10:24 PM Thursday2 - December 2021
ಬ್ರೇಕಿಂಗ್ ನ್ಯೂಸ್
ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಹೆತ್ತವರು ಮದುವೆ ಮಾಡಿಸದ ಬೇಸರ: ನೇಣು ಬಿಗಿದು ಪ್ರೇಮಿಗಳು ಆತ್ಮಹತ್ಯೆ  ಸರ್ವಧರ್ಮಿಯರು ಸಂದರ್ಶಿಸುವ ಪುಣ್ಯ ಕ್ಷೇತ್ರ ಧರ್ಮಸ್ಥಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ… ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು;… ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಸಾಲು ಸಾಲಾಗಿ ಆಸ್ಪತ್ರೆ ಸೇರುತ್ತಿರುವ ಪಚ್ಚನಾಡಿ ತ್ಯಾಜ್ಯ ದುರಂತ ಸಂತ್ರಸ್ತರು: ಜಿಲ್ಲಾಧಿಕಾರಿ ಇತ್ತ… ನಾದಬ್ರಹ್ಮ ಹಂಸಲೇಖಗೆ ಹೈಕೋರ್ಟ್ ಬಿಗ್‌ ರಿಲೀಫ್ : ಪ್ರಕರಣ ದಾಖಲಾತಿಗೆ ತಡೆಯಾಜ್ಞೆ; ದೂರುದಾತರಿಗೆ… ಚಿತ್ರದುರ್ಗ: ಕಾರು- ಬೈಕ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು; ಇನ್ನೊರ್ವ ಗಂಭೀರ… ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಚಿತ್ರದುರ್ಗದಲ್ಲಿ ಸಿದ್ದು…

ಇತ್ತೀಚಿನ ಸುದ್ದಿ

ಮೇಯರ್ ಊರಲ್ಲಿದ್ದಾರಾ?: ಏನಿದು ಪಾಲಿಕೆ ಆಡಳಿತ?: 6 ಲಕ್ಷ ಜನಸಂಖ್ಯೆಯ ನಗರಕ್ಕೆ 3 ದಿನ ನೀರಿಲ್ಲಾಂದ್ರೆ ಹೇಗೆ?

28/10/2021, 12:48

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಮಂಗಳೂರು ಮಹಾನಗರಪಾಲಿಕೆಯ ಸೋಮಾರಿತನದ ಬೇಜವಾಬ್ದಾರಿಯುತ ಆಡಳಿತಕ್ಕೆ ಇದೊಂದು ಜೀವಂತ ನಿದರ್ಶನ. ಅದೇನೆಂದರೆ 6 ಲಕ್ಷ ಜನಸಂಖ್ಯೆ ಹೊಂದಿದ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 3 ದಿನಗಳ ಕಾಲ ಕುಡಿಯುವ ನೀರಿಲ್ಲ.

ಇಡೀ ಕಡಲನಗರಿಗೆ ನೀರು ಸರಬರಾಜು ಮಾಡುವ ತುಂಬೆಯ ರೇಚಕದಲ್ಲಿ ದುರಸ್ತಿ ಕಾರ್ಯದ ನೆಪ ನೀಡಿ ನೀರು ಸರಬರಾಜು ಬಂದ್ ಮಾಡಲಾಗಿದೆ. ಇಂದಿನಿಂದ 3 ದಿನಗಳ ಕಾಲ ನೀರು ಸರಬರಾಜು ಇರುವುದಿಲ್ಲ.

ತುಂಬೆ ರೇಚಕದಲ್ಲಿ ದುರಸ್ತಿ ಕಾರ್ಯ ಆಗಾಗ ನಡೆಯುತ್ತಿರುತ್ತದೆ. ಆದರೆ 3 ದಿನಗಳ ಕಾಲ ಮಂಗಳೂರಿಗೆ ನೀರು ಬಂದ್ ಮಾಡಿ ದುರಸ್ತಿ ಕಾರ್ಯ ಇಷ್ಟರವರೆಗೆ ನಡೆದಿಲ್ಲ. ಒಂದು ದಿನ ವ್ಯತ್ಯಯವಾಗುತ್ತದೆಯಷ್ಟೇ ಎಂದು ಮಂಗಳೂರಿನ ಹಿರಿಯ ನಾಗರಿಕರು ಹೇಳಿಕೊಳ್ಳುತ್ತಿದ್ದಾರೆ.

ನೀರು ಬಂದ್ ಮಾಡಿರುವುದು ತೊಂದರೆ ಇಲ್ಲ ಬಿಡಿ, ಮೇಯರ್ ಪ್ರೇಮಾನಂದ ಶೆಟ್ಟಿ, ಕಮಿಷನರ್ ಅಕ್ಷಯ್ ಶ್ರೀಧರ್ ಮತ್ತು ಅವರ 60 ಮಂದಿಯ ಟೀಮ್ ಗೆ ಇದರಿಂದ ತೊಂದರೆಯಾಗುವುದಿಲ್ಲ.

ಹಾಗೆ ಮಂಗಳೂರಿನ ಶ್ರೀಮಂತ ಕುಳಗಳಿಗೆ ಹಾಗೂ 1 ಲಕ್ಷಕ್ಕಿಂತ ಅಧಿಕ ನೀರಿನ ಬಿಲ್ ಬಾಕಿ ಇಟ್ಟವರಿಗೂ ಇದರಿಂದ ಬಾಧಕವಾಗುವುದಿಲ್ಲ. ಇವರೆಲ್ಲರ ಮನೆಯ ಅಡಿಯಲ್ಲಿ ಲಕ್ಷ ಲೀಟರ್ ಸಾಮರ್ಥ್ಯದ ಸಂಪು ಟ್ಯಾಂಕ್ ಇದೆ. ತಪ್ಪಿದರೆ ಕಾರ್ಪೊರೇಶನ್  ಟ್ಯಾಂಕರ್ ನಲ್ಲೇ ಅವರಿಗೆ ಪುಕ್ಕಟೆಯಾಗಿ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ. ಆದರೆ ಮಂಗಳೂರಿನ ಕೆಳ

ಮಧ್ಯಮ ಹಾಗೂ ಬಡ ಕುಟುಂಬದವರು ಏನು ಮಾಡಬೇಕು ಸ್ವಾಮೀ?

ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ 3 ದಿನಗಳ ಕಾಲ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಇಲ್ಲಿನ ನಾಗರಿಕರು ವ್ಯಾಖ್ಯಾನಿಸುತ್ತಿದ್ದಾರೆ.ಕಮಿಷನರ್ 2 ದಿನಗಳ ಹಿಂದೆಯೇ ಈ ಕುರಿತು ಆದೇಶ ಹೊರಡಿಸಿದ್ದರು. ಭರತ್ ಲಾಲ್ ಮೀನಾ, ಪೊನ್ನರಾಜ್ ಅವರಂಥ ಐಎಎಸ್ ಅಧಿಕಾರಿಗಳಿಗೆ ಜನರ ಕಷ್ಟ ಬೇಗ ಅರಿವಿಗೆ ಬರುತ್ತದೆ. ಅಕ್ಷಯ್ ಶ್ರೀಧರ್ ತರಹದ ಐಎಎಸ್ ಅಧಿಕಾರಿಗಳಿಗೆ ತಳಮಟ್ಟದ ಜನರ ಸಂಕಷ್ಟ ಅರಿವಾಗುವುದು ಸ್ವಲ್ಪ ಕಷ್ಟ. ಆದರೆ ಇಲ್ಲಿನ ಮೇಯರ್, ಉಪ ಮೇಯರ್, ಕಾರ್ಪೊರೇಟರ್ ಗಳು ಇಂಗ್ಲೆಂಡ್ ನಿಂದ ಬಂದವರು ಅಲ್ಲ ತಾನೆ? ಇವರೆಲ್ಲ ಈ ನೆಲದವರಲ್ಲವೇ? ಇವರಿಗೆ

ಬಡ ಮತ್ತು ಕೆಳ ಮಧ್ಯಮ ವರ್ಗದ ಜನರ ಸಂಕಷ್ಟ ಗೊತ್ತಾಗುವುದಿಲ್ಲವೇ?

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ 3 ದಿನಗಳ ಕಾಲ ನೀರು ಸರಬರಾಜು ಮಾಡದಿದ್ದರೆ, ಜನರು ಹೇಗೆ ಬದುಕು ಸಾಗಿಸಬೇಕು? ಮೊದಲೇ ಇಂಧನ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಕೆಂಗಟ್ಟು ಹೋಗಿರುವ ಜನರ ಬದುಕು ಹೇಗೆ? ಇದೆಲ್ಲ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅರ್ಥವಾಗಬೇಕು. ಪಾಲಿಕೆ ಕಮಿಷನರ್ ಒಂದು ನಿರ್ಧಾರಕ್ಕೆ ಬರುವ ಮುನ್ನ ಮೇಯರ್ ಹಾಗೂ ಅವರ ಕೌನ್ಸಿಲ್ ನ ಒಪ್ಪಿಗೆ ಪಡೆಯುವುದಿಲ್ಲವೇ? ಮೇಯರ್ ಇದಕ್ಕೆಲ್ಲ ಹೇಗೆ ಅನುಮೋದನೆ ನೀಡಿದರು? ಜನರಿಗೆ ಉತ್ತರಿಸುವ ಅಗತ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು