿಂಗ್ ವ್ಯವಸ್ಥೆಗೆ ಧಕ್ಕೆಯಾಗುವ ಸುಳ್ಳು ಹೇಳಿಕೆಗಳನ್ನು ನೀಡದಿರಿ ಎಂದು ಮನವಿ ಮಾಡಿದರು. 

ಸಹಕಾರ ಸಂಘಗಳು ಬ್ಯಾಂಕಿನ ವ್ಯಾಪ್ತಿಗೆ ಒಳಪಡುವುದಿಲ್ಲ. ನಿಮ್ಮದೇ ಸರ್ಕಾರದ ಸಹಕಾರ ಇಲಾಖೆಯಡಿ ಕಾರ್ಯನಿರ್ವಹಿಸುತ್ತವೆ. ರೈತರು , ಮಹಿಳೆಯರು ಸಾಲಕ್ಕಾಗಿ ಸಂಘಕ್ಕೆ ಅರ್ಜಿ ಹಾಕಿದಾಗ ಬೇಡಿಕೆಗೆ ತಕ್ಕಂತೆ ಹಣ ನೀಡಲಾಗುತ್ತದೆ . ವಾಸ್ತವಾಂಶ ಅರಿತು ಮಾತನಾಡಿದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದ ಎಂದರು .

೨೦೧೪ ಕ್ಕೆ ಮುನ್ನಾ ದಿವಾಳಿಯಾಗಿ ಸತ್ತು ಹೋಗಿದ್ದಂತಹ ಬ್ಯಾಂಕಿಗೆ ಶಕ್ತಿ ತುಂಬಿ ಬದುಕಿಸಲಾಗಿದೆ. ಇಲ್ಲಿ ನಮಗೇನು ಅಧಿಕಾರ ಶಾಶ್ವತವಲ್ಲ. ಬೆಳೆ ಸಾಲ ಕೊಡುವಾಗ ಮಾರ್ಟ್‌ಗೇಜ್ ಮಾಡಿಯೇ ಸಾಲ ಮಂಜೂರು ಮಾಡಲಾಗುತ್ತದೆ . ರೈತರು ಆನ್‌ಲೈನ್ ಮೂಲಕವೇ ವ್ಯವಹಾರ ನಡೆಸುತ್ತಾರೆ . ಹೀಗಿರುವಾಗ ಹೇಗೆ ಅವ್ಯವಹಾರ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು .

ಬಡ್ಡಿ ಕ್ರೈಮ್ ಮಾಡುವುದು ಇಲಾಖೆಯ ಅಧಿಕಾರಗಳ ಜವಾಬ್ದಾರಿ . ಬಿಲ್‌ ತಯಾರಿಸುವುದು ಅಧಿಕಾರಿಗಳ ಜವಾಬ್ದಾರಿ . ವ್ಯವಸ್ಥೆಯಲ್ಲಿ ಯಾರು ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು , ಡಾ.ಬಿ.ಆರ್.ಅಂಬೇಡ್ಕರ್ ಬರದಿರುವ ಸಂವಿಧಾನದಡಿ ಬದುಕುತ್ತಿದ್ದೇವೆ . ತಪ್ಪು ಮಾಡಿರುವುದು ಸಾಬೀತಾದರೆ ಜೈಲಿಗೆ ಹೋಗುವುದು ಖಚಿತ . ದೇಶದಲ್ಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದು ಸ್ಪಷ್ಟಪಡಿಸಿದರು .ವಿನಾ ಕಾರಣ ರಾಜಕೀಯ ಸ್ವಾರ್ಥಕ್ಕಾಗಿ ಬಡವರು , ರೈತರು , ತಾಯಂದಿರಿಗೆ ಆರ್ಥಿಕ ಬಲ ತುಂಬಿರುವ ಬ್ಯಾಂಕ್ ವಿರುದ್ಧ ಮಾತನಾಡಿ , ಬ್ಯಾಂಕಿನ ಘನತೆಗೆ ಚ್ಯುತಿ ತಾರದಿರಿ , ಬ್ಯಾಂಕನ್ನು ಹಾಳು ಮಾಡಿದರೆ ಅದು ರೈತರು , ಮಹಿಳೆಯರಿಗೆ ಮಾಡಿದ ದ್ರೋಹವಾಗುತ್ತದೆ ,ತಪ್ಪಾಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು