11:06 AM Tuesday30 - November 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಆರೋಪಿ ಡಾ. ರತ್ನಾಕರ್ ಗೆ… ದಂಪತಿ ಜತೆ ಸುರತ್ಕಲ್ ಟೋಲ್ ಸಿಬ್ಬಂದಿ ಅನುಚಿತ ದುರ್ವರ್ತನೆ: ಪೋಲೀಸ್ ಕಮಿಷನರ್ ಶಶಿಕುಮಾರ್… ಕಾಫಿನಾಡಲ್ಲಿ ಪ್ರಾಮಾಣಿಕ ಕಳ್ಳರು!: 4 ಬಾರ್ ಗಳಿಗೆ ಹೊಕ್ಕ ಚೋರರು: ಹಣ ಸಿಕ್ಕಿಲ್ಲ, ಆದ್ರೆ… ಕಡೂರು: ನೀರಿನ ಟ್ಯಾಂಕ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು; ಒಬ್ಬ ಗಂಭೀರ ಬೆಂಗಳೂರು: ನವಜಾತ ಹೆಣ್ಣು ಶಿಶುವನ್ನು ದೇವರ ಗುಡಿ ಮುಂದಿಟ್ಟು ಪರಾರಿ ಮೂಡಿಗೆರೆ: ಒಣ ಗಾಂಜಾ ಮಾರಾಟ; ಮಾಲು ಸಹಿತ ಆರೋಪಿ ಬಂಧನ ಕಲಬುರಗಿ ಪಾಲಿಕೆ ಕಮಿಷನರ್ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ: ಕಮಿಷನರ್ ಈ… ಸೋವೇನ ಹಳ್ಳಿ, ಹಗರಿಬೊಮ್ಮನ ಹಳ್ಳಿಗೆ ಸಮರ್ಪಕ ಬಸ್ ವ್ಯವಸ್ಥೆ: ಗ್ರಾಮಸ್ಥರ ಹಕ್ಕೊತ್ತಾಯ 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಡಾ. ರತ್ನಾಕರ್ ಬಂಧನ; 2…

ಇತ್ತೀಚಿನ ಸುದ್ದಿ

2 ಸಾವಿರ ವರ್ಷ ಇತಿಹಾಸವುಳ್ಳ ಮಖಣಾಪುರದ ಶ್ರೀ ಗುರು ಸೋಮಲಿಂಗೇಶ್ವರ ದೇವಸ್ಥಾನ: 10 ತಲೆಮಾರಿನ ಮಠ ಪರಂಪರೆ

14/10/2021, 13:52

ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ

info.reporterkarnataka@gmail.com

ರಾಜ್ಯದ ಪ್ರಸಿದ್ಧ ಶಿವ ದೇವಾಲಯಗಳಲ್ಲ ವಿಜಯಪುರ ಜಿಲ್ಲೆಯ ಮಖಣಾಪುರದ ಶ್ರೀ ಗುರು ಸೋಮಲಿಂಗೇಶ್ವರ ದೇವಸ್ಥಾನ ಒಂದು. ಈ ದೇಗುಲಕ್ಕೆ ಸುಮಾರು 2 ಸಾವಿರ ಇತಿಹಾಸವಿದೆ. ಭಕ್ತರ ಇಷ್ಟಾರ್ಥ ನೆರವೇರಿಸುವ ಸೋಮಲಿಂಗ ಎಂದೇ ಇದು ನಾಡಿನುದ್ಧಗಲಕ್ಕೂ ಪ್ರಸಿದ್ಧಿ ಪಡೆದಿದೆ.

ದೇವಾಲಯದಲ್ಲಿ ಸೋಮೇಶ್ವರನಿಗೆ ನಿತ್ಯ ಪೂಜೆ ನಡೆಯುತ್ತದೆ. ಭಕ್ತರಿಗೆ ಅನ್ನದಾಸೋಹ ನೆರವೇರುತ್ತಿದೆ. ಮಠದಲ್ಲಿ ಭಕ್ತರಿಗೆ ಸ್ವಾಮೀಜಿ ಪ್ರತಿ ದಿನ ಸಂಜೆ ದರ್ಶನ ಕೊಡುತ್ತಾರೆ. ಹರಕೆ ಹೊತ್ತ ಭಕ್ತರು ಇಲ್ಲಿಗೆ ಬಂದು ಗುರುಗಳ ಪಾದಪೂಜೆ ನೆರವೇರಿಸುತ್ತಾರೆ.ದೇಗುಲ ಮಠ ಪರಂಪರೆಯನ್ನು ಹೊಂದಿದೆ.


10 ತಲೆಮಾರುಗಳ ಇತಿಹಾಸವಿರುವ ಮಠ ಪರಂಪರೆಯನ್ನು ದೇಗುಲ ಹೊಂದಿದೆ. ಈಗಿನ 11ನೇ ತಲೆಮಾರಿನ ಶ್ರೀ ದೇವೇಂದ್ರ ಒಡೆಯಾರ್ ಸ್ವಾಮೀಜಿ ಅವರು ಗುರುಪೀಠವನ್ನು ಅಲಂಕರಿಸಿದ್ದಾರೆ. 10 ತಲೆಮಾರಿನಿಂದ ಮಠದಲ್ಲಿ ನಡೆದುಕೊಂಡು ಬರುತ್ತಿರುವ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಶ್ರೀ ದೇವೇಂದ್ರ ಒಡೆಯಾರ್ ಸ್ವಾಮೀಜಿ ಚಾಚು ತಪ್ಪದೆ ಪಾಲಿಸಿ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಂಸಾರ ಪೀಠವಾದ ಇಲ್ಲಿನ ಮಠದ ದೇವೇಂದ್ರ ಒಡೆಯಾರ್ ಸ್ವಾಮೀಜಿ ದೇವರ ಮತ್ತು ಭಕ್ತರ ಇಷ್ಟಾರ್ಥಕ್ಕನುಗುಣವಾಗಿ ಮಠವನ್ನು ಮುನ್ನಡೆಸುತ್ತಿದ್ದಾರೆ.


ಸ್ವಾಮೀಜಿಯವರು ಸೋಮಲಿಂಗೇಶ್ವರನ ಅಪ್ಪಣೆಯಂತೆ ಅನಾಥರಿಗೆ ಆಶ್ರಮ ನಿರ್ಮಿಸಿದ್ದಾರೆ. ಅದರ ಜತೆಗೆ ಶಿವನ ಬೃಹತ್ ಲಿಂಗವನ್ನು ಪ್ರತಿಷ್ಠಾಪಿಸುವ ಸಂಕಲ್ಪ ಹೊಂದಿದ್ದಾರೆ. ಸುಮಾರು ಒಂದು ಎರಕೆ ಪ್ರದೇಶದಲ್ಲಿ 108 ಅಡಿ ಎತ್ತರದ ಬೃಹತ್ ಶಿವಲಿಂಗ ತಲೆ ಎತ್ತಿ ಇಡೀ ವಿಜಯಪುರ ಜಿಲ್ಲೆ ಮಾತ್ರವೇಕೆ ಇಡೀ ರಾಜ್ಯವನ್ನು ಪಾವನಗೊಳಿಸಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು