10:43 AM Saturday27 - November 2021
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಪುಂಡರ ಎರಡು ತಂಡಗಳ ನಡುವೆ ಮಾರಾಮಾರಿ; ರಸ್ತೆಯಲ್ಲಿ ಓಡಾಡಿ ಹೊಡೆದಾಟ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ  ಭೂಮಿ ಕಂಪನ: ಭಯಭೀತರಾದ ಜನ ಆರೋಗ್ಯ ಇಲಾಖೆಯಲ್ಲೊಬ್ಬ ಕಚ್ಚೆ ಹರುಕ ವೈದ್ಯ!!: ಗುತ್ತಿಗೆ ಸಿಬ್ಬಂದಿ ಯುವತಿಯರ ಜತೆಗಿನ ರಾಸಲೀಲೆ… ದೇವಸ್ಥಾನದೊಳಗೆ ಸೀದಾ ಪ್ರವೇಶಿಸಿದ ಆ ಭಿಕ್ಷುಕಿ ಅಜ್ಜಿ ಸ್ವಾಮೀಜಿ ಕೈಗೆ ಕೊಟ್ಟಿದ್ದೇನು? ಆಂಜನೇಯ… ವೇದಾವತಿ ಡ್ಯಾಂ: ನದಿಯಲ್ಲಿ ಈಜದಂತೆ, ನೀರಿಗಿಳಿದು ಸೆಲ್ಫಿ ತೆಗೆಯದಂತೆ ಶಾಸಕ ರಘುಮೂರ್ತಿ ಮನವಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ಎದೆ ನೋವು: ಪುಣೆ ಆಸ್ಪತ್ರೆಗೆ ದಾಖಲು ವೇದಾವತಿ ಚೆಕ್ ಡ್ಯಾಂನಲ್ಲಿ ನೀರು ಪಾಲಾದ ಇಬ್ಬರ ಪೈಕಿ ಒಂದು ಶವ ಪತ್ತೆ:… ನಿರಂತರ ಮಳೆ: ಅಥಣಿಯಲ್ಲಿ ಸಾವಿರಾರು ಎಕರೆ ದ್ರಾಕ್ಷೆ ಬೆಳೆ ನಾಶ; ಆಕಾಶದತ್ತ ಮುಖ… ಅಮೃತ ಮಹೋತ್ಸವ: ನ.27ರಂದು ಮಂಗಳೂರು ರಾಮಕೃಷ್ಣ ಮಠಕ್ಕೆ ಗೌರವಾಭಿನಂದನೆ ಹಾಗೂ ಪೌರಸಮ್ಮಾನ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: 4 ಮಂದಿ ಬಂಧನ; ತುಟಿ ಬಿಚ್ಚದ…

ಇತ್ತೀಚಿನ ಸುದ್ದಿ

ಏಕವಚನ ಹಳ್ಳಿ ಸೊಗಡು ಆದ್ರೆ ಸೋನಿಯಾ, ರಾಹುಲ್ ಗೂ ಬಳಸಿ: ಸಿದ್ದರಾಮಯ್ಯರಿಗೆ ಹಳ್ಳಿ ಹಕ್ಕಿ ವಿಶ್ವನಾಥ್ ಸವಾಲು  

25/10/2021, 13:06

ಬೆಂಗಳೂರು(reporterkarnataka.com):

ಏಕವಚನ ಹಳ್ಳಿ ಸೊಗಡು ಆದ್ರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಏಕವಚನ ಬಳಸಿ ಎಂದು ಹಳ್ಳಿಹಕ್ಕಿ ಎಂದೇ ಖ್ಯಾತರಾಗಿರುವ ಮಾಜಿ ಸಚಿವ ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸವಾಲು ಹಾಕಿದರು.

ನೀವು ಎಲ್ಲರನ್ನೂ ಏಕವಚನದಲ್ಲಿ ಕರೆಯುತ್ತಿರಿ. ಮಾಜಿ ಪ್ರಧಾನಿ ದೇವೇಗೌಡರನ್ನು ಕೂಡ ನೀವು ಬಿಟ್ಟಿಲ್ಲ. ಕೇಳಿದ್ರೆ, ಏಕವಚನ ಹಳ್ಳಿ ಸೊಗಡು, ಅಭ್ಯಾಸವನ್ನು ಬದಲಾಯಿಸಲು ಆಗುವುದಿಲ್ಲ ಅಂಥ ಹೇಳುತ್ತೀರಿ. ಹಾಗಾದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಕೂಡ ಏಕವಚನದಲ್ಲಿ ಕರೆಯಿರಿ. ಸೋನಿಯಾ ಮೇಡಂ, ರಾಹುಲ್ ಜೀ ಅಂತ ಯಾಕೆ ಹೇಳುತ್ತೀರಿ ಎಂದು ವಿಶ್ವನಾಥ್ ಪ್ರಶ್ನಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಆರಿತೇ ನೀವು ಬಾದಾಮಿಗೆ ಹೋದ್ರೀ. ನಿಮ್ಮನ್ನು ಯಾರೂ ಸೋಲಿಸಿಲ್ಲ. ಮತದಾರರು ನಿಮ್ಮನ್ನು ಸೋಲಿಸಿಲ್ಲ. ನಿಮ್ಮ ದರ್ಪ, ಅಹಂಕಾರ ನಿಮ್ಮನ್ನು ಸೋಲಿಸಿದೆ.

ಡಾ.ಜಿ. ಪರಮೇಶ್ವರ್ ಅವರನ್ನು ನೀವು ಸೋಲಿಸಿಲ್ಲವೇ?  ಎಂದು ಅವರು ಮತ್ತೆ ಪ್ರಶ್ನೆ ಹಾಕಿದರು.

ಇತ್ತೀಚಿನ ಸುದ್ದಿ

ಜಾಹೀರಾತು