11:32 PM Tuesday26 - October 2021
ಬ್ರೇಕಿಂಗ್ ನ್ಯೂಸ್
ಶಿಕ್ಷಕರ ವರ್ಗಾವಣೆ:  ಅಕ್ಟೋಬರ್ 28ರಂದು ಕೌನ್ಸಿಲಿಂಗ್; ದಾಖಲೆಗಳೊಂದಿಗೆ ಹಾಜರಾಗಲು ಸೂಚನೆ ಕಾರ್ಕಳ ಪುರಸಭೆ ಮಾಸಿಕ ಸಭೆ: ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್… ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: 7 ದಿನ ಕಳೆದರೂ ಆರೋಪಿ ರಾಜೇಶ್ ಭಟ್… ಇಂದಿರಾ ಕ್ಯಾಂಟೀನ್ ನಲ್ಲಿ ಭೋಜನ ವೈಭವ: ಬಡವರ ತುತ್ತಿನ ರುಚಿ ಸವಿದ ಕಾರ್ಕಳ ಪುರಸಭೆ… ರಾಯಚೂರು: ಗಲ್ಲಿ ಗಲ್ಲಿಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾದ ಮಟ್ಕಾ ಸಾರಾಯಿ, ಇಸ್ಪೀಟ್ ದಂಧೆ;… ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ: 1ರಿಂದ 5ನೇ ತರಗತಿ ವರೆಗೆ ಕ್ಲಾಸ್ ಆರಂಭ; ಆನ್… ಹೀಗೂ ಉಂಟೇ?!: ಗಂಡನನ್ನೇ 5 ಲಕ್ಷಕ್ಕೆ ಮಾರಿದ ಪತ್ನಿ; ಹಣ ಸಂದಾಯದ ವೇಳೆ… ಮಂಗಳೂರು: ಓನೆಕ್ಸ್ ಪಬ್‌ ಮೇಲೆ ಸಿಸಿಬಿ ಪೊಲೀಸರ ದಾಳಿ; ಧ್ವನಿವರ್ಧಕ ವಶ ರಿಪೋರ್ಟರ್ ಕರ್ನಾಟಕ ವರದಿ ಫಲಶ್ರುತಿ: ಬೆಳಿಗ್ನೋರೂ ಶಾಲೆ ಪಕ್ಕದಲ್ಲಿ ಬ್ರಿಜ್ ಗೆ ಕೊನೆಗೂ… ಉಡುಪಿ ಜಿಲ್ಲಾದ್ಯಂತ ಭಾರಿ ಮಳೆ: ಅಜೆಕಾರಿನಲ್ಲಿ ಮನೆಗೆ ಸಿಡಿಲು ಬಡಿದು ಸುಟ್ಟು ಹೋದ…

ಇತ್ತೀಚಿನ ಸುದ್ದಿ

Breaking : ಮಕ್ಕಳ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಯೂ ಅನ್ಯರ ಪಾಲು: ಅಕ್ರಮ ಸಾಗಾಟ ಪತ್ತೆ ಮಾಡಿದ ಅಥಣಿ ಗ್ರಾಮಸ್ಥರು !

17/09/2021, 11:48

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com

ಪಡಿತರ ಅಕ್ಕಿ ಅಕ್ರಮ ಸಾಗಾಟ, ಅಂಗನವಾಡಿ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಅವ್ಯವಹಾರದ ನಡುವೆ ಇನ್ನೊಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಂಗನವಾಡಿ ಮತ್ತು ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಯಡಿ ನೀಡುವ ಹಾಲಿನ ಪುಡಿಯನ್ನು ಅಕ್ರಮ ಸಾಗಾಟ ನಡೆದಿದೆ.

ಅಪೌಷ್ಟಿಕತೆ ಹೋಗಲಾಡಿಸಲು ಸರಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತದೆ. ಆದರೆ ಚಿಕ್ಕೋಡಿ ಉಪವಿಭಾಗ ಅಥಣಿ ತಾಲೂಕಿನ ಖಿಳೆಗಾಂವ್ ಗ್ರಾಮದಲ್ಲಿ ಅಕ್ರಮವಾಗಿ ಹಾಲಿನ ಪುಡಿ ಸಾಗಾಟ ಮಾಡುತ್ತಿರುವ ಓರ್ವನನ್ನು ಗ್ರಾಮಸ್ಥರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಅಕ್ರಮವಾಗಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಬೈಕ್ ಮೇಲೆ ಸಾಗಾಟ ಮಾಡುತ್ತಿರುವ ಅಥಣಿ ತಾಲೂಕಿನ ಅನಂತಪುರ ಗ್ರಾಮದ ಗಂಗಾಧರ ಶಂಕರ ಪತ್ತಾರ ಎಂದು ತಿಳಿದು ಬಂದಿದೆ. 

ಕಳೆದ ಒಂದು ವರ್ಷಗಳಿಂದ, ಇದೇ ರೀತಿಯಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ, ಖಿಳೇಗಾಂವ್ ಗ್ರಾಮದ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಂದ ಹಾಲಿನಪುಡಿ ಪಾಕೆಟ್ಟು ತೆಗೆದುಕೊಂಡು ಸಾಗಾಟ ಮಾಡುತ್ತಿರುವ ವ್ಯಕ್ತಿಯನ್ನು ಗ್ರಾಮಸ್ಥರು ತಡೆಹಿಡಿದು ತರಾಟೆ ತೆಗೆದುಕೊಂಡರು ಘಟನೆ ಸಂಭವಿಸಿದೆ. ಅದರೊಂದಿಗೆ ಅವನನ್ನು ಅಥಣಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ  ನಡೆದಿದೆ

ಇತ್ತೀಚಿನ ಸುದ್ದಿ

ಜಾಹೀರಾತು