12:51 PM Tuesday19 - March 2024
ಬ್ರೇಕಿಂಗ್ ನ್ಯೂಸ್
ದೇವರಮನೆಯಲ್ಲಿ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು ಮೂಡಿಗೆರೆ: ಇಬ್ಬರು ಬಿಜೆಪಿ ಮುಖಂಡರ ಅಮಾನತು ಆದೇಶ ವಾಪಸ್; ಭಿನ್ನಮತ ಉಪಶಮನಕ್ಕೆ ಹಿರಿಯ… ಭಾರತದ ಕಾರು ಮಾಲೀಕರ ನೆಚ್ಚಿನ ಸೂಪರ್ ಆ್ಯಪ್ ಪಾರ್ಕ್+: ಪ್ರಸ್ತುತ ದೇಶದಲ್ಲಿ 1.5… ಕರ್ನಾಟಕವನ್ನು ಲೂಟಿಕೋರರಿಂದ ರಕ್ಷಿಸುತ್ತೇನೆ: ಕಲಬುರಗಿ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ಮೋದಿ ಘೋಷಣೆ ದೇಶದ ಗದ್ದುಗೆಗೆ ಬಿಗ್ ಫೈಟ್: ಮತ್ತೊಮ್ಮೆ ಮೋದಿ- ರಾಹುಲ್ ಮುಖಾಮುಖಿ; ರಾಜ್ಯದಲ್ಲಿ ಏ.26… ಸಂಸತ್ ಚುನಾವಣೆಯ ದಿನಾಂಕ ನಾಳೆ ಪ್ರಕಟ: ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಲಿದ್ದಾರೆ ಚೀಫ್ ಎಲೆಕ್ಷನ್… ಕಡೂರಿಗೆ ಆಗಮಿಸಿದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ: ಮೊಮ್ಮಗ ಪ್ರಜ್ವಲ್ ಪರ… ಹಿಂದುತ್ವ ಮತ್ತು ಅಭಿವೃದ್ಧಿಗೆ ನನ್ನ ಆದ್ಯತೆ: ದ.ಕ. ಲೋಕಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ… ಮಂಗಳೂರು: ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅಮಾನತಿಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಂಜನಗೂಡು ದೇಬೂರು ಗ್ರಾಮದಲ್ಲಿ ಕೂಸಿನ ಮನೆ ಶಿಶು ಪಾಲನಾ ಕೇಂದ್ರ ಉದ್ಘಾಟನೆ

ಇತ್ತೀಚಿನ ಸುದ್ದಿ

ಇನ್ನು ಕೇವಲ 24 ತಾಸಿನಲ್ಲಿ ಭೂ ಪರಿವರ್ತನೆ: ಕಂದಾಯ ಸಚಿವ ಆರ್. ಅಶೋಕ್ ಏನು ಹೇಳಿದ್ರು ಗೊತ್ತಾ?

14/09/2021, 19:52

ಬೆಂಗಳೂರು(reporterkarnataka.com): ಇನ್ನು ಕೇವಲ 24 ತಾಸಿನಲ್ಲಿ ಭೂ ಪರಿವರ್ತನೆ ನಡೆಯಲಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ಹಾಗೂ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಕೃಷಿ ಭೂಮಿ ಪರಿವರ್ತನೆ‌ಗೆ ಸಂಬಂಧಿಸಿದಂತೆ ಹಲವು ಸಮಸ್ಯೆ‌ಗಳು ಕೇಳಿ ಬರುತ್ತಿವೆ. ಅದಕ್ಕಾಗಿ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ‌ಕ್ಕೆ ಉತ್ತೇಜನ ಹಾಗೂ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ನಿಯಮಗಳನ್ನು ಸರಳಗೊಳಿಸಿ, ಕೇವಲ 24 ಗಂಟೆಯಲ್ಲೇ ಭೂ ಪರಿವರ್ತನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ರೂಪಿಸಲಾದ ನಿಯಮಾವಳಿಗಳಿಂದ ಪ್ರಕ್ರಿಯೆ‌ಗಳು ಸರಳವಾಗಲಿವೆ. ಈ ಬಗ್ಗೆ ವಿವಿಧ ಇಲಾಖೆ‌ಗಳ ಅಧಿಕಾರಿಗಳ ಜತೆಗೆ ಸಭೆ ನಡೆಸಿ ನಿರ್ಧಾರಿಸಲಾಗವುದು ಎಂದು ಅವರು ಹೇಳಿದ್ದಾರೆ.

ಹೊಸ ನಿಯಮಾವಳಿಯಂತೆ ಕಂದಾಯ ಇಲಾಖೆಯು ಭೂ ಪರಿವರ್ತನೆ‌ಗೆ ಅರ್ಜಿಯನ್ನು ಉಪ ಆಯುಕ್ತರಿಂದ ಯೋಜನಾ ಪ್ರಾಧಿಕಾರಕ್ಕೆ ಸಲ್ಲಿಸುತ್ತದೆ. ನಂತರ ಕಡತ ಎಲ್ಲಾ ಭೂ ಸ್ವಾಧೀನ ಅಧಿಕಾರಿಗಳಿಗೆ, ತಹಶೀಲ್ದಾರ‌ರು, ಕಂದಾಯ ನಿರೀಕ್ಷಕ‌ರು, ಕೊನೆಯಲ್ಲಿ ಗ್ರಾಮ ಲೆಕ್ಕಿಗರಿಗೆ ತಲುಪಲಿದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು