11:36 AM Saturday27 - November 2021
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಪುಂಡರ ಎರಡು ತಂಡಗಳ ನಡುವೆ ಮಾರಾಮಾರಿ; ರಸ್ತೆಯಲ್ಲಿ ಓಡಾಡಿ ಹೊಡೆದಾಟ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ  ಭೂಮಿ ಕಂಪನ: ಭಯಭೀತರಾದ ಜನ ಆರೋಗ್ಯ ಇಲಾಖೆಯಲ್ಲೊಬ್ಬ ಕಚ್ಚೆ ಹರುಕ ವೈದ್ಯ!!: ಗುತ್ತಿಗೆ ಸಿಬ್ಬಂದಿ ಯುವತಿಯರ ಜತೆಗಿನ ರಾಸಲೀಲೆ… ದೇವಸ್ಥಾನದೊಳಗೆ ಸೀದಾ ಪ್ರವೇಶಿಸಿದ ಆ ಭಿಕ್ಷುಕಿ ಅಜ್ಜಿ ಸ್ವಾಮೀಜಿ ಕೈಗೆ ಕೊಟ್ಟಿದ್ದೇನು? ಆಂಜನೇಯ… ವೇದಾವತಿ ಡ್ಯಾಂ: ನದಿಯಲ್ಲಿ ಈಜದಂತೆ, ನೀರಿಗಿಳಿದು ಸೆಲ್ಫಿ ತೆಗೆಯದಂತೆ ಶಾಸಕ ರಘುಮೂರ್ತಿ ಮನವಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ಎದೆ ನೋವು: ಪುಣೆ ಆಸ್ಪತ್ರೆಗೆ ದಾಖಲು ವೇದಾವತಿ ಚೆಕ್ ಡ್ಯಾಂನಲ್ಲಿ ನೀರು ಪಾಲಾದ ಇಬ್ಬರ ಪೈಕಿ ಒಂದು ಶವ ಪತ್ತೆ:… ನಿರಂತರ ಮಳೆ: ಅಥಣಿಯಲ್ಲಿ ಸಾವಿರಾರು ಎಕರೆ ದ್ರಾಕ್ಷೆ ಬೆಳೆ ನಾಶ; ಆಕಾಶದತ್ತ ಮುಖ… ಅಮೃತ ಮಹೋತ್ಸವ: ನ.27ರಂದು ಮಂಗಳೂರು ರಾಮಕೃಷ್ಣ ಮಠಕ್ಕೆ ಗೌರವಾಭಿನಂದನೆ ಹಾಗೂ ಪೌರಸಮ್ಮಾನ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: 4 ಮಂದಿ ಬಂಧನ; ತುಟಿ ಬಿಚ್ಚದ…

ಇತ್ತೀಚಿನ ಸುದ್ದಿ

Namma Kudla Charana Sangha : ಚಾರಣಕ್ಕೆ ಹೊರಟ ಯುವಕರು ಕುಮಾರ ಪರ್ವತದಿಂದ ಕಸ ಹೆಕ್ಕಿ ತಂದರು, ನೂರು ಗಿಡಗಳ ನೆಟ್ಟರು..!!

03/11/2021, 10:46

ಗಣೇಶ್ ಅದ್ಯಪಾಡಿ, ಮಂಗಳೂರು
info.reporterkarnataka@gmail.com

ತಮ್ಮ ಒತ್ತಡಗಳಿಂದ ಮುಕ್ತರಾಗಲು ಪ್ರವಾಸಕ್ಕೆಂದು ಹೊರಡುವ ಜನರು ದೂರ ದೂರದ ಪ್ರವಾಸಿತಾಣಕ್ಕೆ ಭೇಟಿ ನೀಡುತ್ತಾರೆ. ತಂದ ಪಾರ್ಸೆಲ್ ತಿಂಡಿಗಳನ್ನು ತಿಂದು ತೇಗಿ, ತಮ್ಮ ಸಂತೋಷಕ್ಕಾಗಿ ಕಾನನವು ಕುಂದುವAತೆ ಪ್ಲಾಸ್ಟಿಕ್‌ಗಳಿಂದ ವಿರೂಪಗೊಳಿಸಿ, ಆನಂದದಿಂದ ತೆಗೆದ ಚಿತ್ರಗಳನ್ನು ಮೆಲುಕು ಹಾಕುತ್ತಾ ಚಿಂತೆಯಿಲ್ಲದೆ ಸಾಗಿಬಿಡುತ್ತಾರೆ.

ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸೌಂದರ್ಯದ ಕಿರೀಟದಂತೆ ಕಂಗೊಳಿಸುವ ಕುಮಾರಪರ್ವತ ಕೂಡ ಹೊರತಾಗಿಲ್ಲ. ಇದು ಚಾರಣಿಗರ ಅಚ್ಚುಮೆಚ್ಚಿನ ತಾಣ. ಗಗನದ ಎತ್ತರಕ್ಕೆ ಏರುವ ಆ ಸ್ವರ್ಗದ ಸೊಬಗು, ತಂಪಾದ ಪ್ರಕೃತಿ, ಅದರ ಅಂದ ಚಂದವ ಅನುಭವಿಸುವವರು ಕೆಲವರೇ ? ಹಲವರ ಮೋಜಿಗೆ ಆ ರಮಣೀಯ ತಾಣವು ಕಸದ ಕೂಪವಾಗಿ ಮಾರ್ಪಾಡಾಗುತ್ತಿರುವುದು ನಿಸರ್ಗದ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇಡುತ್ತಿರುವುದು ವಿಷಾದನೀಯ.

ಆದರೆ ಇಲ್ಲೊಂದು ಯುವ ಸಮೂಹ ತಮ್ಮ ಭಾನುವಾರದ ರಜೆಯ ದಿನ ರಾಶಿ ರಾಶಿ ಗೋಣಿಚೀಲಗಳನ್ನು ಹೊತ್ತು, ಕಾನನದೊಳಗೆ ಹೊಕ್ಕು, ಕಸವನ್ನು ಹುಡುಕಿ-ಹುಡುಕಿ ಗೋಣಿಚೀಲದೊಳಗೆ ತುಂಬಿಸಿ, ಸಂಜೆಯಾಗುತ್ತಲೇ ಗೋಣಿಚೀಲದಲ್ಲಿ ತುಂಬಿದ ಕಸದ ರಾಶಿಯನ್ನು ಕಾಡಿನಿಂದ ಹೊರಗೆ ಸಾಗಿಸಿ, ವಿಲೇವಾರಿ ಮಾಡಿ, ಸುಂದರವಾದ ಕಾಡನ್ನು ಕಾಪಾಡುವ ಅಪರೂಪದ ಹೆಜ್ಜೆಗಳನ್ನು ಇಟ್ಟಿದೆ.

ಕಳೆದ ಬಾರಿ ರಾಶಿ ರಾಶಿ ತ್ಯಾಜ್ಯವನ್ನು ಬೆಟ್ಟದ ತಪ್ಪಲಿನಾದ್ಯಂತ ಆಯ್ದು ವಿಲೆವಾರಿ ಮಾಡುವ ಕಾರ್ಯವನ್ನು ಈ ತಂಡ ಮಾಡಿತ್ತು. ಈ ಬಾರಿಯೂ ಸಂಘದ ಸಂಯೋಜಕರಾದ ಜಯರಾಂ ಇವರ ತಂಡ ಕುಮಾರಪರ್ವತ ಚಾರಣದ ಆರಂಭದಲ್ಲೇ ಕುಮಾರಪರ್ವತದ ಗಿರಿಗದ್ದೆಗೆ ಸುಮಾರು 100-120 ಹಲಸಿನ ಮತ್ತು ಮಾವಿನ ಗಿಡಗಳನ್ನು ಹೊತ್ತು, ಗಿರಿಗದ್ದೆ ಹಾಗೂ ಕಲ್ಲು ಮಂಟಪ ಸುತ್ತ ಮುತ್ತಲಿನ ಪರಿಸರದಲ್ಲಿ ಗಿಡಗಳನ್ನು ನೆಟ್ಟಿದ್ದಾರೆ.
ಸಂಘದ ಸದಸ್ಯರಾದ ಮಂಥನ ರೈ, ಅರಣ್ಯ ಇಲಾಖೆಯ ಕುಮಾರ ಪರ್ವತ ಪರಿವೀಕ್ಷಕರಾದ ಸಜ್ಜನ್, ಮಿಲನ್, ಶಿವರಾಮ್ ಹಾಗೂ ಗುರುಶಾಂತ್ ಉಪಸ್ಥಿತರಿದ್ದರು. ದುರ್ಗಮ ಹಾದಿಯಲ್ಲಿ ಸುಮಾರು ೮ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಿಡಗಳನ್ನು ಹೊತ್ತು ನಾಟಿ ಮಾಡುವ ಉತ್ತಮ ಕಾರ್ಯವನ್ನು ಮಾಡಿದ್ದಾರೆ.
ಹಾಗೆಯೆ ಚಾರಣದ ಬಗ್ಗೆ ಯುವ ಮನಸ್ಸುಗಳಲ್ಲಿ ಒಲವನ್ನು ಮೂಡಿಸುವ ಕಾರ್ಯವನ್ನು ಈ ಸಂಘ ಮಾಡುತ್ತಾ ಇದೆ. ಪ್ರಸ್ತುತ ಸಂಘದ ಸದಸ್ಯರು, ಚಾರಣ ಪ್ರಿಯರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಟ್ರೆಕ್ಕಿಂಗ್ ಪ್ರದೇಶಗಳಾದ ಕುಮಾರಪರ್ವತ,ಎತ್ತಿನಬುಜ, ಬಂಡಾಜೆ, ಬಳ್ಳಲಾರಾಯನ ದುರ್ಗಕೋಟೆ ಮುಂತಾದ ಪ್ರದೇಶಗಳಿಗೆ ಮಾರ್ಗದರ್ಶಕರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ. ತಂಡದ ಬೆನ್ನೆಲುಬಾಗಿರುವ ಜಯರಾಮ್ ನಿರ್ದೇಶನದಲ್ಲಿ ಚಾರಣ ಹಾಗೂ ಸಾಹಸ ಆಧಾರಿತ “ಮಲೆಅಂಗಾರ” ಎಂಬ ಕಿರುಚಿತ್ರ ತೆರೆಯ ಮೇಲೆ ಬರಲಿದೆ.

ಪ್ರತಿ ವರ್ಷದಂತೆ ಕುಮಾರಪರ್ವತದಲ್ಲಿ ಸ್ವಚ್ಚತೆ ಕಾರ್ಯಕ್ರಮ ನಡೆಸುವ ಚಾರಣಸಂಘ ಈ ವರ್ಷ ಗಿಡ ನೆಡುವ ಕಾರ್ಯಕ್ರಮ ನಡೆಸುವುದು ತಿಳಿದು ತುಂಬಾ ಸಂತೋಷವಾಯಿತು. ಪ್ರತಿದಿನ ನಡೆದುಕೊಂಡು ಬರುವುದೇ ಕಷ್ಟ, ಅಂತಹ ಈ ಕಾಲದಲ್ಲಿ ಅಷ್ಟೊಂದು ಗಿಡ ಹೊತ್ತು ತಂದು ನಾಟಿ ಮಾಡುವುದು ದೊಡ್ಡ ಸಾಹಸವೇ ಸರಿ. ಒಂದು ಒಳ್ಳೆಯ ಕಾರ್ಯಕ್ಕೆ ನಮ್ಮ ಅರಣ್ಯ ಇಲಾಖೆ ಯಾವತ್ತು ಕೈಜೋಡಿಸುತ್ತೇವೆ.
ಅರಣ್ಯ ಪರಿವೀಕ್ಷಕ ಕುಮಾರಪರ್ವತ ವಲಯ

ಸುಮಾರು ಐದು ವರ್ಷಗಳ ಹಿಂದೆ ಚಾರಣ, ಸುತ್ತಾಟಕೆಂದೇ ಹುಟ್ಟಿಕೊಂಡ ತಂಡ ಮುಂದಕ್ಕೆ “ನಮ್ಮ ಕುಡ್ಲ ಚಾರಣ ಸಂಘ ಮಂಗಳೂರು” ಹೆಸರಿನಿಂದ ಗುರುತಿಸಿಕೊಂಡಿತು. ಮಂಗಳೂರಿನ ಬಿಸಿ ರಕ್ತದ ಯುವಕರ ಈ ತಂಡದಲ್ಲಿ ಸುಮಾರು 70ಕ್ಕೂ ಅಧಿಕ ಸದಸ್ಯರಿದ್ದಾರೆ. ಕಳೆದ ಐದು ವರ್ಷಗಳಿಂದ ಸುಮಾರು 60ಕ್ಕು ಅಧಿಕ ಚಾರಣ, 23 ಬೈಕ್ ರೈಡ್ಗಳನ್ನು, ೮ ಸ್ವಚ್ಚತಾ ಕಾರ್ಯಗಳನ್ನು, ಮಂಗಳೂರಿನ ಅನಾಥ ಆಶ್ರಮದ ಮಕ್ಕಳಿಗೆ, ಪ್ರತಿ ವರ್ಷ ಮಕ್ಕಳ ದಿನಾಚರಣೆಯ ದಿನ “ಸಿಂಚನಾ ” ಎಂಬ ಕಾರ್ಯಕ್ರಮವನ್ನು ಕಳೆದ ೩ ವರ್ಷಗಳಿಂದ ಯಶಸ್ವಿಯಾಗಿ ನಡಸಿಕೊಂಡು ಬರುತ್ತಿದೆ. ಸಿಂಚನ ಕಾರ್ಯಕ್ರಮದಲ್ಲಿ ಮಂಗಳೂರಿನ ಅನಾಥ ಮಕ್ಕಳಿಗೆ, ನಗರದ ಪ್ರತಿಭಾವಂತ ಬಾಲ ಕಲಾವಿದರ, ಚಿತ್ರರಂಗದವರ ಜೊತೆ ಒಂದು ದಿನ ಸುಂದರ ಕ್ಷಣಗಳನ್ನು ಕಳೆಯುವಂತೆ ಮಾಡುವುದು ಸಂಘದ ಆಶಯವಾಗಿದೆ. ಪ್ರಸ್ತುತ ಸಿಂಚನ ಕಾರ್ಯಕ್ರಮದಲ್ಲಿ ಕೋಸ್ಟ್ಲಲ್ ಹುಡ್ ಸ್ಟಾರ್ ರೂಪೇಶ್ ಶೆಟ್ಟಿ,ಕನ್ನಡ ಕಾಮೆಡಿ ಕಿಲಾಡಿ ಕಲಾವಿದರು,ಬಲೆ ತೆಲಿಪಲೆ ಕಲಾವಿದರು, “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು” ಚಿತ್ರದ ಎಲ್ಲಾ ಕಲಾವಿದರು,ಸ್ಟಾರ್ ಸಿಂಗರ್ ತಾರೆಯರು, ಡಾನ್ಸ್ ಡಾನ್ಸ್ ಕಲಾವಿದರು ಹಾಗೂ ಇನ್ನಿತರ ಹಲವಾರು ಕಲಾವಿದರು ಸಾಕ್ಷಿಯಾಗಿದ್ದಾರೆ.

ಚಾರಣದ ಜೊತೆಗೆ ಸಾಮಾಜಿಕ ಹಿತಕ್ಕಾಗಿ ಕೆಲಸ ಮಾಡುವ ದೃಷ್ಟಿಯಿಂದ ತಂಡ ಕಟ್ಟಿಕೊಂಡಿದ್ದೇವೆ,ಯಾರು ಸ್ವಚ್ಚ ಮಾಡದ ದುರ್ಗಮ ಪ್ರದೇಶಗಳ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದೇವೆ,ಮುಂದಿನ ದಿನಗಳಲ್ಲಿ ಟ್ರೆಕ್ಕಿಂಗ್ ಜೊತೆಗೆ ಪ್ರತಿ ವರ್ಷ ಗಿಡ ನೆಡುವ ಕಾರ್ಯಕ್ರಮ ಹಾಗೂ ಟ್ರೆಕ್ಕಿಂಗ್ ಪ್ರದೇಶಗಳ ಸ್ವಚ್ಚತೆ ಬಗ್ಗೆ ಪ್ರತ್ಯೇಕ ಕಾಳಜಿ ವಹಿಸುತ್ತೇವೆ,ಇದಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಲು ಯುವಕ ಯುವತಿರಿಗೆ ಮುಕ್ತ ಅವಾಶವನ್ನು ಒದಗಿಸುತ್ತೇವೆ.
– ಜಯರಾಮ್ ಪಂಬೆತ್ತಾಡಿ,
ನಮ್ಮ ಕುಡ್ಲ ಚಾರಣ ಸಂಘದ ಸಂಸ್ಥಾಪಕ

ಇತ್ತೀಚಿನ ಸುದ್ದಿ

ಜಾಹೀರಾತು