11:19 AM Saturday27 - November 2021
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಪುಂಡರ ಎರಡು ತಂಡಗಳ ನಡುವೆ ಮಾರಾಮಾರಿ; ರಸ್ತೆಯಲ್ಲಿ ಓಡಾಡಿ ಹೊಡೆದಾಟ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ  ಭೂಮಿ ಕಂಪನ: ಭಯಭೀತರಾದ ಜನ ಆರೋಗ್ಯ ಇಲಾಖೆಯಲ್ಲೊಬ್ಬ ಕಚ್ಚೆ ಹರುಕ ವೈದ್ಯ!!: ಗುತ್ತಿಗೆ ಸಿಬ್ಬಂದಿ ಯುವತಿಯರ ಜತೆಗಿನ ರಾಸಲೀಲೆ… ದೇವಸ್ಥಾನದೊಳಗೆ ಸೀದಾ ಪ್ರವೇಶಿಸಿದ ಆ ಭಿಕ್ಷುಕಿ ಅಜ್ಜಿ ಸ್ವಾಮೀಜಿ ಕೈಗೆ ಕೊಟ್ಟಿದ್ದೇನು? ಆಂಜನೇಯ… ವೇದಾವತಿ ಡ್ಯಾಂ: ನದಿಯಲ್ಲಿ ಈಜದಂತೆ, ನೀರಿಗಿಳಿದು ಸೆಲ್ಫಿ ತೆಗೆಯದಂತೆ ಶಾಸಕ ರಘುಮೂರ್ತಿ ಮನವಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ಎದೆ ನೋವು: ಪುಣೆ ಆಸ್ಪತ್ರೆಗೆ ದಾಖಲು ವೇದಾವತಿ ಚೆಕ್ ಡ್ಯಾಂನಲ್ಲಿ ನೀರು ಪಾಲಾದ ಇಬ್ಬರ ಪೈಕಿ ಒಂದು ಶವ ಪತ್ತೆ:… ನಿರಂತರ ಮಳೆ: ಅಥಣಿಯಲ್ಲಿ ಸಾವಿರಾರು ಎಕರೆ ದ್ರಾಕ್ಷೆ ಬೆಳೆ ನಾಶ; ಆಕಾಶದತ್ತ ಮುಖ… ಅಮೃತ ಮಹೋತ್ಸವ: ನ.27ರಂದು ಮಂಗಳೂರು ರಾಮಕೃಷ್ಣ ಮಠಕ್ಕೆ ಗೌರವಾಭಿನಂದನೆ ಹಾಗೂ ಪೌರಸಮ್ಮಾನ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: 4 ಮಂದಿ ಬಂಧನ; ತುಟಿ ಬಿಚ್ಚದ…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಅಕ್ರಮಗಳಿಗೆ ಕುಮ್ಮಕ್ಕು, ಮಮೂಲಿಗಾಗಿ ಬೆದರಿಕೆ.!?; ಇಬ್ಬರು ಪೊಲೀಸರ ವಿರುದ್ಧವೇ ಎಫ್ ಐಆರ್ ದಾಖಲು

03/11/2021, 16:21

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿಯಲ್ಲಿ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿದ್ದು ಮಾಮೂಲು ಕೊಡದಿದ್ದರೆ ಕೇಸ್ ಹಾಕುವುದಾಗಿ ತಮಗೆ ಬೆದರಿಸಿದ್ದಾರೆಂದು ದೂರುದಾರ ನೀಡಿದ ಹೇಳಿಕೆಯಂತೆ ಕೂಡ್ಲಿಗಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸರ

ವಿರುದ್ಧ ಹೊಸಪೇಟೆ ಚಿತ್ವಾಡ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರ ಕೂಡ್ಲಿಗಿ ತಾಲೂಕು ಈಚಲ ಬೊಮ್ಮನಹಳ್ಳಿ ಗ್ರಾಮದ 

ಸಂತೋಷ ಅವರ ನೀಡಿದ ಹೇಳಿಕೆಯಂತೆ, ಚಿತವಾಡ್ಗಿ ಪೊಲೀಸ್ ಠಾಣೆಯಲ್ಲಿ ಕೂಡ್ಲಿಗಿ ಪೊಲೀಸ್ ಕಾನ್ ಸ್ಟೇಬಲ್ ಗಳಾದ ಪೂಜಾರಹಳ್ಳಿ ಮೂಲದ ಶರಣಪ್ಪಮತ್ತು ಬಣವಿಕಲ್ಲು ಮೂಲದ ಮಂಜುನಾಥ ಎಂಬವರ ವಿರುದ್ಧ ದೂರು ದಾಖಲಾಗಿದೆ. ಈ ಇಬ್ಬರು ಆರೋಪಿತರು ಅಕ್ರಮ ದಂಧೆಗಳಾದ ಅಕ್ರಮ ಮದ್ಯ ಮಾರಾಟ, ಮರಳು ಸಾಗಾಣಿಕೆಗೆ ಕುಮ್ಮಕ್ಕು ನೀಡಿದ್ದು, ಇದರಿಂದ ಬರುವ ಮಾಮೂಲು ವಸೂಲಿ ಮಾಡುತ್ತಾ ಮಾಮೂಲು ಕಮ್ಮಿಯಾದಲ್ಲಿ ತಕ್ಷಣ ಅಕ್ರಮದಲ್ಲಿ ಭಾಗಿಯಾದವರನ್ನು ಕರೆಸಿ ಹಣ ನೀಡದಿದ್ದರೆ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಅಂತ ಬೆದರಿಸುತ್ತಾರೆಂದು. ಈ ಬಗ್ಗೆ ನ್ಯಾಯ ಕೇಳಿದರೆ ಇವರು ತನಗೆ ಬೆದರಿಕೆ ಹಾಕಿರುವುದಾಗಿ, ಅದಕ್ಕಾಗಿ ತನಗೆ ರಕ್ಷಣೆ ನೀಡಬೇಕೆಂದು ದೂರುದಾರ 

ಸಂತೋಷ ಚಿತ್ವಾಡಗಿ ಪೊಲೀಸ್ ಠಾಣೆಯಲ್ಲಿ ದೂರು  ನೀಡಿದ್ದಾರೆ. ಅವರ ಹೇಳಿಕೆಯನ್ವಯ ಕೂಡ್ಲಿಗಿ ಪೊಲೀಸ್ ಪೇದೆಗಳಾದ ಶರಣಪ್ಪ ಹಾಗೂ ಮಂಜುನಾಥರ ವಿರುದ್ಧ,ಚಿತ್ವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು