9:17 PM Thursday2 - December 2021
ಬ್ರೇಕಿಂಗ್ ನ್ಯೂಸ್
ಸರ್ವಧರ್ಮಿಯರು ಸಂದರ್ಶಿಸುವ ಪುಣ್ಯ ಕ್ಷೇತ್ರ ಧರ್ಮಸ್ಥಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ… ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು;… ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಸಾಲು ಸಾಲಾಗಿ ಆಸ್ಪತ್ರೆ ಸೇರುತ್ತಿರುವ ಪಚ್ಚನಾಡಿ ತ್ಯಾಜ್ಯ ದುರಂತ ಸಂತ್ರಸ್ತರು: ಜಿಲ್ಲಾಧಿಕಾರಿ ಇತ್ತ… ನಾದಬ್ರಹ್ಮ ಹಂಸಲೇಖಗೆ ಹೈಕೋರ್ಟ್ ಬಿಗ್‌ ರಿಲೀಫ್ : ಪ್ರಕರಣ ದಾಖಲಾತಿಗೆ ತಡೆಯಾಜ್ಞೆ; ದೂರುದಾತರಿಗೆ… ಚಿತ್ರದುರ್ಗ: ಕಾರು- ಬೈಕ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು; ಇನ್ನೊರ್ವ ಗಂಭೀರ… ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಚಿತ್ರದುರ್ಗದಲ್ಲಿ ಸಿದ್ದು… ಕಡಲನಗರಿಯಲ್ಲಿ ಮತ್ತೆ ತಲೆ ಎತ್ತಿದ ಗ್ಯಾಂಗ್ ವಾರ್; ಮಾರಕಾಸ್ತ್ರದಿಂದ ದಾಳಿ; ಓರ್ವ ಗಂಭೀರ ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಸಾಧನಾ ಜಿ. ಆಶ್ರೀತ್ ರಿಗೆ ರಾಜ್ಯಮಟ್ಟದ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್

30/09/2021, 08:53

ಕಾರ್ಕಳ(reporterkarnataka.com):  ಕಾರ್ಕಳ ಸುಮೇಧ ಫ್ಯಾಶನ್ ಇನ್ಸ್ ಟ್ಯೂಟ್ ಹಾಗೂ 
ಸುಮೇಧ ಡಿಸೈನರ್ ಬುಟಿಕ್ ಸಂಸ್ಥಾಪಕಿ  ಸಾಧನ ಜಿ. ಆಶ್ರೀತ್ ಅವರಿಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ ದೊರೆತಿದೆ.

ಸರ್ವಸಂತ್ರಪ್ತಿ ವೆಂಚರ್ಸ್ ಬೆಂಗಳೂರು ಆಶ್ರಯದಲ್ಲಿ ಬೆಂಗಳೂರಿನ ಆರ್ ಜಿ ರೋಯಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ತಾರ ಮ್ಯಾಗಜೀನ್ ಸಂಪಾದಕ ಶಿವಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು.

ಫ್ಯಾಶನ್ ಡಿಸೈನಿಂಗ್ ಕಾಲೇಜ್ ಗಳಲ್ಲಿ 12 ವರ್ಷದ ಅನುಭವಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದು, ಧಾರಾವಾಹಿಗಳಿಗೆ, ಪ್ಯಾಷನ್ ಇವೆಂಟ್ ಗಳಿಗೆ, ಕಾಸ್ಟ್ಯೂಮ್ ಡಿಸೈನರಾಗಿ ಮತ್ತು ಅನೇಕ ಹೆಣ್ಣು ಮಕ್ಕಳಿಗೆ ಉಚಿತ ತರಬೇತಿಗಳನ್ನು ನೀಡಿ ಅವರಲ್ಲಿ ಆತ್ಮ ಸ್ಥೈರ್ಯ ಕೊಟ್ಟು  ಸ್ವಂತ ಉದ್ಯೋಗ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ. 

ತಮ್ಮಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ಫ್ಯಾಶನ್ ಡಿಸೈನಿಂಗ್ ಆಗಿರುವಂತಹ ಬೇರೆ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿ ಕೊಡುವ ಜೊತೆಗೆ ಅನೇಕ ಮಹಿಳೆಯರಿಗೆ ತಮ್ಮಲ್ಲಿ ಉದ್ಯೋಗವನ್ನು ನೀಡಿರುತ್ತಾರೆ  ಇವರ ಸಾಧನೆಗೆ ಗುರುತಿಸಿ ಇವರಿಗೆ  ಬೆಂಗಳೂರಿನಲ್ಲಿ ನಡೆದ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ (Golden Women’s Achievers Award) ಕಾರ್ಯಕ್ರಮದಲ್ಲಿ ಇವರಿಗೆ ಗೋಲ್ಡನ್ ವುಮೆನ್ಸ್ ಅಚಿವರ್ಸ್ ಅವರ್ಡ್ ಪ್ರಶಸ್ತಿ ದೊರಕಿದೆ ಹಾಗೂ ಇವರು ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ

ಈ ಸಂದರ್ಭದಲ್ಲಿ ಕಾರ್ಲ್ಟನ್ ಇವೆಂಟ್ ಮ್ಯಾನೇಜ್ಮೆಂಟ್ ಮುಖ್ಯಸ್ಧ ಬಸವರಾಜ್ , ಕಿರುತೆರೆ ನಟ ನಟಿ ಯರು ನಿರ್ದೇಶಕರು , ಕಿರುತೆರೆಯ ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು