9:34 PM Thursday2 - December 2021
ಬ್ರೇಕಿಂಗ್ ನ್ಯೂಸ್
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ: ಕೊಲೆ ಶಂಕೆ: ಪತಿ, ಮಾವ,… ಸರ್ವಧರ್ಮಿಯರು ಸಂದರ್ಶಿಸುವ ಪುಣ್ಯ ಕ್ಷೇತ್ರ ಧರ್ಮಸ್ಥಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ… ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು;… ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಸಾಲು ಸಾಲಾಗಿ ಆಸ್ಪತ್ರೆ ಸೇರುತ್ತಿರುವ ಪಚ್ಚನಾಡಿ ತ್ಯಾಜ್ಯ ದುರಂತ ಸಂತ್ರಸ್ತರು: ಜಿಲ್ಲಾಧಿಕಾರಿ ಇತ್ತ… ನಾದಬ್ರಹ್ಮ ಹಂಸಲೇಖಗೆ ಹೈಕೋರ್ಟ್ ಬಿಗ್‌ ರಿಲೀಫ್ : ಪ್ರಕರಣ ದಾಖಲಾತಿಗೆ ತಡೆಯಾಜ್ಞೆ; ದೂರುದಾತರಿಗೆ… ಚಿತ್ರದುರ್ಗ: ಕಾರು- ಬೈಕ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು; ಇನ್ನೊರ್ವ ಗಂಭೀರ… ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಚಿತ್ರದುರ್ಗದಲ್ಲಿ ಸಿದ್ದು… ಕಡಲನಗರಿಯಲ್ಲಿ ಮತ್ತೆ ತಲೆ ಎತ್ತಿದ ಗ್ಯಾಂಗ್ ವಾರ್; ಮಾರಕಾಸ್ತ್ರದಿಂದ ದಾಳಿ; ಓರ್ವ ಗಂಭೀರ

ಇತ್ತೀಚಿನ ಸುದ್ದಿ

ಈ ವಾಹನಗಳಿಗೆ ಯಾರು ಸ್ವಾಮಿ ಫೈನ್ ಹಾಕುವುದು.? ಜಪ್ತಿ ಮಾಡ್ತೀರ ಕಮೀಷನರ್ ಸಾಹೇಬ್ರೆ ? ನಿಮ್ಮ ಹೆಸರಲ್ಲೇ ರಿಜಿಸ್ಟ್ರೇಶನ್ ಆಗಿದೆ ನೋಡಿ.!

30/09/2021, 20:33

ಮಂಗಳೂರು (ReporterKarnataka.com) 

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ರೀತಿಯಲ್ಲಿ ವಾಹನದ ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಹಾಕುವ ಡ್ರೈವ್ ನಡೆಯುತ್ತಾ ಇದೆ. ಇದರ ನಡುವೆ ಜನರು ಹಲವು ಕಡೆ ರೊಚ್ಚಿಗೆದ್ದಿದ್ದು ಪೋಲಿಸರ ವಾಹನದ ಡೀಟೇಲ್ ಹುಡುಕಿ ನಮ್ಮ ವಾಹನಗಳಿಗೆ ಫೈನ್ ಹಾಕಿದವರ ವಾಹನಕ್ಕೆ ಯಾರು ಫೈನ್ ಹಾಕುತ್ತಾರೆ ಎಂದು ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ.

ಹಲವಾರು ಪೋಲಿಸ್ ವಾಹನಗಳ ಡಾಕ್ಯುಮೆಂಟ್‌ಗಳೇ ಸರಿ ಇಲ್ಲ. ನಿನ್ನೆಯಷ್ಟೆ ಪೋಲಿಸ್ ವಾಹನದ ನಂಬರ್ ಪ್ಲೇಟ್ ಕುರಿತ ಹಾಗೆ ಫೋಟೊ ಒಂದು ವೈರಲ್ ಆಗಿತ್ತು. ಹಾಗೆಯೆ ಇವತ್ತು ಸೋಮೇಶ್ವರದಲ್ಲಿ ಫೈನ್ ಹಾಕುತ್ತಿದ್ದ ಪೋಲಿಸ್ ವಾಹನ ಹಾಗೂ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಬಳಿ ಇದ್ದ ಪೋಲಿಸ್ ಇಲಾಖೆಯ ಹೊಯ್ಸಳ ವಾಹನದ ನಂಬರ್ ಡಿಟೇಲ್ ತೆಗೆದು ರಿಪೋರ್ಟರ್ ಕರ್ನಾಟಕಕ್ಕೆ ಓದುಗರು ಕಳಿಸಿದ್ದಾರೆ.

ವಿಚಿತ್ರವೆಂದರೇ ಈ ಎರಡೂ ವಾಹನಗಳ ಇನ್ಸುರೆನ್ಸ್ ಅವಧಿ ಮುಕ್ತಾಯಗೊಂಡು ವರ್ಷಗಳೇ ಕಳೆದಿದೆ. ಸೋಮೇಶ್ವರದಲ್ಲಿದ್ದ KA19G0670 ವಾಹನ ಜಾಯಿಂಟ್ ಕಮೀಷನರ್ ಆಫ್ ಹೆಸರಲ್ಲಿ ನೋಂದಾವಣಿಯಾಗಿದೆ. ಇದರ ವಿಮೆ ಅವಧಿಯೂ 2014ರಲ್ಲಿಯೇ ಮುಗಿದಿದೆ, ಹಾಗೆಯೇ ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನಲ್ಲಿದ್ದ ಹೊಯ್ಸಳ ವಾಹನ KA19G0748 ಇದರ ವಿಮೆ ಅವಧಿಯೂ 2017 ರಲ್ಲಿ ಮುಕ್ತಾಯಗೊಂಡಿದೆ. 

ಹೀಗೆ ಹಿಂದೊಮ್ಮೆ ಟೋಯಿಂಗ್ ವಾಹನವೂ ವಿಮೆ ಮುಗಿದ ಬಳಿಕವೂ ಪೋಲಿಸರಿಗಾಗಿ ಕೆಲಸ ಮಾಡ್ತಿತ್ತು. ಆದರೆ ಇದೆಲ್ಲ ವಾಹನಗಳಿಗೆ ಫೈನ್ ಹಾಕುವವರು ಯಾರು ? ಇವುಗಳನ್ನು ಜಪ್ತಿ ಮಾಡುವವರು ಯಾರು..? ಈ ವಾಹನಗಳಿಂದ ಅಪಘಾತವಾದಾಗ ಪರಿಹಾರ ಒದಗಿಸುವ ಜವಾಬ್ದಾರಿ ಯಾರಿಗೆ..? ಎನ್ನುವ ಪ್ರಶ್ನೆಗಳು ಮೂಡಿಕೊಳ್ಳುತ್ತಿವೆ.

ಸ್ಥಳೀಯ ಜನರ ವಾಹನಗಳನ್ನು ತಡೆದು ನಿಲ್ಲಿಸಿ ಫೈನ್ ಹಾಕುವ ಪೋಲಿಸರೇ ತಮ್ಮ ವಾಹನಗಳ ಡಾಕ್ಯುಮೆಂಟ್ ಬಗ್ಗೆ ಗಮನ ಹರಿಸದೇ ಇರುವಾಗ ಇದಕ್ಕೆ ಹೊಣೆ ಯಾರು ಎನ್ನುವುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ. ಜನರ ವಾಹನದ ಮೇಲೆ ಕೇಸ್ ದಾಖಲಿಸುವ ಕಮೀಷನರ್ ಸಾಹೆಬ್ರಾ ಡ್ರೈವ್ ಒಳಗಡೆ ಪೋಲಿಸ್ ವಾಹನಗಳಿಗೂ ದಂಡ ಬೀಳುವುದೇ ಎಂದು ಕಾದು ನೋಡಬೇಕಾಗಿದೆ ..!

ಇತ್ತೀಚಿನ ಸುದ್ದಿ

ಜಾಹೀರಾತು