11:04 AM Saturday27 - November 2021
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಪುಂಡರ ಎರಡು ತಂಡಗಳ ನಡುವೆ ಮಾರಾಮಾರಿ; ರಸ್ತೆಯಲ್ಲಿ ಓಡಾಡಿ ಹೊಡೆದಾಟ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ  ಭೂಮಿ ಕಂಪನ: ಭಯಭೀತರಾದ ಜನ ಆರೋಗ್ಯ ಇಲಾಖೆಯಲ್ಲೊಬ್ಬ ಕಚ್ಚೆ ಹರುಕ ವೈದ್ಯ!!: ಗುತ್ತಿಗೆ ಸಿಬ್ಬಂದಿ ಯುವತಿಯರ ಜತೆಗಿನ ರಾಸಲೀಲೆ… ದೇವಸ್ಥಾನದೊಳಗೆ ಸೀದಾ ಪ್ರವೇಶಿಸಿದ ಆ ಭಿಕ್ಷುಕಿ ಅಜ್ಜಿ ಸ್ವಾಮೀಜಿ ಕೈಗೆ ಕೊಟ್ಟಿದ್ದೇನು? ಆಂಜನೇಯ… ವೇದಾವತಿ ಡ್ಯಾಂ: ನದಿಯಲ್ಲಿ ಈಜದಂತೆ, ನೀರಿಗಿಳಿದು ಸೆಲ್ಫಿ ತೆಗೆಯದಂತೆ ಶಾಸಕ ರಘುಮೂರ್ತಿ ಮನವಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ಎದೆ ನೋವು: ಪುಣೆ ಆಸ್ಪತ್ರೆಗೆ ದಾಖಲು ವೇದಾವತಿ ಚೆಕ್ ಡ್ಯಾಂನಲ್ಲಿ ನೀರು ಪಾಲಾದ ಇಬ್ಬರ ಪೈಕಿ ಒಂದು ಶವ ಪತ್ತೆ:… ನಿರಂತರ ಮಳೆ: ಅಥಣಿಯಲ್ಲಿ ಸಾವಿರಾರು ಎಕರೆ ದ್ರಾಕ್ಷೆ ಬೆಳೆ ನಾಶ; ಆಕಾಶದತ್ತ ಮುಖ… ಅಮೃತ ಮಹೋತ್ಸವ: ನ.27ರಂದು ಮಂಗಳೂರು ರಾಮಕೃಷ್ಣ ಮಠಕ್ಕೆ ಗೌರವಾಭಿನಂದನೆ ಹಾಗೂ ಪೌರಸಮ್ಮಾನ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: 4 ಮಂದಿ ಬಂಧನ; ತುಟಿ ಬಿಚ್ಚದ…

ಇತ್ತೀಚಿನ ಸುದ್ದಿ

ಸಿನಿರಿಪೋರ್ಟ್ : ನಗಿಸಿ, ಅಳಿಸಿ ಭಾವುಕಗೊಳಿಸಿ, ತಾಯಿಯತ್ತ ಒಮ್ಮೆ ಹೊರಳಿ ನೋಡುವಂತೆ ಮಾಡುತ್ತೆ “ರತ್ನನ್ ಪ್ರಪಂಚ”

23/10/2021, 17:00

ಗಣೇಶ್ ಅದ್ಯಪಾಡಿ, ಮಂಗಳೂರು
adyapadyganesha@gmail.com

ಒಂದು ಕಡೆ ಎರಡೆರಡು ಸಿನಿಮಾಗಳು ಅಬ್ಬರಿಸಿ ಬೊಬ್ಬಿರಿದು ಥಿಯೇಟರ್‌ಗಳಿಗೆ ಇಳಿದಿದ್ದರೆ ಇಲ್ಲೊಂದು ಚಿತ್ರ ಸದ್ದಿಲ್ಲದೆ ಜನರ ಮನಸ್ಸು ಗೆಲ್ಲುತ್ತಿದೆ. ಹೌದು, ರೋಹಿತ್ ಪದಕಿ ನಿರ್ದೇಶನದ ರತ್ನನ್ ಪ್ರಪಂಚ ತನ್ನ ಕಥಾ ವಸ್ತುವಿನ ಮೂಲಕ ಚಿತ್ರ ಪ್ರೇಮಿಗಳ ಮನಸ್ಸು ಮುಟ್ಟುತ್ತಿದೆ.

ಅಮೇಜಾನ್ ಪ್ರೈಮ್ ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾ ಅಮೋಘ ಭಾವುಕ ಅನುಭವ ನೀಡುತ್ತಾ, ನಗಿಸಿ ಅಳಿಸಿ, ಒಂದಷ್ಟು ಪಾಠ ಕಲಿಸಿ, ಹೃದಯ ತುಂಬುವಂತೆ ಮಾಡಿ ನಿರಾಳಗೊಳಿಸಿ.. ಬದುಕಿನ ಮಜಲನ್ನು ಪರಿಚಯಿಸುತ್ತಾ ಮನಸ್ಸಲ್ಲಿ ಛಾಪನ್ನು ಮೂಡಿಸಿಬಿಡುತ್ತದೆ.

ತಾಯಿ ಮಗನ ನಡುವಿನ ಮಮತೆ ಹಾಗೂ ಮನಸ್ಥಿತಿಗಳ ನಡುವಿನ ತಿಕ್ಕಾಟದ ಜತೆಗೆ ಕಳೆದು ಹೋದ ನಿನ್ನೆ ಹಾಗೂ ಇಂದಿನ ವರ್ತಮಾನಕ್ಕೆ ಎರವಾದವರ ನಡುವಿನ ಹಲವಾರು ಭಾವುಕ ವಿಪ್ಲವಗಳನ್ನು ಕಣ್ಣ ಮುಂದೆ ಇಡುತ್ತದೆ.

ಪೆದ್ದುಪೆದ್ದಾಗಿ ನಡೆದುಕೊಳ್ಳುವ, ಮಗನ ಬಗ್ಗೆ ಅತಿಯಾದ ಪ್ರೀತಿ ಹಾಗೂ ಕಾಳಜಿ ಹೊಂದಿರುವ ತಾಯಿ ಪಾತ್ರದಲ್ಲಿ ಉಮಾಶ್ರೀ ಅವರ ನಟನೆ ಬಹಳ ಆಪ್ತವೆನಿಸಿಬಿಡುತ್ತದೆ. ಅತಿಯಾದ ಪ್ರೀತಿ ಕಾಳಜಿ ಮತ್ತೊಂದಿಷ್ಟು ತುಂಟತನ ಮನಸಿಗಿಳಿಯುತ್ತದೆ.

ಡಾಲಿ ಧನಂಜಯ್ ಕೂಡ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಫರ್ಸ್ಟ್ರೇಟೆಡ್ ಮಿಡಲ್ ಕ್ಲಾಸ್ ಮ್ಯಾನ್ ರತ್ನಾಕರನ ಕ್ಯಾರೆಕ್ಟರ್ ಇಡೀ ಸಿನಿಮಾದ ಮುಖ್ಯ ಕೇಂದ್ರ. ತನ್ನ ತಾಯಿ ತನ್ನನ್ನು ಹೆತ್ತವಳು ಅಲ್ಲ ಎಂದು ಗೊತ್ತಾದಾಗ ಮನೆ ಬಿಟ್ಟು ಹೆತ್ತ ತಾಯಿಯನ್ನು ಹುಡುಕಲು ಹೊರಟಾಗ ಆತ ಕಂಡುಕೊಳ್ಳುವ ಸತ್ಯಗಳು, ಜರ್ನಿಯಲ್ಲಿ ಎದುರಿಸುವ ಸಮಸ್ಯೆಗಳು, ಸುಖಗಳು, ಭೇಟಿಯಾಗುವ ಜನ, ಎದುರಿಸುವ ಭಾವ ತೀವ್ರತೆಯ ಸನ್ನಿವೇಶಗಳ ಭಾವ ತೀವ್ರತೆ ಹಾಗೂ ಅದನ್ನು ತಲುಪಿಸಿದ ಬಗೆ ಸೊಗಸಾಗಿದೆ.

ತಾಯಿಯನ್ನು ವಿವಿಧ ಮಜಲುಗಳಲ್ಲಿ ಅಥವಾ ತಾಯ್ತನವನ್ನು ಬೇರೆ ಬೇರೆ ರೀತಿಯಲ್ಲಿ ತೆರೆ ಮೇಲೆ ತರುವಂತಹ ಪ್ರಯತ್ನ ಮಾಡಿದ ರೋಹಿತ್ ಪದಕಿಯವರಿಗೆ ಶಭಾಶ್ ಎನ್ನಲೆ ಬೇಕು.

ತಾರಾಗಣದಲ್ಲಿರುವ ಶೃತಿ, ಅಚ್ಯುತ ಕುಮಾರ್, ರೇಬಾ ಮೋನಿಕಾ, ರವಿಶಂಕರ್, ಪ್ರಮೋದ್ ಮೊದಲಾದವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು