7:27 AM Thursday18 - April 2024
ಬ್ರೇಕಿಂಗ್ ನ್ಯೂಸ್
ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ… ಮಂಗಳೂರಿನಲ್ಲಿ ನಾಳೆ ‘ಇಂಡಿಯಾ’ ಘಟಕ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ‘ಬಿಜೆಪಿ…

ಇತ್ತೀಚಿನ ಸುದ್ದಿ

ಸಾಲು ಸಾಲು ದೀಪಗಳ ಮಾಲೆ, ಆಕಾಶಬುಟ್ಟಿ: ದೀಪಾವಳಿ ಏನಿದರ ಅರ್ಥ?: ನಕರಾತ್ಮದಿಂದ ಸಕರಾತ್ಮವೇ?

03/11/2021, 07:50

ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ, ಅರ್ಥಾತ್ ನಮ್ಮ ಜೀವನದ ಕತ್ತಲೆಯನ್ನು ಹೊಡೆದೋಡಿಸಿ ಬೆಳಕನ್ನು ತರಲಿ ಎಂದು ಸಂಭ್ರಮಿಸುವ ಒಂದು ವಿಶೇಷ ಪರ್ವ ದೀಪಾವಳಿ. 

ನಿಶೆಯನ್ನು ಹೊಡೆದೋಡಿಸುವುದು ಎಂಬ ಅರ್ಥವೂ ಇದೆ. ನಮ್ಮ ಮನದ ಋಣಾತ್ಮಕ ಭಾವಗಳನ್ನು ತೊರೆದು ಸಕಾರಾತ್ಮಕನ್ನು ಬೆಳಗಿಸಲು ದೀಪಗಳನ್ನು ಬೆಳಗುತ್ತೇವೆ. ದೀಪಾವಳಿ ಎಂದರೆ ತಕ್ಷಣ ನೆನಪಿಗೆ ಬರುವುದು ಸಾಲು ಸಾಲು ದೀಪಗಳ ಸಾಲು, ಆಕಾಶಬುಟ್ಟಿ, ಪ್ರತಿನಿತ್ಯ ಮನೆಯಲ್ಲಿ ಬೆಳಗುವ ದೀಪ ಜೀವನದ ಆಶೋತ್ತರಗಳ ದ್ಯೋತಕ. 

ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಶುಭ ಸಮಾರಂಭ ಆರಂಭವಾಗುವುದು ದೀಪ ಬೆಳಗುವ ಮೂಲಕ. ಇಲ್ಲಿ ಬೆಳಕನ್ನು ಜೀವನ ವೃದ್ಧಿಯ ದ್ಯೋತಕವಾಗಿ ಕಾಣುತ್ತೇವೆ. ದೀಪದ ಬೆಳಕು ಯಾವಾಗಲೂ ಊರ್ಧ್ವ ಮುಖಿಯಾಗಿರುತ್ತದೆ. ಅಂದರೆ ನಾವು ದೀಪದಂತೆ ಉರಿದು ಇತರರ ಬಾಳಿಗೆ ಬೆಳಕು ನೀಡಬೇಕೆಂಬುದೇ ಆಶಯ.

ಕಾರ್ತಿಕ ಮಾಸದಲ್ಲಿ ಆಚರಿಸುವ ಈ ಹಬ್ಬದ ಜೊತೆಗೆ ಎಲ್ಲಾ ದೇವಾಲಯಗಳಲ್ಲಿಯೂ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.

ಕಾರ್ತಿಕ ಮಾಸದುದ್ದಕ್ಕೂ ದೀಪೋತ್ಸವವನ್ನು ಆಚರಿಸಲಾಗುತ್ತದೆ.

ಭಾರತೀಯರಾದ ನಮಗೆ ದೀಪ ಎನ್ನುವುದು ಸೂರ್ಯನ ಪುಟ್ಟ ಪ್ರತಿರೂಪದಂತೆ.

ಜ್ಞಾನದ ಸಂಕೇತ ವೈರತ್ವದ ಮೇಲೆ ವಿಜಯ ಗಳಿಸಿದ ಸಂಕೇತ, ಮುಖ್ಯವಾಗಿ ನಮ್ಮೊಳಗಿನ ಎಲ್ಲಾ ದುರ್ಗುಣಗಳನ್ನು ಹೊಡೆದೋಡಿಸಿ ಬೆಳಕನ್ನು ಬೆಳಗಿಸುವ ಹಬ್ಬ.

 ಶ್ರೀರಾಮಚಂದ್ರನ ಪಟ್ಟಾಭಿಷೇಕ ನರಕಾಸುರನ ಸಂಹಾರ ಇದೆಲ್ಲವೂ ನಡೆದದ್ದು ಇದೇ ದಿನದಂದು.

ಒಟ್ಟಿನಲ್ಲಿ ದೀಪಾವಳಿಯೆಂದರೆ ಕರಾಳ ಶಕ್ತಿಗಳನ್ನು ಸಂಹರಿಸಿ ಎಲ್ಲರ ಬದುಕಿನಲ್ಲಿ ಬೆಳಕು ತಂದ ಪರ್ವದಿನ. ಈ ದೀಪಾವಳಿ ನಮಗೆಲ್ಲರಿಗೂ ಸುಖ ಸಮೃದ್ಧಿ ನೆಮ್ಮದಿ ತರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.

” ಲೋಕ ಸಮಸ್ತಾ  ಸುಖಿನೋ ಭವಂತು””

✍️

ಇತ್ತೀಚಿನ ಸುದ್ದಿ

ಜಾಹೀರಾತು