4:25 PM Friday22 - October 2021
ಬ್ರೇಕಿಂಗ್ ನ್ಯೂಸ್
ಹಾಜಬ್ಬರಿಗೊಂದು ಸಲಾಂ: ಕಿತ್ತಳೆ ಬುಟ್ಟಿಯಿಂದ ಶಾಲೆ ಮೆಟ್ಟಲಿನವರೆಗೆ: ಹರೇಕಳದಿಂದ ದೆಹಲಿಗೆ ಅಕ್ಷರ ಸಂತನ ಯಾನ! ಕರುವನ್ನು ಠಾಣೆಯಲ್ಲಿ ಸಾಕಿ ಜನಮೆಚ್ಚುಗೆ ಪಡೆದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹೃದಯಾಘಾತಕ್ಕೆ ಬಲಿ ಪಂಚ ಭಾಷಾ ನಟಿ ಜೂಲಿ ಲಕ್ಷ್ಮೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ: ವಿಶೇಷ… ನಳಿನ್‌ ಹೇಳಿಕೆಗೆ ಕಾಂಗ್ರೆಸ್ ತೀವ್ರ ಪ್ರತಿಭಟನೆ: ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ; ಮಾಜಿ ಸಿಎಂ ಯಡಿಯೂರಪ್ಪ… ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನರ್ಮ್ ಬಸ್: ಸ್ವಾಮಿ, ಓಡಿಸುವುದಾದರೆ ಸರಿಯಾಗಿ ಓಡಿಸಿ,… ಮಣಿಪಾಲ ಶಿವಳ್ಳಿಯ ಯುವತಿ ನಾಪತ್ತೆ; ಮೊಬೈಲ್ ಸ್ವಿಚ್ ಆಫ್ ; ಪ್ರಕರಣ ದಾಖಲು Mangaluru | ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕ ಲಾಯರ್ ಕೆ.ಎಸ್.ಎನ್.ರಾಜೇಶ್ ಮೇಲೆ ಎಫ್ಐಆರ್… ಪಠ್ಯ ಕಡಿತ ಇಲ್ಲ, ಹಾಗಾದರೆ ಭಾನುವಾರ ಶಾಲೆಯ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್… ಹೊನ್ನಾವರ ಮಾಜಿ ಶಾಸಕ ಬಿಜೆಪಿಯ ಎಂ.ಪಿ.ಕರ್ಕಿ ನಿಧನ ನೈತಿಕ ಪೊಲೀಸ್ ಗಿರಿ ಸಮರ್ಥನೆ: ಮುಖ್ಯಮಂತ್ರಿಗೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್…

ಇತ್ತೀಚಿನ ಸುದ್ದಿ

ದೇವೇಗೌಡ್ರು ವಿರೋಧ ಪಕ್ಷದ ನಾಯಕರಾಗಿದ್ರು, ಹಾಗಾದರೆ ಅವರದ್ದು ಪೋಸ್ಟು ಪುಟುಗೋಸಿನಾ?: ಸಿದ್ದರಾಮಯ್ಯ ಪ್ರಶ್ನೆ

13/10/2021, 17:33

ಬೆಂಗಳೂರು(reporterkarnataka.com): ದೇವರಾಜ ಅರಸ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಎಚ್. ಡಿ. ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ಹಾಗಾದರೆ ಅವರದ್ದು ಪೋಸ್ಟು ಪುಟುಗೋಸಿನಾ..?

ಇದು ಮಾಜಿ ಮುಖ್ಯಮಂತ್ರಿ  ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಶ್ನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಕ್ಷೇಪಾರ್ಹ ಹೇಳಿಕೆಗೆ ಕೆಂಡಾಮಂಡಲವಾದ ಸಿದ್ದರಾಮಯ್ಯ ಈ ಪ್ರಶ್ನೆ ಹಾಕಿದ್ದಾರೆ.

ಮಾಧ್ಯಮ ಜತೆ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕುಮಾರಸ್ವಾಮಿ ಅವರಿಗೆ ನನ್ನ ಕಂಡರೆ ಭಯ. ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಇಂತಹ ಬೆದರಿಕೆಗೆ ಜಗ್ಗವವನ್ನಲ್ಲ. 1971ರಲ್ಲಿ ನಾನು ಕಾನೂನು ವಿದ್ಯಾರ್ಥಿಯಾಗಿದ್ದಾಗ ರಾಜಕೀಯ ಪ್ರವೇಶಿಸಿದ್ದೇನೆ. 50 ವರ್ಷಗಳ ರಾಜಕೀಯ ಮಾಡಿದ್ದೇನೆ. ಕುಮಾರಸ್ವಾಮಿಯವರು ಯಾವಾಗ ರಾಜಕೀಯಕ್ಕೆ ಬಂದ್ರು? ದೇವೇಗೌಡ ಅವರು ಮುಖ್ಯಮಂತ್ರಿಯಾದ ಬಳಿಕ 1997ರಲ್ಲಿ ಕುಮಾರಸ್ವಾಮಿ ರಾಜಕೀಯಕ್ಕೆ ಬಂದ್ರು. ಒಬ್ಬ ಮಾಜಿ ಮುಖ್ಯಮಂತ್ರಿ ತುಂಬಾ ಲಘುವಾಗಿ ಮಾತನಾಡಬಾರದು. ಸಾಂವಿಧಾನಿಕ ಹುದ್ದೆಯ ಬಗ್ಗೆ ಮಾತನಾಡಬಾರದು ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು