4:41 PM Friday29 - March 2024
ಬ್ರೇಕಿಂಗ್ ನ್ಯೂಸ್
ನಂಜನಗೂಡು: ಕಳಲೆ ಜಾತ್ರಾ ಮಹೋತ್ಸವದಲ್ಲಿ ನಡೆದ ಅದ್ದೂರಿ ತೇರಡಿ ಉತ್ಸವ ಕಾಜೂರು ದರ್ಗಾಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ: ಚುನಾವಣಾ ಉಸ್ತುವಾರಿ ರಮಾನಾಥ… ವಿಶಾಖಪಟ್ಟಣದಿಂದ ತಂದ 6 ಕೆಜಿಗೂ ಅಧಿಕ ಗಾಂಜಾ ವಶ: ಆರೋಪಿ ಬಂಧನ; 9… ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್: ಸಚಿವ ತಂಗಡಗಿ ಹೇಳಿಕೆಗೆ ಶಾಸಕ ಹರೀಶ್ ಪೂಂಜ… ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ವಿಶೇಷ ಪೂಜೆ ಸಲ್ಲಿಕೆ; ಹೊಸಳಿಗಮ್ಮ… ಮಂಗಳೂರು: ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿ ಆಗಮಿಸಿದ ಡಾ. ಮಂಜುನಾಥ… ಜೆಡಿಎಸ್ ಸ್ಪರ್ಧಿಸಲಿರುವ 3 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ: ಮಂಡ್ಯದಿಂದ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್… ಮನೆಯಲ್ಲಿ ಅಕ್ರಮ ನಾಡ ಬಂದೂಕು: ಬಣಕಲ್ ಸಮೀಪದ ವ್ಯಕ್ತಿಯ ಬಂಧನ ಅಭಿವೃದ್ಧಿ ಮತ್ತು ಕಾಂಗ್ರೆಸ್- ಎರಡೂ ವಿರೋಧ ಪದಗಳು: ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕ… ಲೋಕಸಭೆ ಚುನಾವಣೆ: ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ: ಹಿರಿಯ ಮುತ್ಸದ್ಧಿ ಜನಾರ್ದನ ಪೂಜಾರಿ…

ಇತ್ತೀಚಿನ ಸುದ್ದಿ

ಮಂಗಳೂರು ರಥಬೀದಿ ವೆಂಕಟರಮಣ ದೇವಳ ಶಾರದೆ ಪ್ರತಿಷ್ಠೆ: ದೀಪಾಲಂಕಾರ, ವಿಶೇಷ ಪೂಜೆ

11/10/2021, 20:55

ಮಂಗಳೂರು(reporterkarnataka.com): ನಗರದ ರಥಬೀದಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠದ ವಸಂತ ಮಂಟಪದಲ್ಲಿ ನಡೆಯುತ್ತಿರುವ 99ನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವ ಅಂಗವಾಗಿ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠೆ ಸೋಮವಾರ ನಡೆಯಿತು. ಅಕ್ಟೋಬರ್ 16ರ ವರೆಗೆ ಮಹೋತ್ಸವ ಸಂಪನ್ನಗೊಳ್ಳಲಿದೆ.

ಭಾನುವಾರ ರಾತ್ರಿ ಗಂಟೆ 8.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ವೆಂಕಟರಮಣ ದೇವಳದ ರಾಜಾಂಗಣದಿಂದ ಉತ್ಸವ ಸ್ಥಾನಕ್ಕೆ ತರಲಾಯಿತು. ಸೋಮವಾರ ಮಧ್ಯಾಹ್ನ ಗಂಟೆ 1.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಿತು. ಶುಕ್ರವಾರದವರೆಗೆ ದೀಪಾಲಂಕಾರ ಹಾಗೂ ರಾತ್ರಿ ಪೂಜೆ ನಡೆಯಲಿದೆ. ಬೆಳಿಗ್ಗೆ 10.00 ಗಂಟೆಯಿಂದ 12.00 ಗಂಟೆಯವರೆಗೆ ವಿದ್ಯಾರಂಭ ಸೇವೆ ಸಂಪನ್ನಗೊಳ್ಳಲಿದೆ.

ಅ. 16 ಶನಿವಾರ ಸಂಜೆ ಗಂಟೆ 5.00ಕ್ಕೆ ಪೂರ್ಣಾಲಂಕಾರಗೊಂಡ ಶ್ರೀ ಶಾರದಾ ಮಾತೆಯ ದರ್ಶನವನ್ನು ಪಡೆಯಬಹುದು. ನಂತರ ಶ್ರೀ ಮಹಾಮಾಯಾ ತೀರ್ಥದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ವಿಸರ್ಜನೆ ನಡೆಯಲಿದೆ

ಪ್ಲವ ನಾಮ ಸಂವತ್ಸರದ ಆಸ್ವೀಜ ಶುದ್ಧ ಪಂಚಮಿ ದಿನ ಆರಂಭಗೊಂಡ ಉತ್ಸವ ಏಕಾದಶಿ ಶನಿವಾರ(ಅ.16)ರ ವರೆಗೆ ನಡೆಯಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು