11:39 PM Tuesday26 - October 2021
ಬ್ರೇಕಿಂಗ್ ನ್ಯೂಸ್
ಶಿಕ್ಷಕರ ವರ್ಗಾವಣೆ:  ಅಕ್ಟೋಬರ್ 28ರಂದು ಕೌನ್ಸಿಲಿಂಗ್; ದಾಖಲೆಗಳೊಂದಿಗೆ ಹಾಜರಾಗಲು ಸೂಚನೆ ಕಾರ್ಕಳ ಪುರಸಭೆ ಮಾಸಿಕ ಸಭೆ: ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್… ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: 7 ದಿನ ಕಳೆದರೂ ಆರೋಪಿ ರಾಜೇಶ್ ಭಟ್… ಇಂದಿರಾ ಕ್ಯಾಂಟೀನ್ ನಲ್ಲಿ ಭೋಜನ ವೈಭವ: ಬಡವರ ತುತ್ತಿನ ರುಚಿ ಸವಿದ ಕಾರ್ಕಳ ಪುರಸಭೆ… ರಾಯಚೂರು: ಗಲ್ಲಿ ಗಲ್ಲಿಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾದ ಮಟ್ಕಾ ಸಾರಾಯಿ, ಇಸ್ಪೀಟ್ ದಂಧೆ;… ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ: 1ರಿಂದ 5ನೇ ತರಗತಿ ವರೆಗೆ ಕ್ಲಾಸ್ ಆರಂಭ; ಆನ್… ಹೀಗೂ ಉಂಟೇ?!: ಗಂಡನನ್ನೇ 5 ಲಕ್ಷಕ್ಕೆ ಮಾರಿದ ಪತ್ನಿ; ಹಣ ಸಂದಾಯದ ವೇಳೆ… ಮಂಗಳೂರು: ಓನೆಕ್ಸ್ ಪಬ್‌ ಮೇಲೆ ಸಿಸಿಬಿ ಪೊಲೀಸರ ದಾಳಿ; ಧ್ವನಿವರ್ಧಕ ವಶ ರಿಪೋರ್ಟರ್ ಕರ್ನಾಟಕ ವರದಿ ಫಲಶ್ರುತಿ: ಬೆಳಿಗ್ನೋರೂ ಶಾಲೆ ಪಕ್ಕದಲ್ಲಿ ಬ್ರಿಜ್ ಗೆ ಕೊನೆಗೂ… ಉಡುಪಿ ಜಿಲ್ಲಾದ್ಯಂತ ಭಾರಿ ಮಳೆ: ಅಜೆಕಾರಿನಲ್ಲಿ ಮನೆಗೆ ಸಿಡಿಲು ಬಡಿದು ಸುಟ್ಟು ಹೋದ…

ಇತ್ತೀಚಿನ ಸುದ್ದಿ

ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 30ನೇ ವಾರ್ಷಿಕ ಸಂಭ್ರಮೋತ್ಸವ: ಪ್ರಶಸ್ತಿ ಪ್ರದಾನ

25/09/2021, 19:32

ಬೆಂಗಳೂರು(reporterkarnataka.com): ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 30ನೇ ವರ್ಷದ ವಾರ್ಷಿಕ ಸಂಭ್ರಮೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರಿನ ಕೆಂಪೇಗೌಡ ನಗರದ ಉದಯ ಭಾನು ಕಲಾ ಸಂಘದ ಆಡಿಟೋರಿಯಂ ಆವರಣದಲ್ಲಿ ಶನಿವಾರ ನಡೆಯಿತು.

ಪ್ರತಿಷ್ಠಾನದ ಗೌರವಾಧ್ಯಕ್ಷ ಹಾಗೂ ಸಮಾಜ ಸೇವಕ ಬನ್ನೂರಿನ ಡಾ.ಕೆ.ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ಕಾಳಪ್ಪ ಅಧ್ಯಕ್ಷತೆ ವಹಿಸಿದ್ದರು.

ಸರ್.ಎಂ.ವಿಶ್ವೇಶ್ವರಯ್ಯರವರ ಜನ್ಮ ದಿನಾಚರಣೆಯ ಅಂಗವಾಗಿ ಸಾಂಸ್ಕೃತಿಕ ಜನಪದೋತ್ಸವ ಮತ್ತು ಹಿರಿಯ ಸಾಹಿತಿಗಳಿಗೆ ಗೌರವಾರ್ಥವಾಗಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ ನಡೆಯಿತು.

ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯನ್ನು ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ ಗೌರವಾಧ್ಯಕ್ಷ ಮತ್ತು ಬನ್ನೂರಿನ ಸಮಾಜ ಸೇವಕ ಡಾ.ಕೆ.ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ಕಾಳಪ್ಪ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಸುರ್ವೆ, ಕಲ್ಮೇಶ್ವರ ಸ್ವಾಮಿಗಳು, ಸಾಹಿತಿಗಳಾದ ಡಾ.ಭದ್ರಾವತಿ ರಾಮಾಚಾರಿ, ಪ್ರತಿಷ್ಠಾನದ ಸಂಚಾಲಕರುಗಳಾದ ಬಿ.  ಎಚ್.ಹೋಂಗಲ್, ಉಲ್ಲಾಸ್ ರಾವ್ ರೇಣುಕೆ, ರಾಜ್ ಸಂಪಾಜೆ, ಕರಿಬಸಪ್ಪ ವೈ.ಶೋಗಿ ಅವರು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಇನ್ನು ಇದೆ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ,ತಾಲ್ಲೂಕುಗಳಿಂದ ಆಗಮಿಸಿದ ಕಲಾ ತಂಡದ ಕಲಾವಿದರಿಂದ ವಚನ ಗಾಯನ, ಜಾನಪದ ಗಾಯನ, ನೃತ್ಯ ಪ್ರದರ್ಶನ ಹೀಗೆ ಅನೇಕ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದೆ ವೇಳೆ ಬಾಗಲಕೋಟೆ ಜಿಲ್ಲೆಯ ನಗರಾಳ ಗ್ರಾಮದ ಯೋಗಪಟು ವಿಷ್ಣು ನ್ಯಾಮಗೌಡರು ರವರ ಯೋಗ ಪ್ರದರ್ಶನವನ್ನು ಕಂಡು ಮತ್ತು ನಿರೂಪಣೆ ಮಾಡಿದ್ದ ರಾಜ್ ಸಂಪಾಜೆ ಅವರಿಗೆ ಪ್ರತಿಷ್ಠಾನ ಟ್ರಸ್ಟ್ ನ ಗೌರವಾಧ್ಯಕ್ಷ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ಅವರು ಧನಸಹಾಯ ಮಾಡಿ ಸನ್ಮಾನಿಸಿ ಅಭಿನಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು