4:26 PM Friday22 - October 2021
ಬ್ರೇಕಿಂಗ್ ನ್ಯೂಸ್
ಹಾಜಬ್ಬರಿಗೊಂದು ಸಲಾಂ: ಕಿತ್ತಳೆ ಬುಟ್ಟಿಯಿಂದ ಶಾಲೆ ಮೆಟ್ಟಲಿನವರೆಗೆ: ಹರೇಕಳದಿಂದ ದೆಹಲಿಗೆ ಅಕ್ಷರ ಸಂತನ ಯಾನ! ಕರುವನ್ನು ಠಾಣೆಯಲ್ಲಿ ಸಾಕಿ ಜನಮೆಚ್ಚುಗೆ ಪಡೆದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹೃದಯಾಘಾತಕ್ಕೆ ಬಲಿ ಪಂಚ ಭಾಷಾ ನಟಿ ಜೂಲಿ ಲಕ್ಷ್ಮೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ: ವಿಶೇಷ… ನಳಿನ್‌ ಹೇಳಿಕೆಗೆ ಕಾಂಗ್ರೆಸ್ ತೀವ್ರ ಪ್ರತಿಭಟನೆ: ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ; ಮಾಜಿ ಸಿಎಂ ಯಡಿಯೂರಪ್ಪ… ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನರ್ಮ್ ಬಸ್: ಸ್ವಾಮಿ, ಓಡಿಸುವುದಾದರೆ ಸರಿಯಾಗಿ ಓಡಿಸಿ,… ಮಣಿಪಾಲ ಶಿವಳ್ಳಿಯ ಯುವತಿ ನಾಪತ್ತೆ; ಮೊಬೈಲ್ ಸ್ವಿಚ್ ಆಫ್ ; ಪ್ರಕರಣ ದಾಖಲು Mangaluru | ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕ ಲಾಯರ್ ಕೆ.ಎಸ್.ಎನ್.ರಾಜೇಶ್ ಮೇಲೆ ಎಫ್ಐಆರ್… ಪಠ್ಯ ಕಡಿತ ಇಲ್ಲ, ಹಾಗಾದರೆ ಭಾನುವಾರ ಶಾಲೆಯ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್… ಹೊನ್ನಾವರ ಮಾಜಿ ಶಾಸಕ ಬಿಜೆಪಿಯ ಎಂ.ಪಿ.ಕರ್ಕಿ ನಿಧನ ನೈತಿಕ ಪೊಲೀಸ್ ಗಿರಿ ಸಮರ್ಥನೆ: ಮುಖ್ಯಮಂತ್ರಿಗೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್…

ಇತ್ತೀಚಿನ ಸುದ್ದಿ

ಕೋಲಾರ ಜಿಲ್ಲೆ: ಎಸ್ಸೆಸ್ಸೆಲ್ಸಿ ಸಾಧಕಿಯರಾದ ವರ್ಷಿಣಿ, ಪೂರ್ವಿ ಗೆ ರೋಟರಿ ಸೆಂಟ್ರಲ್ ಸನ್ಮಾನ

11/08/2021, 08:27

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಜಿಲ್ಲೆಯ ಎಸ್ಸೆಸ್ಸೆಲ್ಸಿ ಸಾಧಕಿಯರಾದ ಸಿ.ವರ್ಷಿಣಿ , ಕೆ. ಪೂರ್ವಿ ಹಾಗೂ ಫಲಿತಾಂಶದಲ್ಲಿನ ಕ್ರಾಂತಿಗೆ ಹಗಲಿರುಳು ಶ್ರಮಿಸಿದ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್ ಅವರನ್ನು ರೋಟರಿ ಸೆಂಟ್ರಲ್‌ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೋಲಾರ ರೋಟರಿ ಸೆಂಟಲ್ಸ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್ , ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊನೆ ಸ್ಥಾನಗಳಲ್ಲಿದ್ದ ಜಿಲ್ಲೆಯನ್ನು ಉನ್ನತ ಸ್ಥಾನ ಗಳಿಸುವಂತೆ ಕ್ರಿಯಾಯೋಜನೆ ರೂಪಿಸಿ ಶ್ರಮಿಸಿದ ನಾಗೇಂದ್ರ ಪ್ರಸಾದ್ ಅವರ ಪರಿಶ್ರಮ ಶ್ಲಾಘನೀಯ ಎಂದರು . 

೬೨೫ ಕ್ಕೆ ೬೨೫ ಅಂಕ ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ಮೊದಲಿಗರಾಗಿ ಜಿಲ್ಲೆಗೆ ಕೀರ್ತಿ ತಂದ ಈ ವಿದ್ಯಾರ್ಥಿನಿಯರು ರಾಜ್ಯದಲ್ಲೇ ಕೋಲಾರ ಜಿಲ್ಲೆಯನ್ನು ಗುರುತಿಸುವಂತೆ ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.

ಕೋಲಾರ ಜಿಲ್ಲೆ ಐಪಿಎಸ್, ಐಎಎಸ್ ಸಾಧನೆಗಿಂತಲೂ ಹೆಚ್ಚಿನದಾಗಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಇಲ್ಲಿ ಕೃಷಿ ತಜ್ಞರನ್ನು ಮೀರಿಸುವ ರೈತರಿದ್ದಾರೆ ಎಂದು ತಿಳಿಸಿದರು. 

ಈ ವಿದ್ಯಾರ್ಥಿನಿಯರ ಕಲಿಕೆಗೆ ಅಗತ್ಯವಾದಲ್ಲಿ ನೆರವು ಒದಗಿಸುವ ಭರವಸೆ ನೀಡಿದ ಅವರು , ರೋಟರಿ ಸಂಸ್ಥೆಯಿಂದ ಸನ್ಮಾನಿಸಿ ನನಪಿನ ಕಾಣಿಕೆ ಹಾಗೂ ನಗದು ಪುರಸ್ಕಾರ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್ , ೨೦೦೭ ರಲ್ಲಿ ನಾನು ಜಿಲ್ಲೆಗೆ ಬಂದೆ ನನ್ನ ಪ್ರಯತ್ನಕ್ಕೆ ಮಾಧ್ಯಮ ನೀಡಿದ ಸಹಕಾರ ಮರೆಯುವುದಿಲ್ಲ , ನನ್ನ ವರ್ಗಾವಣೆಯನ್ನು ತಡೆದು ಇಲ್ಲಿನ ಮಾಧ್ಯಮ ಸ್ನೇಹಿತರು ಜಿಲ್ಲೆ ಫಲಿತಾಂಶದಲ್ಲಿ ಸಾಧನೆ ವರಾಡಲು ನೆರವಾದರು ಎಂದರು.

ಮಕ್ಕಳಿಗೆ ಅನ್ಯಾಯವಾಗಬಾರದು ಎಂಬುದೇ ನನ್ನ ಧೈಯ , ಅದಕ್ಕಾಗಿಯೇ ಶಿಕ್ಷಕರಿಗೆ ತರಬೇತಿ , ಮಾದರಿ ಪ್ರಶ್ನೆಪತ್ರಿಕೆ , ಅಧ್ಯಾಯವಾರು ಪ್ರಶ್ನೆಪತ್ರಿಕೆ ತಯಾರು , ವರ್ಕ್ ಶೀಟ್ , ‘ ನನ್ನನ್ನೊಮ್ಮೆ ಗಮನಿಸು’ಪಶ್ನೆಕೋಠಿ ಇವೆಲ್ಲವನ್ನು ಸಿದ್ದಪಡಿಸಿ ಮಕ್ಕಳಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿದ್ದಾಗಿ ನುಡಿದರು .

ಜಿಲ್ಲಾ ಸೇವಾದಳ ಅಧ್ಯಕ್ಷ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್‌ , ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯನ್ನು ಕೊನೆ ಸ್ಥಾನದಿಂದ ಗುರುತಿಸಬೇಕಾದ ದುಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಜಿಲ್ಲೆಗೆ ಬಂದ ನಾಗೇಂದ್ರಪ್ರಸಾದ್ ನಿರಂತರ ಪರಿಶ್ರಮದ ಮೂಲಕ ಫಲಿತಾಂಶ ಹೆಚ್ಚಿಸಲು ಕೈಗೊಂಡ ಕ್ರಮಗಳಿಂದ ಇಂದು ಜಿಲ್ಲೆ ಫಲಿತಾಂಶದಲ್ಲಿ ಮೊದಲ ಆರೇಳು ಸ್ಥಾನಗಳೊಳಗೆ ಕಾಣಿಸಿಕೊಂಡಿದೆ ಎಂದರು.

ಈ ಬಾರಿ ಇಬ್ಬರು ವಿದ್ಯಾರ್ಥಿನಿಯರಾದ ವರ್ಷಿಣಿ , ಪೂರ್ವ ಸಾಧನೆ ಮಾಡುವ ಮೂಲಕ ಜಿಲ್ಲೆಯ ಗೌರವ ಹೆಚ್ಚಿಸಿದ್ದಾರೆ , ಈ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ರೋಟರಿ ಮತ್ತು ಸೇವಾದಳ ಮಾಡುತ್ತಿದ್ದು , ಈ ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸಿದರು .

ರೋಟರಿ ಮತ್ತು ಭಾರತ ಸೇವಾದಳ ಕಾರ್ಯದರ್ಶಿ ಎಸ್‌.ಸುಧಾಕರ್ ಮಾತನಾಡಿ , ಕೋವಿಡ್ ಸಂದರ್ಭದಲ್ಲೂ ಭಾರತದಲ್ಲೇ ಯಶಸ್ವಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ್ದು ನಮ್ಮ ಕರ್ನಾಟಕ ರಾಜ್ಯದ ಹೆಗ್ಗಳಿಕೆ ಎಂದ ಅವರು , ಪರೀಕ್ಷಾ ಸಂದರ್ಭದಲ್ಲಿ ಮಕ್ಕಳಿಗೆ ರಾಜ್ಯಾದ್ಯಂತ ರೋಟರಿಯಿಂದ ೧೪ ಲಕ್ಷ ಮಾಸ್ಕ್ ವಿತರಿಸಿದ್ದೇವೆ ಎಂದು ತಿಳಿಸಿ ಜಿಲ್ಲೆಯ ಸಾಧಕಿಯರಿಗೆ ರೋಟರಿಯಿಂದ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು .

ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿ ಸಿ.ವರ್ಷಿಣಿ , ಕಾಮಸಮುದ್ರ , ಸಮೀಪದ ಬೊಡಗುರ್ಕಿ ಗ್ರಾಮದವಳಾದ ನಾನು ಅಲ್ಲಿ ಆನ್ ಲೈನ್ ತರಗತಿಗೆ ಸಿಗ್ನಲ್ ಸಿಗದ ಕಾರಣ ಕೆಜಿಎಫ್‌ಗೆ ಬಂದೆ . ಶಾಲೆಯ ಶಿಕ್ಷಕರ ಸಹಕಾರ , ವಿದ್ಯಾಗಮ , ಚಂದನ ಟಿವಿ. ಸಂವೇದ ತರಗತಿಗಳ ಪ್ರಯೋಜನ , ನಾಗೇಂದ್ರಪ್ರಸಾದ್ ಅವರು ನೀಡಿದ ಮಾರ್ಗದರ್ಶನ , ತಂದೆತಾಯಿಯ ನೆರವು ನನ್ನೀ ಸಾಧನೆಗೆ ಕಾರಣ ಎಂದು ತಿಳಿಸಿದರು . ವಿದ್ಯಾರ್ಥಿನಿ ಕೆ. ಪೂರ್ವಿ ಮಾತನಾಡಿ , ಪರೀಕ್ಷಾ ವಿಧಾನ ಬದಲಾದಾಗ ಭಯವಾಯಿತು ಆದರೆ ಆನ್‌ಲೈನ್ ತರಗತಿ , ಚಂದನಾ ತರಗತಿ , ನಮ್ಮ ಶಿಕ್ಷಕರ ನೆರವಿನಿಂದ ಈ ಸಾಧನೆ ಸಾಧ್ಯವಾಯಿತು ಎಂದರು .ಈ ಸಂದರ್ಭದಲ್ಲಿ ರೋಟರಿ ನಿರ್ದೇಶಕ ಬಿಎಸನಲ್ ರಮೇಶ್‌ಬಾಬು , ನೌಕರರ ಸಂಘದ ಜಂಟಿ ಕಾರ್ಯದರ್ಶಿ ಶ್ರೀನಿವಾಸಲು , ಕೋಲಾರ ಕಿರಣ ಕನ್ನಡ ದಿನಪತ್ರಿಕೆ ಸಂಪಾದಕರು ಎಂ ಡಿ ಚಾಂದ್ ಪಾಷ , ಪೋಷಕರಾದ ಚಂದ್ರಶೇಖರ್ , ಶೋಭಾರಾಣಿ , ಕೃಷ್ಣಾರೆಡ್ಡಿ , ಬೈಯ್ಯಮ್ಮಗಂಗಾಧರ್‌ ಮತ್ತಿತರರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು