12:22 PM Tuesday30 - November 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಆರೋಪಿ ಡಾ. ರತ್ನಾಕರ್ ಗೆ… ದಂಪತಿ ಜತೆ ಸುರತ್ಕಲ್ ಟೋಲ್ ಸಿಬ್ಬಂದಿ ಅನುಚಿತ ದುರ್ವರ್ತನೆ: ಪೋಲೀಸ್ ಕಮಿಷನರ್ ಶಶಿಕುಮಾರ್… ಕಾಫಿನಾಡಲ್ಲಿ ಪ್ರಾಮಾಣಿಕ ಕಳ್ಳರು!: 4 ಬಾರ್ ಗಳಿಗೆ ಹೊಕ್ಕ ಚೋರರು: ಹಣ ಸಿಕ್ಕಿಲ್ಲ, ಆದ್ರೆ… ಕಡೂರು: ನೀರಿನ ಟ್ಯಾಂಕ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು; ಒಬ್ಬ ಗಂಭೀರ ಬೆಂಗಳೂರು: ನವಜಾತ ಹೆಣ್ಣು ಶಿಶುವನ್ನು ದೇವರ ಗುಡಿ ಮುಂದಿಟ್ಟು ಪರಾರಿ ಮೂಡಿಗೆರೆ: ಒಣ ಗಾಂಜಾ ಮಾರಾಟ; ಮಾಲು ಸಹಿತ ಆರೋಪಿ ಬಂಧನ ಕಲಬುರಗಿ ಪಾಲಿಕೆ ಕಮಿಷನರ್ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ: ಕಮಿಷನರ್ ಈ… ಸೋವೇನ ಹಳ್ಳಿ, ಹಗರಿಬೊಮ್ಮನ ಹಳ್ಳಿಗೆ ಸಮರ್ಪಕ ಬಸ್ ವ್ಯವಸ್ಥೆ: ಗ್ರಾಮಸ್ಥರ ಹಕ್ಕೊತ್ತಾಯ 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಡಾ. ರತ್ನಾಕರ್ ಬಂಧನ; 2…

ಇತ್ತೀಚಿನ ಸುದ್ದಿ

ಅಥಣಿ: ತುಂಬಿ ಹರಿಯುತ್ತಿದ್ದ ಕರಿಮಸೂತಿ ಕಾಲುವೆಗೆ ಬಿದ್ದ 4 ಮಂದಿ ಮಕ್ಕಳು; 2  ಪುಟಾಣಿಗಳ ದಾರುಣ ಅಂತ್ಯ

10/10/2021, 11:20

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕಾಲುವೆ ಬಳಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಅಕಸ್ಮಾತ್ ಕಾಲು ಜಾರಿ ಕರಿಮಸೂತಿ ಕಾಲುವೆಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ.

ಗ್ರಾಮದ ಸರಕಾರಿ ಪ್ರೌಢ ಶಾಲೆ ಸಮೀಪ ಹಾದು ಹೋಗಿರುವ ಕರಿಮಸೂತಿ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಮಕ್ಕಳಾದ ಶ್ರೀಧರ ಶಂಕರ ಪುಂಡಿಪಲ್ಲೆ (3), ವಿಶ್ವನಾಥ ವಿನಾಯಕ ಪುಂಡಿಪಲ್ಲೆ (8), ವಿಜಯ ವಿನಾಯಕ ಪುಂಡಿಪಲ್ಲೆ (7) ಹಾಗೂ ಸ್ವಪ್ನಾ ವಿನಾಯಕ ಪುಂಡಿಪಲ್ಲೆ (11) ಎಂಬ ನಾಲ್ವರು ಮಕ್ಕಳು ಆಟವಾಡಲು ಕಾಲುವೆ ಹತ್ತಿರ ಹೋಗಿ ಕಾಲುವೆಯಲ್ಲಿ ಬಿದ್ದಿದ್ದರು. ಇವರಲ್ಲಿ ಶ್ರೀಧರ ಶಂಕರ ಪುಂಡಿಪಲ್ಲೆ (3), ವಿಶ್ವನಾಥ ವಿನಾಯಕ ಪುಂಡಿಪಲ್ಲೆ (8) ಇವರನ್ನು ಕಾಲುವೆಯಿಂದ ಬಚಾವ್ ಮಾಡಲಾಗಿದೆ. ವಿಜಯ ವಿನಾಯಕ ಪುಂಡಿಪಲ್ಲೆ (7) ಹಾಗೂ ಸ್ವಪ್ನಾ ವಿನಾಯಕ ಪುಂಡಿಪಲ್ಲೆ (11) ಇಬ್ಬರು ಸಾವನ್ನಪ್ಪಿದ್ದಾರೆ.


ಅಗ್ನಿಶಾಮಕ ದಳ ಸಿಬ್ಬಂದಿಯ ಸಹಾಯದಿಂದ ಎಲ್ಲರನ್ನು ಹೊರ ತಗೆಯುವಷ್ಟರಲ್ಲಿ ಇಬ್ಬರು ನೀರಿನಲ್ಲಿಯೇ ಸಾವನ್ನಪ್ಪಿದ್ದರು. ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಮಕ್ಕಳು ಸಾವನ್ನಪಿದ ಘಟನೆಯನ್ನು ನೋಡಿ ಗ್ರಾಮಸ್ಥರ ಹಾಗೂ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತೀಚಿನ ಸುದ್ದಿ

ಜಾಹೀರಾತು