12:18 PM Monday5 - June 2023
ಬ್ರೇಕಿಂಗ್ ನ್ಯೂಸ್
ರೈಲು ದುರಂತ ಗಾಯಾಳುಗಳ ಪ್ರಧಾನಿ ಮೋದಿ ಭೇಟಿ: ಯೋಗಕ್ಷೇಮ ವಿಚಾರಣೆ; ಮಡಿದವರಿಗೆ 10… ಕಡಲನಗರಿ ಕುಡ್ಲದಲ್ಲಿ 2 ದಿನಗಳ ‘ಹಲಸಿನ ಹಬ್ಬ’; ಜಾಕ್ ಫ್ರುಟ್ ಐಸ್ ಕ್ರೀಂ,… ಫಲ್ಗುಣಿ ನದಿಗೆ ರುಚಿ ಗೋಲ್ಡ್ ತ್ಯಾಜ್ಯ ವಿಸರ್ಜಿಸುವ ಕೊಳವೆ ಪತ್ತೆ: ನಾಗರಿಕ ಹೋರಾಟ… ಒಡಿಸ್ಸಾ ರೈಲು ದುರಂತ: ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ 110 ಮಂದಿ… ಇವರೇ ಅದೃಷ್ಟವಂತ 110 ಮಂದಿ ಕನ್ನಡಿಗರು!: ಒಡಿಶಾದಲ್ಲಿ ಭೀಕರ ದುರಂತಕ್ಕೀಡಾದ ರೈಲಿನ ಪ್ರಯಾಣಿಕರು;… ಒಡಿಶಾ: ಭೀಕರ ರೈಲು ದುರಂತ; ಕರ್ನಾಟಕದ 110 ಮಂದಿ ಕನ್ನಡಿಗ ಪ್ರಯಾಣಿಕರು ಸೇಫ್ ಲೋಕಸಭೆ ಚುನಾವಣೆ: ನಳಿನ್, ಡಿವಿ, ಮಂಗಳಾ ಅಂಗಡಿ ಸಹಿತ 10ಕ್ಕೂ ಹೆಚ್ಚು ಸಂಸದರು… ಮಾಣಿ: ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆ ಕಚೇರಿ ಉದ್ಘಾಟನೆ; ವೆಲ್ ಕಮ್ ಡೇ… 5 ಲಕ್ಷ ರೂ. ವಂಚನೆ ಪ್ರಕರಣ: ಪೋಲಿಸ್ ಕಾನ್ ಸ್ಟೇಬಲ್ ಸಹಿತ 3… ಮುಡಾ ಉದ್ಯೋಗಿ ನೇಣಿಗೆ ಶರಣು: ಅನಾರೋಗ್ಯದಿಂದ ಬೇಸೆತ್ತು ಆತ್ಮಹತ್ಯೆ?

ಇತ್ತೀಚಿನ ಸುದ್ದಿ

Neeraj Chopra wins Gold Medal | 12ರ ವಯ್ಯಸ್ಸಲ್ಲಿ 90 ಕೆ.ಜಿ ತೂಗುತ್ತಿದ್ದ ಬಾಲಕ ಟೋಕಿಯೋದಲ್ಲಿಂದು ಚಿನ್ನ ಗೆದ್ದ

07/08/2021, 17:54

Reporterkarnataka.comಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಕನಸಿಗೆ 23ರ ಹುಡುಗ ನೀರಜ್ ಚೋಪ್ರಾ ಬಣ್ಣ ತುಂಬಿದ್ದಾರೆ.

ತನ್ಮ ಮೊದಲ ಒಲಿಂಪಿಕ್‌ನಲ್ಲಿಯೇ ಚಿನ್ನದ ಕದ ತಟ್ಟಿದ ಚಿಗುರು ಮೀಸೆಯ ಯುವಕ ನೀರಕ್ ಚೋಪ್ರಾ ಶನಿವಾರ ನಡೆದ ಪುರುಷರ ಜಾವೆಲಿನ್ ತ್ರೋ ಫೈನಲ್‌ನಲ್ಲಿ ಮೊದಲ ಎಸೆತದಿಂದಲೇ ಮುನ್ನಡೆ ಸಾಧಿಸಿದ ಅವರು ಕೊನೆಯವರೆಗೂ ಮುನ್ನಡೆ ಸಾಧಿಸಿ ಚಿನ್ನಕ್ಕೆ ಕೊರಳೊಡಿದ್ದಾರೆ.

ಹರಿಯಾಣಾದ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮದಲ್ಲಿ ಹುಟ್ಟಿದ ಎಂದೂ ಜಾವೆಲಿನ್ ಅನ್ನೂ ನೋಡಿರದ ಹುಡುಗ ಇಂದು ಈ ಮಟ್ಟಕ್ಕೆ ಬೆಳೆದದ್ದು ಒಂದು ಸಾಧನೆಯೇ ಸರಿ. ಈಗ ಹಲವಾರು ಭಾರತೀಯ ಯುವಕರು ಜಾವಲಿನ್ ಕಡೆಗೆ ಆಕರ್ಷಿತರಾಗಲು ನೀರಜ್ ಚೋಪ್ರಾ ಕಾರಣವಾಗುತ್ತಿದ್ದಾರೆ.

100 ವರ್ಷಗಳ ಬಳಿಕ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ ಭಾರತ ಪದಕದ ಕನಸು ನನಸಾಗಿದ್ದು, ಅರ್ಹತಾ ಸುತ್ತಿನಲ್ಲಿ ನೀರಜ್‌ 86.59 ಮೀ. ದೂರಕ್ಕೆ ಜಾವೆಲಿನ್‌ ಭರವಸೆ ಮೂಡಿಸಿದ್ದರು.

1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಾರ್ಮನ್‌ ಪ್ರಿಟ್‌ಚಾರ್ಡ್‌ 200 ಮೀ. ಓಟ ಹಾಗೂ 200 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿರುವುದು ಈ ವರೆಗಿನ ದಾಖಲೆಯಾಗಿತ್ತು.

ಹನ್ನರೆಡನೇ ವಯ್ಯಸ್ಸಲ್ಲಿ 90 ಕೆ.ಜಿ. ತೂಕ ಹೊಂದಿದ್ದ ಬಾಲಕ ತನ್ನ ಪರಿಶ್ರಮದಿಂದ ಈ ಸಾಧನೆಯ ಮೆಟ್ಟಿಲೇರಿದ್ದಾರೆ. ಸೇನೆಯಲ್ಲೂ ಅತಿ ಕಿರಿಯ ನಿಯೋಜಿತ ಅಧಿಕಾರಿ ಎನಿಸಿಕೊಂಡಿರುವ ಭಾರತದ ಹೊಸ ತಾರೆಯಾಗಿ ಮಿನುಗುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು