10:51 AM Tuesday30 - November 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಆರೋಪಿ ಡಾ. ರತ್ನಾಕರ್ ಗೆ… ದಂಪತಿ ಜತೆ ಸುರತ್ಕಲ್ ಟೋಲ್ ಸಿಬ್ಬಂದಿ ಅನುಚಿತ ದುರ್ವರ್ತನೆ: ಪೋಲೀಸ್ ಕಮಿಷನರ್ ಶಶಿಕುಮಾರ್… ಕಾಫಿನಾಡಲ್ಲಿ ಪ್ರಾಮಾಣಿಕ ಕಳ್ಳರು!: 4 ಬಾರ್ ಗಳಿಗೆ ಹೊಕ್ಕ ಚೋರರು: ಹಣ ಸಿಕ್ಕಿಲ್ಲ, ಆದ್ರೆ… ಕಡೂರು: ನೀರಿನ ಟ್ಯಾಂಕ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು; ಒಬ್ಬ ಗಂಭೀರ ಬೆಂಗಳೂರು: ನವಜಾತ ಹೆಣ್ಣು ಶಿಶುವನ್ನು ದೇವರ ಗುಡಿ ಮುಂದಿಟ್ಟು ಪರಾರಿ ಮೂಡಿಗೆರೆ: ಒಣ ಗಾಂಜಾ ಮಾರಾಟ; ಮಾಲು ಸಹಿತ ಆರೋಪಿ ಬಂಧನ ಕಲಬುರಗಿ ಪಾಲಿಕೆ ಕಮಿಷನರ್ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ: ಕಮಿಷನರ್ ಈ… ಸೋವೇನ ಹಳ್ಳಿ, ಹಗರಿಬೊಮ್ಮನ ಹಳ್ಳಿಗೆ ಸಮರ್ಪಕ ಬಸ್ ವ್ಯವಸ್ಥೆ: ಗ್ರಾಮಸ್ಥರ ಹಕ್ಕೊತ್ತಾಯ 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಡಾ. ರತ್ನಾಕರ್ ಬಂಧನ; 2…

ಇತ್ತೀಚಿನ ಸುದ್ದಿ

20 ವರ್ಷಗಳಿಂದ 40 ಕುಟುಂಬಗಳು ಅರ್ಜಿ ಸಲ್ಲಿಸಿದರೂ ಸಿಗದ ವಸತಿಭಾಗ್ಯ!: ಕೂಡ್ಲಿಗಿ ಅಂಬೇಡ್ಕರ್ ನಗರದ ನಿರಾಶ್ರಿತರ ಅರಣ್ಯರೋಧನಕ್ಕೆ ಕೊನೆ ಎಂದು?

26/09/2021, 10:22

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ,ಸೆ 24ರಂದು ಸುರಿದ ಮಳೆಯಿಂದಾಗಿ ಡಾ”ಬಿ.ಆರ್.ಅಂಬೇಡ್ಕರ ನಗರದ ಹಲವು ಗುಡಿಸಲ ನಿವಾಸಿಗಳು ಅಕ್ಷರಶಃ ನಿರಾಶ್ರಿತರಾಗಿದ್ದಾರೆ.

ಮಳೆ ಬಂತೆಂದರೆ ಇವರ ಬದುಕು ಬೀದಿ ಪಾಲಾಗುತ್ತದೆ. ವಸತಿಗಾಗಿ ಇಲ್ಲಿನ 40 ಕುಟುಂಬಗಳು 20 ವರ್ಷಗಳಿಂದ ಸರಕಾರಕ್ಕೆ ಅರ್ಜಿ ಹಾಕುತ್ತಲೇ ಬಂದಿದ್ದಾರೆ.

ಇಲ್ಲಿನ ನಿವಾಸಿಳು ಹತ್ತಾರು ವರ್ಷಗಳಿಂದ ಹೀಗೇ ನರಕ ಯಾತನೆ ಪಡುತ್ತಿದ್ದು,ಈ ನಿರಾಶ್ರಿತರ ಗೋಳು ಆಲಿಸೋರಿಲ್ಲ , ಸ್ಪಂದಿಸುವರಿಲ್ಲ. ಹಾಗಾಗಿ ಕುಟುಂಬಗಳು ಅಕ್ಷರಶಃನಿರಾಶ್ರಿತರಾಗಿದ್ದಾರೆ.

ಮಳೆ ಬಂದ ಸಂದರ್ಭದಲ್ಲಿ  ಕೂಡಲು ಸಹ ಸ್ಥಳವಿಲ್ಲದೇ ಪರದಾಡುವಂತಾಗಿದೆ, ಸುಮಾರು 20 ವರ್ಷಗಳಿಂದ 40 ಕುಟುಂಬಗಳು ವಸತಿಗಾಗಿ ಪ್ರತಿ ವರ್ಷ ಅರ್ಜಿ ಹಾಕಿದ್ದೇ ಹಾಕಿದ್ದು. ಎಲ್ಲ ಜನಪ್ರತಿನಿಧಿಗಳಿಗೆ  ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ಜನಪ್ರತಿನಿಧಿಗಳು ಯಾರೂ ಆಶ್ರಯ ನೀಡುವಲ್ಲಿ ಆಸಕ್ತಿ ತೋರಿಲ್ಲ. ಅವರು ಯಾವುದಕ್ಕೂ ಉಪಯೋಗವಾಗಿಲ್ಲ ಎನ್ನುತ್ತಾರೆ ನಿರಾಶ್ರಿತರು. ಹಲವು ಬಾರಿ ಶಾಸಕರನ್ನೊಳಗೊಂಡಂತೆ ಪ್ರಮುಖ ಜನಪ್ರತಿನಿಧಿಗಳಿಗೆ, ಮನವಿ ಮಾಡಿದರೂ ವಸತಿ ಕಲ್ಪಿಸಿಲ್ಲ ಎನ್ನುತ್ತಾರೆ ನಿರಾಶ್ರಿತರು. 

ನಮ್ಮ ಮುಖ್ಯವಾದ ಸಮಸ್ಯೆ ನಿವೇಶನ.ವಸತಿಗಳ ಬಗ್ಗೆ ಎಲ್ಲರ  ಹತ್ತಿರ ಅಂಗಾಲಾಚಿ ಹೇಳಿ ಬೇಡಿಕೊಂಡಿದ್ದು, ಪತ್ರಗಳ ಮೂಲಕ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. 

ನಿರಾಶ್ರಿತರ ಗೋಳು ಅರಣ್ಯ ರೋಧನವಾಗಿದೆ.  ಮಳೆ ಬಂದಾಗಲೆಲ್ಲ, ನಿಂತುಕೊಂಡೇ ಕಾಲಹರಣ ಮಾಡಬೇಕಿದೆ. ಕಾರಣ ತುರ್ತಾಗಿ ಮಳೆಗಾಲ ಮುಗಿಯೋವರೆ ಗಂಜಿಕೇಂದ್ರ ಪ್ರಾರಂಭಿಸಬೇಕಿದೆ.  ಇಲ್ಲಿ ಅವಿಭಕ್ತ ಕುಟುಂಬಗಳು, ಮಾಜಿ ದೇವದಾಸಿಯರು, ವಿಧವೆಯರು, ಅಂಗವಿಕಲರು ಕಡು ಬಡವರು ರೈತರಿದ್ದು, ಸ್ಥಳೀಯ ಆಡಳಿತ ಸರ್ಕಾರ ಅವರಿಗೆ ಕನಿಷ್ಠ ವಸತಿ ಕಲ್ಪಿಸುವಲ್ಲಿ ವಿಫಲವಾಗಿವೆ.

ಸರ್ಕಾರ ಎಸ್.ಸಿ ಗಳಿಗೆ ವಿಶೇಷ ಯೋಜನೆಗಳನ್ನು ಜಾರಿ ತಂದಿದೆಯಾದರೂ ಕೇವಲ ಲೆಕ್ಕ ಪತ್ರಕ್ಕೆ ಸೀಮಿತವಾಗಿವೆ. ಇವರಿಗೆ ಮಾತ್ರ  ಮೂಲಭೂತ ಸೌಕರ್ಯಗಳು ಗಗನ ಕುಸುಮವಾಗಿವೆ.

ಸ್ಥಳೀಯ ಜನಪ್ರತಿನಿಧಿಗಳು ಇವರನ್ನು ತಮ್ಮ ಸಂದರ್ಭದಲ್ಲಿ ಬಳಸಿಕೊಳ್ಳುತ್ತಾರೆ. ಇವರ ಹಿತಕ್ಕಾಗಿ ಕನಿಷ್ಠ ಸೌಕರ್ಯಗಳನ್ನು ಒದಗಿಸಿಲ್ಲ. ಈ ಮೂಲಕ ಅವರನ್ನು ವಂಚಿತರಾಗಿಸಿದ್ದಾರೆ. ಸುಮಾರು ವರ್ಷಗಳಿಂದ ಮಳೆಗಾಲದಲ್ಲಿ ಮಳೆ ಬಂದರೆ ಇಲ್ಲಿನ ನಿವಾಸಿಗಳು ಪಾಡು ಅದೋಗತಿಯಲ್ಲಿವೆ, ಸುಮಾರು 40 ಕುಟುಂಬಗಳು ಅರೆ ಬರೆ ಗುಡಿಸಿನಲ್ಲೇ ವಾಸ ಮಾಡುತ್ತಿವೆ. ಪ್ರತಿ ವರ್ಷ ಮಳೆಗಾಲ ಸಂದರ್ಭದಲ್ಲಿ  ಗುಡಿಸಲುಗಳು ನೀರಿನಿಂದಾವೃತವಾಗುತ್ತವೆ.

ಮನೆಗಳಲ್ಲಿ ನೀರು ತುಂಬಿ ಇಡಿ ರಾತ್ರಿ ಹಗಲು ಕಣ್ಣಗೆ ನಿದ್ದೆ  ಇಲ್ಲದೆ ತುಂಬಾ ನರಕ ಯಾತನೆ ಪಡುತ್ತಿದ್ದಾರೆ.

ಹಾಗೂ ಮಳೆ ಬಂದಿದ ದಿನಗಳಲ್ಲಿ ಕಾರಣ ಮಳೆಗಾಲದಲ್ಲಿ ನಿರಾಶ್ರಿತರಿಗೆ, ಸರ್ಕಾರ ತುರ್ತಾಗಿ ತಾತ್ಕಾಲಿಕ ಗಂಜಿ ಕೇಂದ್ರಗಳನ್ನು ತೆರೆದು ವಸತಿ ಸೌಲಭ್ಯ ಕಲ್ಪಸಬೇಕಿದೆ. 

ಶಾಸಕರು ಖಾಯಂ ವಸತಿ ಕಲ್ಪಿಸಬೇಕು; ಶಾಸಕ ಎಂ.ವೈ.ಗೋಪಾಲಕೃಷ್ಣರವರು ಶೀಘ್ರವೇ ಖುದ್ದಾಗಿ ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಬೇಕಿದೆ. ಈ ಮೂಲಕ ಅವರು ಜನಪರ ಕಾಳಜಿ ತೋರಬೇಕಿದೆ ಎನ್ನುತ್ತಾರೆ ದಲಿತ ಮುಖಂಡರು. ಶಾಸಕರು ರಾಜ್ಯ ಕಂಡ ಹಿರಿಯ ಪ್ರಭಾವಿ ಅನುಭವಿ ಶಾಸಕರಾಗಿದ್ದು, ಆಡಳಿತದಲ್ಲಿ ಸಾಕಷ್ಟು ಅನುಭವಿ ಹಾಗೂ ಪ್ರಭಾವಿಗಳಾಗಿದ್ದಾರೆ. ಶಾಸಕರಾದ ಎನ್.ವೈ.ಜಿರವರು ಮನಸ್ಸು ಮಾಡಿ ಶೀಘ್ರವೇ ನಿರಾಶ್ರಿತರಿಗೆ ಖಾಯಂ ವಸತಿ ಕಲ್ಪಿಸಿ,ಹತ್ತಾರು ವರ್ಷಗಳಿಂದ ಇವರು ಅನುಭವಿಸುತ್ತಿರುವ  ನರಕ ಯಾತನೆಯಿಂದ ನಿರಾಶ್ರಿತರನ್ನು ಪಾರುಮಾಡಲು ಸಾಧ್ಯ ಎಂದು ಸಂಘಟನೆಗಳ ಪದಾಧಿಕಾರಿಗಳು ಹೇಳುತ್ತಾರೆ. ತಾಲೂಕಾಡಳಿತ  ನಿರಾಶ್ರಿತ ಕುಟುಂಬಗಳನ್ನು ಗುರುತಿಸಿ,ಮಳೆ ಗಾಲ ಮುಗಿಯೋವರೆಗೆ ಅವರಿಗೆ ತುರ್ತಾಗಿ ವಸತಿಗಾಗಿ ಗಂಜಿ ಕೇಂದ್ರ ಆರಂಭಿಸಬೇಕಿದೆ,

 ಅವರಿಗೆ ವಸತಿ ಯೋಜನೆಯಡಿ ಶೀಘ್ರ ವಸತಿಗಳನ್ನು  ನೀಡುವಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಶಾಸಕರು ವಸತಿ ಕಲ್ಪಿಸುವ ಸಂದರ್ಭದಲ್ಲಿ ಈ ನಿರಾಶ್ರಿತರಿಗೇ ಮೊದಲು ನೀಡಬೆಕಿದೆ,ಈ ಮೂಲಕ ಶಾಸಕರು ತಮ್ಮ  ಜನಪರ ಕಾಳಜಿ ತೋರಬೇಕೆಂದು ದಲಿತ ಮುಖಂಡರು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ, ನಿರಾಶ್ರಿತರಿಗೆ ವಸತಿ ಕಲ್ಪಿಸಿ ದಲಿತರ ಹಿತಕಾಯಬೇಕಿದೆ ಎಂಬುದು ಪಟ್ಟಣದ ನಾಗರೀಕರ ಅಭಿಮತವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು