10:07 PM Thursday2 - December 2021
ಬ್ರೇಕಿಂಗ್ ನ್ಯೂಸ್
ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಹೆತ್ತವರು ಮದುವೆ ಮಾಡಿಸದ ಬೇಸರ: ನೇಣು ಬಿಗಿದು ಪ್ರೇಮಿಗಳು ಆತ್ಮಹತ್ಯೆ  ಸರ್ವಧರ್ಮಿಯರು ಸಂದರ್ಶಿಸುವ ಪುಣ್ಯ ಕ್ಷೇತ್ರ ಧರ್ಮಸ್ಥಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ… ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು;… ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಸಾಲು ಸಾಲಾಗಿ ಆಸ್ಪತ್ರೆ ಸೇರುತ್ತಿರುವ ಪಚ್ಚನಾಡಿ ತ್ಯಾಜ್ಯ ದುರಂತ ಸಂತ್ರಸ್ತರು: ಜಿಲ್ಲಾಧಿಕಾರಿ ಇತ್ತ… ನಾದಬ್ರಹ್ಮ ಹಂಸಲೇಖಗೆ ಹೈಕೋರ್ಟ್ ಬಿಗ್‌ ರಿಲೀಫ್ : ಪ್ರಕರಣ ದಾಖಲಾತಿಗೆ ತಡೆಯಾಜ್ಞೆ; ದೂರುದಾತರಿಗೆ… ಚಿತ್ರದುರ್ಗ: ಕಾರು- ಬೈಕ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು; ಇನ್ನೊರ್ವ ಗಂಭೀರ… ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಚಿತ್ರದುರ್ಗದಲ್ಲಿ ಸಿದ್ದು…

ಇತ್ತೀಚಿನ ಸುದ್ದಿ

ಹೆಸ್ಕಾಂ ನಿರ್ಲಕ್ಷ್ಯ: ವಿಜಯಪುರದ ಶಿರನಾಳ ಸಹಿತ 10 ಗ್ರಾಮಗಳಿಗೆ ದಿನಕ್ಕೆ ಬರೇ 6 ತಾಸು ಕರೆಂಟ್!!: ಸಂಕಷ್ಟದಲ್ಲಿ ಮೆಕ್ಕೆಜೋಳ, ದ್ರಾಕ್ಷೆ ಬೆಳೆಗಾರರು 

23/09/2021, 14:38

ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ

info.reporterkarnataka@gmail.com

ವಿಜಯಪುರ ತಾಲೂಕಿನ ಶಿರನಾಳ ಸೇರಿದಂತೆ 10 ಗ್ರಾಮಗಳಲ್ಲಿ ಭಾರಿ ವಿದ್ಯುತ್ ಸಮಸ್ಯೆಯಿಂದ ಜನರು ಪರದಾಡುತ್ತಿದ್ದು, ದಿನಕ್ಕೆ ಕೇವಲ 6 ತಾಸು ಮಾತ್ರ ಕರೆಂಟ್ ನೀಡಲಾಗುತ್ತದೆ. ಇದರಿಂದ ಮೆಕ್ಕೆಜೋಳ ಹಾಗೂ ದ್ರಾಕ್ಷೆ ಬೆಳೆಗಾರರು ಹಾಗೂ ದುಡಿದು ತಿನ್ನುವ ರೈತಾಪಿ ವರ್ಗದವರು ತೀವ್ರ ತೊಂದರೆಗೀಡಾಗಿದ್ದಾರೆ.


ಹೆಸ್ಕಾಂ ವ್ಯಾಪ್ತಿಗೆ ಬರುವ ತಿಡಗುಂದಿ ಸಬ್ ಡಿವಿಜನ್ ನಿಂದ ಒಟ್ಟು 10 ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಶಿರನಾಳ, ಮಖಣಾಪುರ, ಕನ್ನೂರ, ಮಿಚನಾಳ, ಗುಣಕಿ, ಬೊಮ್ಮನಹ, ಡೋಮನಾಳ, ಮಖಣಾಪುರ, ತಿಡಗುಂದಿ ಹಾಗೂ ಮಡಸನಾಳ ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತದೆ. ಇದು ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ದೇವಾನಂದ ಚವಾಣ್ ಇಲ್ಲಿನ ಶಾಸಕರು. ಆದರೆ ರೈತರ ಬಗ್ಗೆ ಶಾಸಕರ ನಿರ್ಲಕ್ಷ್ಯತನದಿಂದ 10 ಗ್ರಾಮಗಳಿಗೆ ದಿನಕ್ಕೆ ಬರೇ 6 ತಾಸು ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಇದರಲ್ಲಿ ಹೆಸ್ಕಾಂಗೆ ಸೇರಿದ ಸ್ಥಳೀಯ ಅಧಿಕಾರಿಗಳ ಪಾತ್ರ ಕೂಡ ಇದೆ.

ಪವರ್ ಕಟ್ ಸಮಸ್ಯೆಯ ಕುರಿತು ಹಲವಾರು ಬಾರಿ 

ಹೆಸ್ಕಾಂನ ವಿಜಯಪುರ ತಾಲೂಕಿನ ಗ್ರಾಮೀಣ ವಲಯದ  ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಎ.ಎಸ್. ದೊಡ್ಡಮನಿ, ವಿಜಯಪುರ ಜಿಲ್ಲೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿದ್ದಪ್ಪ ಬೆಂಜಿಗಿರಿ ಅವರ ಗಮನಕ್ಕೆ ತರಲಾಗಿದೆ. ಆದರೆ ಈ ಹೆಸ್ಕಾಂ ಅಧಿಕಾರಿಗಳಿಂದ ಯಾವುದೇ ಸಕರಾತ್ಮಕ ಸ್ಪಂದನ ದೊರೆತಿಲ್ಲ ಎಂದು ರೈತರು ಹೇಳುತ್ತಾರೆ. ಸಮಸ್ಯೆಗಳಿದ್ದಾಗ ಜನರು ದೂರವಾಣಿ ಕರೆ ಮಾಡಿದರೆ ತಿಡಗುಂದಿ ಸೆಕ್ಷನ್ ಆಫೀಸರ್ ಚಂದು ಕೋಣೆಗೊಳ ಅವರು  ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಕರೆ ಸ್ವೀಕಾರ ಮಾಡುವುದಿಲ್ಲ ಎಂದು ನಾಗರಿಕರು ಆರೋಪಿಸುತ್ತಾರೆ.

ನಾಗಠಾಣ  ಕ್ಷೇತ್ರದ ಶಾಸಕ ದೇವಾನಂದ್ ಚವ್ಹಾಣ ಅವರು ಚಂದು ಅವರನ್ನು ಯಾಕಾಗಿ ಸೆಕ್ಷನ್ ಆಫೀಸರ್ ಆಗಿ ಇಟ್ಟು ಕೊಂಡಿದ್ದಾರೆ ಎನ್ನುವುದು ಡಾಲರ್ ಪ್ರಶ್ನೆಯಾಗಿದೆ. ಇಲ್ಲಿನ ದ್ರಾಕ್ಷೆ ಹಾಗೂ ಮೆಕ್ಕೆಜೋಳ ಬೆಳೆಗಾರರು ತಮ್ಮ ಹೊಲಗಳಿಗೆ ನೀರು ಬಿಡಲಾಗದೆ ಪರಿತಪಿಸುತ್ತಿದ್ದಾರೆ. ಇದಕ್ಕೆಲ್ಲ ನೂತನ ಪವರ್ ಮಿನಿಸ್ಟರ್ ಸುನಿಲ್ ಕುಮಾರ್ ಉತ್ತರಿಸಬೇಕಾಗಿದೆ.

……

ಇತ್ತೀಚಿನ ಸುದ್ದಿ

ಜಾಹೀರಾತು