12:00 AM Friday19 - April 2024
ಬ್ರೇಕಿಂಗ್ ನ್ಯೂಸ್
ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ

ಇತ್ತೀಚಿನ ಸುದ್ದಿ

ಮಹಾನ್ ನಟ ಶಿವಾಜಿ ಗಣೇಶನ್ 93ನೇ ಜನ್ಮದಿನ: ಗೂಗಲ್ ಡೂಡಲ್ ಗೌರವ: ಬೆಂಗಳೂರು ಕಲಾವಿದನಿಂದ ರಚನೆ

01/10/2021, 11:07

ಮನೀಶ್ ಕೃಷ್ಣ ಕಲ್ಲಡ್ಕ ಮಂಗಳೂರು

info. reporterkarnataka@gmail.com

ಭಾರತೀಯ ಚಿತ್ರರಂಗದ ಮಹಾನ್ ನಟ ಶಿವಾಜಿ ಗಣೇಶನ್ ಅವರ 93ನೇ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ಅವರನ್ನು ನೆನಪಿಸಿಕೊಂಡಿದೆ. ಗೂಗಲ್ ಅವರ ಡೂಡಲ್ ರಚಿಸಿದೆ. ಬೆಂಗಳೂರು ಮೂಲದ ಕಲಾವಿದ ನೂಪುರ ರಾಜೇಶ್ ಚೋಕ್ಸಿ ಡೂಡಲ್ ರಚಿಸಿದ್ದಾರೆ.

ಅಕ್ಟೋಬರ್ 1, ನಟ ಶಿವಾಜಿ ಗಣೇಶನ್ ಜನ್ಮದಿನ. ಇಂದು ಅವರ 93 ನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಇದನ್ನು ಗಮನಿಸಿದ ಗೂಗಲ್ ಡೂಡಲ್ ರಚಿಸುವ ಮೂಲಕ ಭಾರತೀಯ ಚಿತ್ರರಂಗದ ಮೇರು ನಟರಲ್ಲೊಬ್ಬರಾದ ಶಿವಾಜಿ ಗಣೇಶ್ ಅವರಿಗೆ ಗೌರವ ಸೂಚಿಸಿದೆ. ನೂಪುರ ರಾಜೇಶ್ ಚೋಕ್ಸಿ ಡೂಡಲ್ ಅನ್ನು ರಚಿಸಿರುವುದು ಗಮನಾರ್ಹ ವಿಷಯವಾಗಿದೆ. ಇವರು ಬೆಂಗಳೂರು ಮೂಲದವರಾಗಿದ್ದಾರೆ.

ಗಣೇಶನ್ ಅವರು ಅಕ್ಟೋಬರ್ 1, 1928ರಂದು ಆಗಿನ ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರೆಸಿಡೆನ್ಸಿಯ (ಇಂದಿನ ತಮಿಳುನಾಡು) ವಿಲ್ಲುಪುರದಲ್ಲಿ ಜನಿಸಿದರು. ಅವರ ಹೆಸರು

ಗಣೇಶಮೂರ್ತಿ. ತನ್ನ 7ನೇ ವಯಸ್ಸಿನಲ್ಲಿ ಮನೆ ಬಿಟ್ಟು ನಾಟಕ ತಂಡವನ್ನು ಸೇರಿಕೊಂಡರು.

ಡಿಸೆಂಬರ್ 1945ರಲ್ಲಿ, ಗಣೇಶಮೂರ್ತಿ ಅವರು “ಶಿವಾಜಿ ಕಂದ ಹಿಂದೂ ರಾಜ್ಯಂ” ಎಂಬ ನಾಟಕದಲ್ಲಿ ಮರಾಠ ದೊರೆ ಶಿವಾಜಿ ಪಾತ್ರ ನಿರ್ವಹಿಸಿದರು. ಆ ನಾಟಕದಲ್ಲಿ ಶಿವಾಜಿ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದರು. ತಮಿಳುನಾಡಿನುದ್ದಕ್ಕೂ ಅವರ ಅಭಿನಯ

ಮನೆಮಾತಾಯಿತು. ಗಣೇಶ ಮೂರ್ತಿ ರಾತ್ರಿ ಬೆಳಗಾಗುವುದರೊಳಗೆ ಶಿವಾಜಿ ಗಣೇಶನ್ ಆದರು.ಜೀವನದುದ್ದಕ್ಕೂ ಅದೇ ಹೆಸರಿನಿಂದ ಕರೆಯಲ್ಪಟ್ಟರು.ನಂತರ ಅವರು ತಮಿಳು ಚಿತ್ರರಂಗ ಪ್ರವೇಶಿಸಿದರು.

ಅಲ್ಲಿ ಸಕ್ರಿಯರಾದರು. 1952 ರಲ್ಲಿ “ಪರಾಶಕ್ತಿ” ಯಲ್ಲಿ ಪಾದಾರ್ಪಣೆ ಮಾಡಿದರು, ಗಣೇಶನ್ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಮುಂತಾದ ಭಾಷೆಗಳಲ್ಲಿ ಸೇರಿದಂತೆ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದರು. 5 ದಶಕಗಳ ವೃತ್ತಿಜೀವನದಲ್ಲಿ, ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದರು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಈಜಿಪ್ಟ್‌ನ ಕೈರೋದಲ್ಲಿ ಆಫ್ರೋ-ಏಷ್ಯನ್ ಚಲನಚಿತ್ರೋತ್ಸವ) ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.1960 ರ ನಟನೆಗಾಗಿ ಗೆದ್ದರು. ವೀರ ಪಾಂಡಿಯಾ ಕಟ್ಟಬೊಮ್ಮನ್ ಅವರ ಜನಪ್ರಿಯ ಚಿತ್ರಗಳಲ್ಲೊಂದು.

ಇತ್ತೀಚಿನ ಸುದ್ದಿ

ಜಾಹೀರಾತು