5:31 PM Friday19 - April 2024
ಬ್ರೇಕಿಂಗ್ ನ್ಯೂಸ್
ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ…

ಇತ್ತೀಚಿನ ಸುದ್ದಿ

ಕಾರ್ಕಳ ಪುರಸಭೆ ಮಾಸಿಕ ಸಭೆ: ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಪ್ರತಿಭಟನೆ

26/10/2021, 08:28

ಕಾರ್ಕಳ (reporterkarnataka.com): ಕಾರ್ಕಳ ಪುರಸಭೆ ಮುಖ್ಯ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ಸಿನ

ಸದಸ್ಯರು ಅಶ್ಪಾಕ್ ಅಹ್ಮದ್ ಅವರ‌ ನೇತೃತ್ವದಲ್ಲಿ ಸೋಮವಾರ ನಡೆದ ಪುರಸಭಾ ಮಾಸಿಕ ಸಭೆಯಲ್ಲಿ ಸದನ ಬಾವಿಗಿಳಿದು  ಪ್ರತಿಭಟನೆ ನಡೆಸಿದರು.

ಒಳಚರಂಡಿ ಕಾಮಗಾರಿ ಅವೈಜ್ಞಾನಿಕ ವಿಧಾನದಲ್ಲಿ ನಡೆಸಿರುವುದರಿಂದ ರಸ್ತೆ ಗುಂಡಿಗಳಿಂದ ತುಂಬಿ ಹೋಗಿದೆ. ಈ ಬಗ್ಗೆ ಹಲವಾರು ಬಾರಿ ದೂರುಗಳನ್ನು ನೀಡಿದರೂ ಯಾವುದೇ ಪ್ರಯೋಜನ ವಾಗಿಲ್ಲ. ಇದನ್ನು ಸರಿಪಡಿಸುವ ವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.

ಪುರಸಭೆಯ ಪ್ರತಿಪಕ್ಷದ ಸದಸ್ಯ ಶುಭದ ರಾವ್ ಮಾತನಾಡಿ, ಗುಂಡಿಗಳಿಂದಾಗಿ‌ ಯಾವುದೇ ವಾಹನಗಳು ಸಂಚರಿಸಲು ಸಾದ್ಯವೇ ಇಲ್ಲದಾಗಿದೆ. ಕಾರ್ಕಳ ದ ಮುಖ್ಯರಸ್ತೆ, ಮಣ್ಣಗೋಪುರ,ಮೂರು ಮಾರ್ಗ , ಮಂಗಳೂರು ರಸ್ತೆ , ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಉಳಿದಂತೆ ವಿಪಕ್ಷ ಸದಸ್ಯರಾದ‌ ವಿನ್ನಿಬೋಲ್ಡ್ಙ, ರೆಹಮತ್ ಎನ್. 
ಶೇಖ್, ಸೋಮನಾಥ ನಾಯ್ಕ, ಪ್ರತೀಮಾ ರಾಣೆ ,ನಳಿನಿ ಆಚಾರ್ಯ, ಹರೀಶ್ ದೇವಾಡಿಗ,ಪ್ರಭಾ ಕಿಶೋರ್ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಅದ್ಯಕ್ಷೆ ಸುಮಾ ಕೇಶವ್  ಮಾತನಾಡಿ‌,ಮಳೆಗಾಲ‌, ಅಕಾಲಿಕ ಮಳೆಯಿಂದಾಗಿ ಕೆಲಸಗಳು ನಿಗದಿತ ಸಮಯದಲ್ಲಿ ನಡೆಸಲು‌ ಸಾಧ್ಯವಾಗಲಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರಿಗೆ ಸರಿಪಡಿಸುವಂತೆ ತಿಳಿಸಲಾಗಿದೆ. ಮಾತ್ರವಲ್ಲ ಉಳಿದ ಕಡೆಗೂ ಪ್ಯಾಚ್  ಮಾಡಲು ಬೇರೆ ನಿಧಿಯಿಂದ ಹಣ ವಿನಿಯೋಗಿಸಲಾಗುವುದು ಈ ಬಗ್ಗೆ ಕ್ರಿಯಾ ಯೋಜನೆ ಮಾಡಲಾಗಿದೆ. ಮಳೆ ಕಡಿಮೆ ಆದ ನಂತರ ಕೆಲಸ ಪ್ರಾರಂಭಿಸಿಸಲಾಗುವುದು, ಇದಕ್ಕೆ ವಿಪಕ್ಷ ಸಂಪೂರ್ಣ ಸಹಕಾರ ಮಾಡುವಂತೆ ಮನವಿ ಮಾಡಿದರು.

ಇದಕ್ಕೆ ಒಪ್ಪಿದ ವಿಪಕ್ಷ ಸದಸ್ಯರು ಕಾಮಗಾರಿ ನಡೆಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಸದ್ಯಕ್ಕೆ ಅಧ್ಯಕ್ಷ ರ ಮಾತಿಗೆ ಗೌರವ ಸೂಚಕವಾಗಿ ಪ್ರತಿಭಟನೆಯನ್ನು ಹಿಂಪಡೆದು ಮಾಸಿಕ ಸಭೆಯಲ್ಲಿ ಭಾಗವಹಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯಿ ಸಮಿತಿಯ ಅಧ್ಯಕ್ಷ ಲಕ್ಷ್ಮಿ ನಾರಾಯಣ ಮಲ್ಯ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.


ಆಡಳಿತ ಪಕ್ಷದ ಸದಸ್ಯರಾದ ಯೋಗಿಶ್ ದೇವಾಡಿಗ ,ಶೋಭಾ ದೇವಾಡಿಗ, ಪ್ರದೀಪ್ ಮಾರಿಗುಡಿ, ನೀತಾ ಆಚಾರ್ಯ,  ಮಮತಾ, ಶಶಿಕಲಾ ಶೆಟ್ಟಿ, ಭಾರತೀ ಅಮೀನ್, ಮೀನಾಕ್ಷಿ ಗಂಗಾಧರ್, ನಾಮನಿರ್ದೇಶನ ಸದಸ್ಯರಾದ ಅವಿನಾಶ್ ಶೆಟ್ಟಿ, ಪ್ರಸನ್ನ, ಸಂತೋಷ್ ರಾವ್,ಅಶೋಕ್ ಸುವರ್ಣ, ಸಂಧ್ಯಾ ಮಲ್ಯ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು