4:29 PM Friday22 - October 2021
ಬ್ರೇಕಿಂಗ್ ನ್ಯೂಸ್
ಹಾಜಬ್ಬರಿಗೊಂದು ಸಲಾಂ: ಕಿತ್ತಳೆ ಬುಟ್ಟಿಯಿಂದ ಶಾಲೆ ಮೆಟ್ಟಲಿನವರೆಗೆ: ಹರೇಕಳದಿಂದ ದೆಹಲಿಗೆ ಅಕ್ಷರ ಸಂತನ ಯಾನ! ಕರುವನ್ನು ಠಾಣೆಯಲ್ಲಿ ಸಾಕಿ ಜನಮೆಚ್ಚುಗೆ ಪಡೆದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹೃದಯಾಘಾತಕ್ಕೆ ಬಲಿ ಪಂಚ ಭಾಷಾ ನಟಿ ಜೂಲಿ ಲಕ್ಷ್ಮೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ: ವಿಶೇಷ… ನಳಿನ್‌ ಹೇಳಿಕೆಗೆ ಕಾಂಗ್ರೆಸ್ ತೀವ್ರ ಪ್ರತಿಭಟನೆ: ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ; ಮಾಜಿ ಸಿಎಂ ಯಡಿಯೂರಪ್ಪ… ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನರ್ಮ್ ಬಸ್: ಸ್ವಾಮಿ, ಓಡಿಸುವುದಾದರೆ ಸರಿಯಾಗಿ ಓಡಿಸಿ,… ಮಣಿಪಾಲ ಶಿವಳ್ಳಿಯ ಯುವತಿ ನಾಪತ್ತೆ; ಮೊಬೈಲ್ ಸ್ವಿಚ್ ಆಫ್ ; ಪ್ರಕರಣ ದಾಖಲು Mangaluru | ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕ ಲಾಯರ್ ಕೆ.ಎಸ್.ಎನ್.ರಾಜೇಶ್ ಮೇಲೆ ಎಫ್ಐಆರ್… ಪಠ್ಯ ಕಡಿತ ಇಲ್ಲ, ಹಾಗಾದರೆ ಭಾನುವಾರ ಶಾಲೆಯ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್… ಹೊನ್ನಾವರ ಮಾಜಿ ಶಾಸಕ ಬಿಜೆಪಿಯ ಎಂ.ಪಿ.ಕರ್ಕಿ ನಿಧನ ನೈತಿಕ ಪೊಲೀಸ್ ಗಿರಿ ಸಮರ್ಥನೆ: ಮುಖ್ಯಮಂತ್ರಿಗೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್…

ಇತ್ತೀಚಿನ ಸುದ್ದಿ

Traveling Story | ಗೇರ್‌ಲೆಸ್(ಸಾದಾ) ಸೈಕಲ್‌ನಲ್ಲಿ ಕೇರಳದಿಂದ ಕಾಶ್ಮೀರಕ್ಕೆ ಸೋಲೊ ಟ್ರಿಪ್ ಹೊರಟ 21ರ ಯುವಕ

09/08/2021, 15:52

ಅನುಷ್ ಪಂಡಿತ್, ಮಂಗಳೂರು
ಗಣೇಶ್ ಅದ್ಯಪಾಡಿ, ಮಂಗಳೂರು
info.reporterkarnata@gmail.com

ಟ್ರಾವೆಲಿಂಗ್ ಎನ್ನುವಂತಹದು ಹಲವರಿಗೆ ಕೆಲವರಿಗೆ ಕೆಲಸದ ಅನಿವಾರ್ಯವಾದರೆ ಇನ್ನೂ ಕೆಲವರಿಗೆ ಹುಚ್ಚು. ಅದರಲ್ಲೂ ಪ್ರವಾಸವನ್ನು ರೋಮಾಂಚನವಾಗಿಸಿಕೊಳ್ಳುವ ಮನಸ್ಸು ಹಲವರಿಗೆ. ಹೀಗೆ ರೋಮಾಂಚಕ ಪ್ರವಾಸದ ಅನುಭವವನ್ನು ಪಡೆದುಕೊಳ್ಳಬೇಕು ಎನ್ನುವ ಹಂಬಲದೊಂದಿಗೆ ಕೇರಳ ಮಣ ಪುರಂ‌ನ ಯುವಕ ಕಾಶ್ಮೀರಕ್ಕೆ ಹೊರಟಿದ್ದಾರೆ.

ಕೇರಳದಿಂದ ಕಾಶ್ಮೀರಕ್ಕೆ ಪ್ರವಾಸ ಹೊಸತೇನಲ್ಲ ಆದರೆ ಈ ತರುಣನ ಪ್ರವಾಸದ ವಿಧಾನವೇ ರೋಚಕವಾಗಿದೆ. ಸಾಮಾನ್ಯವಾಗಿ ಹೈ ಎಂಡ್ ಗೇರ್ ಸೈಕಲ್‌ಗಳಲ್ಲಿ ದೂರದೂರುಗಳಿಗೆ ಪ್ರವಾಸಕ್ಕೆ ಹೋಗುವುದು ಸಾಮಾನ್ಯ ಆದರೆ ಕೇರಳದ ಸಫಾನ್ ಎನ್ನುವ ಈ ಕ್ರೇಝಿಯೆಸ್ಟ್ ಯುವಕ ಹೊರಟ್ಟಿದ್ದು ಸಾಮಾನ್ಯ ಹೀರೊ ಸೈಕಲ್‌ನಲ್ಲಿ.

ಪ್ರವಾಸ ಎನ್ನುವುದು ಇವರಿಗೆ ಅತ್ಯಂತ ಪ್ರಿಯವಾದ ವಿಷಯ, ಇಲ್ಲಿಯವರೆಗೆ ಹಿಮಾಚಲ ಪ್ರದೇಶದ ಮನಾಲಿ ಸೇರಿದಂತೆ ಅನೇಕ ಕಡೆಗಳಿಗೆ ಭೇಟಿ ನೀಡಿದ್ದು, ಇದೇ ಮೊದಲ ಬಾರಿ ಸೈಕಲ್‌ನಲ್ಲಿ ಪ್ರವಾಸ ಹೊರಟಿದ್ದಾರೆ.

ಕೇರಳದಿಂದ ಏಳು ದಿನಗಳ ಹಿಂದೆ ಪ್ರಯಾಣ ಆರಂಭಿಸಿದ ಸಫಾನ್ ಇಂದು(ಆ.9) ಮಂಗಳೂರು ತಲುಪಿದ್ದಾರೆ. ಇವತ್ತು ಗೆಳೆಯನ ಮನೆಯಲ್ಲಿ ರೆಸ್ಟ್ ಮಾಡಿ ಮತ್ತೆ ಪಯಣ ಮುಂದುವರಿಸಲಿದ್ದಾರೆ. ಸುಮಾರು ಎರಡು ತಿಂಗಳ ಪ್ರವಾಸದ ಲೆಕ್ಕಾಚಾರ ಮಾಡಿಕೊಂಡಿರುವ ಇವರ ಸೈಕಲಿನಲ್ಲಿ ಮಲಗಲು ಚಾಪೆ, ಬ್ಯಾಗ್ ದಿನಬಳಕೆಗೆ ಬೇಕಾಗುವ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ.


ಕಾಲಲ್ಲಿ ಶೂ ಅಥವಾ ಬೇರೆ ಯಾವುದೇ ಅನಕೂಲಕರ ಚಪ್ಪಲಿ ಇರದೆ ಸಾಮಾನ್ಯ ಚಪ್ಪಲಿ ಧರಿಸಿಕೊಂಡು, ಮಳೆ ಹಾಗೂ ಬಿಸಿಲಿನ ಕಣ್ಕಟ್ಟಿನ ಜೊತೆಗೆ ತಿರುವು-ಮುರುವು ಹಾಗೂ ಏರಿಳಿತಗಳ ದಾರಿಯಲ್ಲಿ ಧರೆಯ ಸ್ವರ್ಗಕ್ಕೆ ದೇವರನಾಡಿನಿಂದ ಹೊರಟ ಯುವಕನ ಈ ಧೈರ್ಯವನ್ನು ಮೆಚ್ಚಲೆಬೇಕು.

 

ಡಿಪ್ಲೊಮಾ ಕಲಿಯುತ್ತಿರುವ ಸಫಾನ್‌ ಈಗಿನ ಖಾಲಿ ಸಮಯದಲ್ಲಿ ಟ್ರಾವೆಲಿಂಗ್ ಹೊರಟಿದ್ದಾರೆ. ಸೈಕಲ್‌ನಲ್ಲಿ ಕೇರಳ ಟು ಕಾಶ್ಮೀರ್ ಎಂದು ಸ್ಟಿಕರ್ ಅಂಟಿಸಿಕೊಂಡಿದ್ದು Al_Azhar ಎನ್ನುವ ತಮ್ಮ ಇನ್ಸ್ಟಾ ಐಡಿಯನ್ನು ಮೆನ್ಶನ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು