3:28 PM Friday22 - October 2021
ಬ್ರೇಕಿಂಗ್ ನ್ಯೂಸ್
ಹಾಜಬ್ಬರಿಗೊಂದು ಸಲಾಂ: ಕಿತ್ತಳೆ ಬುಟ್ಟಿಯಿಂದ ಶಾಲೆ ಮೆಟ್ಟಲಿನವರೆಗೆ: ಹರೇಕಳದಿಂದ ದೆಹಲಿಗೆ ಅಕ್ಷರ ಸಂತನ ಯಾನ! ಕರುವನ್ನು ಠಾಣೆಯಲ್ಲಿ ಸಾಕಿ ಜನಮೆಚ್ಚುಗೆ ಪಡೆದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹೃದಯಾಘಾತಕ್ಕೆ ಬಲಿ ಪಂಚ ಭಾಷಾ ನಟಿ ಜೂಲಿ ಲಕ್ಷ್ಮೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ: ವಿಶೇಷ… ನಳಿನ್‌ ಹೇಳಿಕೆಗೆ ಕಾಂಗ್ರೆಸ್ ತೀವ್ರ ಪ್ರತಿಭಟನೆ: ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ; ಮಾಜಿ ಸಿಎಂ ಯಡಿಯೂರಪ್ಪ… ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನರ್ಮ್ ಬಸ್: ಸ್ವಾಮಿ, ಓಡಿಸುವುದಾದರೆ ಸರಿಯಾಗಿ ಓಡಿಸಿ,… ಮಣಿಪಾಲ ಶಿವಳ್ಳಿಯ ಯುವತಿ ನಾಪತ್ತೆ; ಮೊಬೈಲ್ ಸ್ವಿಚ್ ಆಫ್ ; ಪ್ರಕರಣ ದಾಖಲು Mangaluru | ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕ ಲಾಯರ್ ಕೆ.ಎಸ್.ಎನ್.ರಾಜೇಶ್ ಮೇಲೆ ಎಫ್ಐಆರ್… ಪಠ್ಯ ಕಡಿತ ಇಲ್ಲ, ಹಾಗಾದರೆ ಭಾನುವಾರ ಶಾಲೆಯ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್… ಹೊನ್ನಾವರ ಮಾಜಿ ಶಾಸಕ ಬಿಜೆಪಿಯ ಎಂ.ಪಿ.ಕರ್ಕಿ ನಿಧನ ನೈತಿಕ ಪೊಲೀಸ್ ಗಿರಿ ಸಮರ್ಥನೆ: ಮುಖ್ಯಮಂತ್ರಿಗೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್…

ಇತ್ತೀಚಿನ ಸುದ್ದಿ

ಮೂಡುಬಿದಿರೆಯಲ್ಲೊಂದು ಹೃದಯ ವಿದ್ರಾವಕ ಘಟನೆ : ಸಂಶಯಪಟ್ಟು ಪತ್ನಿಯನ್ನೇ ಹೊಡೆದು ಕೊಂದ ಪತಿರಾಯ

18/08/2021, 14:34

ಮೂಡಬಿದ್ರಿ (Reporterkarnataka.com)

ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ. ವ್ಯಾಪ್ತಿಯ ಮಠ ಎಂಬಲ್ಲಿ ಪತ್ನಿಯ ಮೇಲೆ ಸಂಶಯಪಟ್ಟು ಕೊಲೆ ಮಾಡಿದ ಪ್ರಕರಣ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಮಂಗಳವಾರ ಸಂಜೆ ಪತಿ ಪತ್ನಿಯರ ನಡುವೆ ಜಗಳ ನಡೆದಿದ್ದು, ದಿನರಾಜ್ ಹೆಂಡತಿಯ ತಲೆಗೆ ಬಲಾಯಿ ಎನ್ನುವ ಸಲಾಕೆ ಹಿಡಿಯಲ್ಲಿ ಹೊಡೆದಿದ್ದಾನೆ. ತಲೆ, ಮುಖ, ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದು ರಕ್ತ ಸೋರತೊಡಗಿತ್ತು. ಸುನೀತಾ ನೆಲಕ್ಕೆ ಉರುಳಿದ ಬಳಿಕ ಆಕೆಯ ತಾಯಿ ಬೊಬ್ಬೆ ಹೊಡೆದಿದ್ದರಿಂದ ಪತ್ನಿಯನ್ನು ದಿನರಾಜನೇ ಬೆಳುವಾಯಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲು ತಂದಿದ್ದಾನೆ.

ಆದರೆ, ಆಸ್ಪತ್ರೆಯಲ್ಲಿ ಪತ್ನಿ ಮಹಡಿ ಮೇಲಿಂದ ಬಿದ್ದು ಗಾಯವಾಗಿದ್ದೆಂದು ಸುಳ್ಳು ಹೇಳಿದ್ದಾನೆ. ಆದರೆ, ವೈದ್ಯರು ನೋಡಿ, ಈಕೆಯ ಸ್ಥಿತಿ ಗಂಭೀರ ಆಗಿರುವುದರಿಂದ ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಹಾಗೂ ಸಂಶಯಗೊಂಡು ಮೂಡುಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಾರೀ ರಕ್ತಸ್ರಾವದ ಜೊತೆಗೆ ಮುಖ, ಕುತ್ತಿಗೆಯ ಭಾಗಕ್ಕೆ ಕಡಿದ ರೀತಿಯ ಗಾಯ ಆಗಿದ್ದರಿಂದ ವೈದ್ಯರು ಸಂಶಯಪಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಿನ್ನೆ ರಾತ್ರಿ ಮಂಗಳೂರಿನ ಎಜೆ ಆಸ್ಪತ್ರೆಗೆ ತರುವಷ್ಟರಲ್ಲಿ ಭಾರೀ ರಕ್ತಸ್ರಾವದಿಂದಾಗಿ ಅಲ್ಲಿಗೆ ತಲುಪುವ ಮೊದಲೇ ಮೃತಪಟ್ಟಿದ್ದಾಳೆ. ಇಂದು ಬೆಳಗ್ಗೆ ಮೂಡಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ವೇಳೆ ತಾನೇ ಹೊಡೆದಿದ್ದನ್ನು ಒಪ್ಪಿಕೊಂಡಿದ್ದಾನೆ.

ಬಡ ಕುಟುಂಬದ ಸುನೀತಾ ತನ್ನ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಒಂದೂವರೆ ವರ್ಷಗಳ ಹಿಂದೆ ಸಂಬಂಧಿಕರು ಸೇರಿ ಮದುವೆ ಮಾಡಿಸಿದ್ದರು. ತಾಯಿ ಒಬ್ಬಳೆ ಮನೆಯಲ್ಲಿ ಇದ್ದುದರಿಂದ ಸುನೀತಾ ಅಲ್ಲಿಯೇ ಉಳಿದುಕೊಂಡಿದ್ದು, ದಿನ್‌ರಾಜ್ ಕೂಡಾ ಅಲ್ಲಿಯೇ ಇದ್ದು ಮೂಡುಬಿದಿರೆಯಲ್ಲಿ ಬ್ಯಾಟರಿ ಅಂಗಡಿಗೆ ಕೆಲಸಕ್ಕೆ ಬರುತ್ತಿದ್ದಾನೆನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು