2:11 PM Saturday4 - December 2021
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ಗಂಜಿಗುಂಟೆ ಲಂಬಾಣಿ ತಾಂಡದಲ್ಲಿ ಹೆಚ್ಚುತ್ತಿದೆ ಬೀದಿ ನಾಯಿಗಳ ಕಾಟ: ಶ್ವಾನ ಕಡಿತಕ್ಕೆ ಯುವಕ ಬಲಿ ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ ಅಪಘಾತ: ಓರ್ವ ಸಿಬ್ಬಂದಿಗೆ ತೀವ್ರ… ಮಲೆನಾಡಲ್ಲಿ ಮತ್ತೆ ಮಳೆ ಅಬ್ಬರ: ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಕೃಷಿಕರು  ರಂಗಾಪುರ: ಇದು ಅಂಗನವಾಡಿ ಕಟ್ಟಡ ನಾ? ಅಥವಾ ಸಾರ್ವಜನಿಕ ಶೌಚಾಲಯ ನಾ? ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಹೆತ್ತವರು ಮದುವೆ ಮಾಡಿಸದ ಬೇಸರ: ನೇಣು ಬಿಗಿದು ಪ್ರೇಮಿಗಳು ಆತ್ಮಹತ್ಯೆ  ಸರ್ವಧರ್ಮಿಯರು ಸಂದರ್ಶಿಸುವ ಪುಣ್ಯ ಕ್ಷೇತ್ರ ಧರ್ಮಸ್ಥಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ… ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು;… ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್

ಇತ್ತೀಚಿನ ಸುದ್ದಿ

ಹೀಗೂ ಉಂಟೇ?!: ಗಂಡನನ್ನೇ 5 ಲಕ್ಷಕ್ಕೆ ಮಾರಿದ ಪತ್ನಿ; ಹಣ ಸಂದಾಯದ ವೇಳೆ ತಾಳಿ ಬಿಚ್ಚಿ ಕೊಡಲು ಒಪ್ಪಿಗೆ !

24/10/2021, 18:03

ಮಂಡ್ಯ:reporterkarnataka.com
ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಗಂಡನನ್ನೇ ಹೆಂಡತಿ 5 ಲಕ್ಷ ರೂಪಾಯಿಗೆ ಗಂಡನ ಪ್ರಿಯತಮೆಗೆ ಮಾರಿದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ವಿವರ: ರಮ್ಯ ಎಂಬುವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಪತ್ನಿ ಕೈಗೆ ಸಿಕ್ಕಿ ಬಿದ್ದಿದ್ದ. ಈ ವೇಳೆ ಪತ್ನಿ ಮತ್ತು ಪ್ರಿಯತಮೆಯ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದು ನ್ಯಾಯ ತೀರ್ಮಾನಕ್ಕಾಗಿ ವಿಷಯ ಪಂಚಾಯಿತಿ ಕಟ್ಟೆಗೆ ಬಂದಿತ್ತು.

ಪಂಚಾಯಿತಿಯಲ್ಲಿ ವಾದ ಪ್ರತಿವಾದಗಳು ನಡೆದವು ಕೊನೆಯಲ್ಲಿ ಪ್ರಿಯತಮೆ ಹೇಳಿಕೆ ಪ್ರಕಾರ ನಿನ್ನ ಗಂಡ ನನ್ನ ಬಳಿ 5 ಲಕ್ಷ ರೂ ಸಾಲ ಪಡೆದಿದ್ದಾನೆ ಅದನ್ನು ತೀರಿಸಿ ನಿನ್ನ ಗಂಡನನ್ನು ಕರೆದುಕೊಂಡು ಹೋಗು ಎಂದು ಸಂಬಂಧ ಇಟ್ಟು ಕೊಂಡಿದ್ದ ಮಹಿಳೆ ಪಂಚಾಯಿತಿಯಲ್ಲಿ ಬೇಡಿಕೆ ಇಟ್ಟಿದ್ದಾಳೆ. ಇದನ್ನು ಕೇಳಿದ ಪತ್ನಿ ಇಂತಹ ಗಂಡ ನನಗೆ ಬೇಕಿಲ್ಲ. ಪೊಲೀಸ್ ಸ್ಟೇಷನ್‌ಗೆ ಹೋಗಿ ಕೇಸ್ ಹಾಕಿ ನಿಮ್ಮನ್ನು ಕೋರ್ಟ್ ಕಚೇರಿ ಅಲೆಸ್ತಿನಿ ಎಂದು ವಾದ ಮಾಡಿದ್ದಾಳೆ.

ಕಡೆಗೆ ಜೀವನಾಂಶಕ್ಕಾಗಿ ಪತ್ನಿ ಪತಿಗೆ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾಳೆ, ಪ್ರಿಯತಮೆ 5 ಲಕ್ಷ ನಾನೇ ಕೊಡ್ತಿನಿ ಗಂಡನನ್ನು ಬಿಡುವಂತೆ ಪತ್ನಿಗೆ ಷರತ್ತು ಹಾಕಿದ್ದಾಳೆ. ಷರತ್ತಿಗೆ ಒಪ್ಪಿದ ಪತ್ನಿ ಮುಂದಿನ ತಿಂಗಳು ಹಣ ಕೊಟ್ಟು ಗಂಡನನ್ನು ಖರೀದಿಸುವಂತೆ ಸೂಚಿಸಿದ್ದಾಳೆ. ಹಣ ಕೊಟ್ಟ ವೇಳೆ ತಾಳಿ ಬಿಚ್ಚಿಟ್ಟು ಒಪ್ಪಂದ ಪತ್ರಕ್ಕೆ ಸಹಿ ಹಾಕಲು ಹೆಂಡತಿಯೂ ಒಪ್ಪಿಗೆ ನೀಡಿರುತ್ತಾಳೆ, ರಾಜಿ ಪಂಚಾಯಿತಿಯಲ್ಲಾದ ಮಹಿಳೆಯರಿಬ್ಬರ ಹಣದ ನ್ಯಾಯ ತೀರ್ಮಾನವನ್ನು ಕಂಡ ಗ್ರಾಮಸ್ಥರು ದಂಗಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು