11:32 AM Saturday27 - November 2021
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಪುಂಡರ ಎರಡು ತಂಡಗಳ ನಡುವೆ ಮಾರಾಮಾರಿ; ರಸ್ತೆಯಲ್ಲಿ ಓಡಾಡಿ ಹೊಡೆದಾಟ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ  ಭೂಮಿ ಕಂಪನ: ಭಯಭೀತರಾದ ಜನ ಆರೋಗ್ಯ ಇಲಾಖೆಯಲ್ಲೊಬ್ಬ ಕಚ್ಚೆ ಹರುಕ ವೈದ್ಯ!!: ಗುತ್ತಿಗೆ ಸಿಬ್ಬಂದಿ ಯುವತಿಯರ ಜತೆಗಿನ ರಾಸಲೀಲೆ… ದೇವಸ್ಥಾನದೊಳಗೆ ಸೀದಾ ಪ್ರವೇಶಿಸಿದ ಆ ಭಿಕ್ಷುಕಿ ಅಜ್ಜಿ ಸ್ವಾಮೀಜಿ ಕೈಗೆ ಕೊಟ್ಟಿದ್ದೇನು? ಆಂಜನೇಯ… ವೇದಾವತಿ ಡ್ಯಾಂ: ನದಿಯಲ್ಲಿ ಈಜದಂತೆ, ನೀರಿಗಿಳಿದು ಸೆಲ್ಫಿ ತೆಗೆಯದಂತೆ ಶಾಸಕ ರಘುಮೂರ್ತಿ ಮನವಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ಎದೆ ನೋವು: ಪುಣೆ ಆಸ್ಪತ್ರೆಗೆ ದಾಖಲು ವೇದಾವತಿ ಚೆಕ್ ಡ್ಯಾಂನಲ್ಲಿ ನೀರು ಪಾಲಾದ ಇಬ್ಬರ ಪೈಕಿ ಒಂದು ಶವ ಪತ್ತೆ:… ನಿರಂತರ ಮಳೆ: ಅಥಣಿಯಲ್ಲಿ ಸಾವಿರಾರು ಎಕರೆ ದ್ರಾಕ್ಷೆ ಬೆಳೆ ನಾಶ; ಆಕಾಶದತ್ತ ಮುಖ… ಅಮೃತ ಮಹೋತ್ಸವ: ನ.27ರಂದು ಮಂಗಳೂರು ರಾಮಕೃಷ್ಣ ಮಠಕ್ಕೆ ಗೌರವಾಭಿನಂದನೆ ಹಾಗೂ ಪೌರಸಮ್ಮಾನ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: 4 ಮಂದಿ ಬಂಧನ; ತುಟಿ ಬಿಚ್ಚದ…

ಇತ್ತೀಚಿನ ಸುದ್ದಿ

ಗೆಳತಿಗೆ ಸುತ್ತಾಡಲು ಸಾಲುತ್ತಿರಲಿಲ್ಲ ಸಂಬಳ : ಕೆಲಸ ಬಿಟ್ಟು ಸರಗಳ್ಳತನ ಶುರು ಮಾಡಿಕೊಂಡ ಸಿವಿಲ್ ಎಂಜಿನಿಯರ್

03/11/2021, 14:04

ಮುಂಬಯಿ (Reporterkarnataka.com)

ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಸಿಗೋ ಸ್ವಲ್ಪ ಸಂಬಳದಲ್ಲಿ ಇಡೀ ಸಂಸಾರವನ್ನು ನೋಡಿ‌ಕೊಳ್ಳುವವರ ನಡುವೆ ಇಲ್ಲೊಬ್ಬ ಭೂಪ ತನ್ನ ಗರ್ಲ್ ಫ್ರೆಂಡ್‌ಗೆ ಸುತ್ತಾಡಲು ಸಂಬಳ ಸಾಲುವುದಿಲ್ಲವೆಂದು ಸಿವಿಲ್‌ ಇಂಜಿನಿಯರಿಂಗ್‌ ಕೆಲಸ ಬಿಟ್ಟು ಸರ ಕಳ್ಳತನದ ದಂಧೆಗೆ ಇಳಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

2015 ರಲ್ಲಿಯೇ ಸಿವಿಲ್‌ ಇಂಜಿನಿಯರಿಂಗ್‌ ಪದವಿ ಪಡೆದ ಉಮೇಶ್‌ ಪಾಟೀಲ್‌ (27) ನಂತರ ಕಾಂಟ್ರಾಕ್ಟರ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಕಾಂಟ್ರಾಕ್ಟರ್‌ ಕೆಲಸದಲ್ಲಿ ಬರುವ ಸಂಬಳದಲ್ಲಿ ತನ್ನ ಖರ್ಚು ಹಾಗೂ ತನ್ನ ಗೆಳತಿಯ ಖರ್ಚನ್ನು ನಿಭಾಯಿಸಲು ಆಗುತ್ತಿರಲಿಲ್ಲಾ.

ಬೇರೆ ಕೆಲಸ ಮಾಡುವಂತ ಶ್ರಮಜೀವಿಯೂ ಈತನಾಗಿರಲಿಲ್ಲ. ಈ ಕಾರಣದಿಂದ ಸುಲಭ ವಿಧಾನದಲ್ಲಿ ಆದಾಯ ಗಳಿಸಬೇಕೆಂಬುದು ಉಮೇಶ್‌ ಪಾಟೀಲ್‌ ಲೆಕ್ಕಾಚಾರವಾಗಿತ್ತು.

ಇಷ್ಟೇ ಅಲ್ಲದೇ ಉಮೇಶ್‌ ಪಾಟೀಲ್‌ ಸರಕಳ್ಳತನ ಮಾಡಿದ 45 ಲಕ್ಷ ಹಣದಿಂದ ಫ್ಲಾಟ್‌ ಖರೀದಿಸಿದ್ದಾನೆ. ಅಲ್ಲದೇ ಉಮೇಶ್‌ ಪಾಟೀಲ್‌ ಬ್ಯಾಂಕ್‌ ಅಕೌಂಟ್‌ ನಲ್ಲಿ 20 ಲಕ್ಷ ರೂಪಾಯಿ ಬ್ಯಾಲೆನ್ಸ್‌ ಕೂಡ ಪತ್ತೆಯಾಗಿದೆ. ಗೆಳತಿ ಜೊತೆ ಸುತ್ತಾಡಲು ಹಾಗೂ ಐಷಾರಾಮಿ ಜೀವನ ನಡೆಸಲು ತನ್ನ ವೇತನ ಸಾಲುತ್ತಿರಲಿಲ್ಲಾ ಹೀಗಾಗಿ ಸರಕಳ್ಳತನಕ್ಕೆ ಇಳಿದಿರುವುದಾಗಿ ಪೋಲಿಸರ ಮುಂದೆ ಉಮೇಶ್‌ ಪಾಟೀಲ್‌ ಬಾಯಿ ಬಿಟ್ಟಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು