11:59 PM Saturday25 - September 2021
ಬ್ರೇಕಿಂಗ್ ನ್ಯೂಸ್
ಮಂಗಳೂರಿಗೆ ಆಯುಷ್ ಸ್ಟೋರ್ಟ್ಸ್ ಮೆಡಿಸಿನ್ ಸೆಂಟರ್: ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಭರವಸೆ ಮಹಾರಾಷ್ಟ್ರ; ಅಕ್ಟೋಬರ್ 22ರಿಂದ ಆಡಿಟೋರಿಯಂಗಳು, ಥಿಯೇಟರ್‌ಗಳು ಓಪನ್ ಅಹಿಂಸೆ, ಗೌರವ, ಸಹಿಷ್ಣುತೆ ಸಂದೇಶವು ಇಂದು ಎಲ್ಲಕ್ಕಿಂತ ಹೆಚ್ಚು ಪ್ರಸ್ತುತವಾಗಿದೆ: ಅಮೆರಿಕ ಅಧ್ಯಕ್ಷ… ಕೂಡ್ಲಿಗಿ: ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ಮಾಜಿ ಮುಖ್ಯಮಂತ್ರಿಯ ಕಾಲೆಳೆದ ಮತ್ತೊಬ್ಬ ಮಾಜಿ ಸಿಎಂ!: ಬಿಎಸ್ ವೈ ರಾಜೀನಾಮೆ ಬಗ್ಗೆ… ನವ ಮಂಗಳೂರು ಬಂದರಿನ ಮಲ್ಯ ಗೇಟ್ ಆಧುನೀಕರಣ: ಕೇಂದ್ರ ಬಂದರು ಸಚಿವ ಸೋನೊವಾಲ್ ಶಿಲಾನ್ಯಾಸ ಶಾಸಕ ಕಾಮತ್ ನೇತೃತ್ವದ ನಿಯೋಗ ಕಾರ್ಮಿಕ ಸಚಿವರ ಭೇಟಿ: ಟೈಲರ್ ಗಳಿಗೆ ಭವಿಷ್ಯ… ಬ್ಯಾಟರಿ ಚಾಲಿತ ಆಟೋರಿಕ್ಷಾಗಳನ್ನು ಆರ್ ಟಿಒ ವ್ಯಾಪ್ತಿಗೆ ತರಲು ಒತ್ತಾಯ: ಕಾರಣ ಏನು… ದರೋಡೆಕೋರರು… ಬರಬಾರದ ರೋಗ ಬಂದು ಸಾಯತಾರ…!: ವಿಜಯನಗರ ಟ್ರಾಫಿಕ್ ಪೊಲೀಸರಿಗೆ ಮಹಿಳೆಯ ಹಿಡಿಶಾಪ!! ಭಾರತ ಮತ್ತು ಅಮೆರಿಕ ‘ಸಹಜ ಪಾಲುದಾರರು’: ಕಮಲಾ ಹ್ಯಾರಿಸ್ ಭೇಟಿ ಬಳಿಕ ಪ್ರಧಾನಿ ಮೋದಿ ಘೋಷಣೆ

ಇತ್ತೀಚಿನ ಸುದ್ದಿ

ರಾಜ್ಯಸಭೆಯಲ್ಲಿ ನಡೆದ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ: ಸಭಾಪತಿ ಕಾಗೇರಿ ಖೇದ

13/08/2021, 19:51

ಬೆಂಗಳೂರು(reporterkarnataka.com): ರಾಜ್ಯಸಭೆಯಲ್ಲಿ ಆಗಸ್ಟ್ 10ರಂದು ನಡೆದ ಅಹಿತಕರ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದ್ದು, ಇದರಿಂದಾಗಿ ಇಡೀ ವ್ಯವಸ್ಥೆ ತಲೆತಗ್ಗಿಸುವಂತಾಗಿದೆ. ಯಾವ ರಾಜ್ಯಸಭೆ ದೇಶದ ಸಂವಿಧಾನ ವ್ಯವಸ್ಥೆಗೆ ಮಾದರಿಯಾಗಿರಬೇಕಾಗಿತ್ತೋ ಅದೇ ರಾಜ್ಯಸಭೆಯಲ್ಲಿ ನಡೆದಿರುವ ಗದ್ದಲ, ತಳ್ಳಾಟ, ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿರುವುದು ತುಂಬಾ ಖೇದಕರ ಪ್ರಸಂಗವಾಗಿದೆ ಎಂದು

ವಿಧಾನ ಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ದೇಗುಲದಲ್ಲಿ ನಡೆದಿರುವ ಇಂತಹ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ಇಂತಹ ದುರ್ವರ್ತನೆಗೆ ಕಾರಣರಾದವರ ಮೇಲೆ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಲೋಕಸಭೆ ಅಧ್ಯಕ್ಷರು ಹಾಗೂ ರಾಜ್ಯಸಭೆ ಸಭಾಪತಿಯವರಲ್ಲಿ ವಿನಂತಿಸುವ ಕುರಿತಂತೆ ವಿವರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು