1:45 PM Saturday4 - December 2021
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ಗಂಜಿಗುಂಟೆ ಲಂಬಾಣಿ ತಾಂಡದಲ್ಲಿ ಹೆಚ್ಚುತ್ತಿದೆ ಬೀದಿ ನಾಯಿಗಳ ಕಾಟ: ಶ್ವಾನ ಕಡಿತಕ್ಕೆ ಯುವಕ ಬಲಿ ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ ಅಪಘಾತ: ಓರ್ವ ಸಿಬ್ಬಂದಿಗೆ ತೀವ್ರ… ಮಲೆನಾಡಲ್ಲಿ ಮತ್ತೆ ಮಳೆ ಅಬ್ಬರ: ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಕೃಷಿಕರು  ರಂಗಾಪುರ: ಇದು ಅಂಗನವಾಡಿ ಕಟ್ಟಡ ನಾ? ಅಥವಾ ಸಾರ್ವಜನಿಕ ಶೌಚಾಲಯ ನಾ? ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಹೆತ್ತವರು ಮದುವೆ ಮಾಡಿಸದ ಬೇಸರ: ನೇಣು ಬಿಗಿದು ಪ್ರೇಮಿಗಳು ಆತ್ಮಹತ್ಯೆ  ಸರ್ವಧರ್ಮಿಯರು ಸಂದರ್ಶಿಸುವ ಪುಣ್ಯ ಕ್ಷೇತ್ರ ಧರ್ಮಸ್ಥಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ… ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು;… ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್

ಇತ್ತೀಚಿನ ಸುದ್ದಿ

ಕಾರ್ಕಳ ಪಳ್ಳಿಯಲ್ಲಿ ದೇಶೀ ತಳಿಯ ಗೋವು ನಾಪತ್ತೆ; ದನ ಕಳ್ಳತನ ಶಂಕೆ; ಪ್ರಕರಣ ದಾಖಲು

17/10/2021, 11:10

ಕಾರ್ಕಳ (reporterkarnataka.com): ಇಲ್ಲಿನ ಒಳ್ಳೊಳ್ಳೆಯ ಗ್ರಾಮದಲ್ಲಿ ಸುಮಾರು 25 ಸಾವಿರ ರೂ. ಮೌಲ್ಯದ ದೇಶೀಯ ತಳಿಯ ಗೋವು ಕಳ್ಳತನವಾಗಿದೆ.

ಅಶೋಕ್ ನಾಯಕ್ ಎಂಬುವವರ 25000 ಮೌಲ್ಯದ ದನವೊಂದು ಕಳ್ಳತನ ವಾಗಿದ್ದು  ಇದರ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  

ಪಳ್ಳಿಯ ಅಶೋಕ್ ನಾಯಕ್ ಅವರು ದೇಶಿ ತಳಿಯ ಗೋವನ್ನು ಸಾಕುತ್ತಿದ್ದು, ಎಂದಿನಂತೆ ದನವನ್ನು ಹಟ್ಟಿಯಿಂದ ಮೇಯಲು ಬಿಟ್ಟಿದ್ದು, ರಾತ್ರಯಾದರೂ ದನವು ಎಂದಿನಂತೆ ಮನೆಗೆ ವಾಪಾಸು ಬಂದಿಲ್ಲ.  ರಾತ್ರಿ ಹಟ್ಟಿಗೆ ಬಾರದೇ ಇದ್ದುದರಿಂದ ಅಶೋಕ್ ನಾಯಕ್ ಹಾಗೂ ಅವರ ಗೆಳೆಯರು  ಪಳ್ಳಿ ಪೇಟೆಯಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದಾರೆ ಸಿಗಲಿಲ್ಲ.

ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಸಾಧ್ಯತೆಯಿದ್ದು, 15 ರಂದು 2:00 ಗಂಟೆಯ ಸಮಯ ಒಂದು ರಿಟ್ಜ್  ಕಾರು ಪಳ್ಳಿ ಪೆಟ್ರೋಲ್ ಪಂಪ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸ್ವಲ್ಪ ಸಮಯ ನಿಂತಿದ್ದು ಬಳಿಕ ಕಾರು ಉಡುಪಿ ಕಡೆಗೆ ತೆರಳಿರುವ ದೃಶ್ಯಾವಳಿಗಳು  ಪೆಟ್ರೋಲ್ ಪಂಪ್‌ನ ಸಿಸಿ ಟಿವಿ ಕ್ಯಾಮೇರಾದಲ್ಲಿ  ಸೆರೆಯಾಗಿರುವುದನ್ನು ಅಶೋಕ ನಾಯಕ್  ಹಾಗೂ ಗೆಳೆಯ ರಾಜೇಶ್ ಆಚಾರ್ಯರವರು ನೋಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು