11:41 PM Tuesday26 - October 2021
ಬ್ರೇಕಿಂಗ್ ನ್ಯೂಸ್
ಶಿಕ್ಷಕರ ವರ್ಗಾವಣೆ:  ಅಕ್ಟೋಬರ್ 28ರಂದು ಕೌನ್ಸಿಲಿಂಗ್; ದಾಖಲೆಗಳೊಂದಿಗೆ ಹಾಜರಾಗಲು ಸೂಚನೆ ಕಾರ್ಕಳ ಪುರಸಭೆ ಮಾಸಿಕ ಸಭೆ: ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್… ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: 7 ದಿನ ಕಳೆದರೂ ಆರೋಪಿ ರಾಜೇಶ್ ಭಟ್… ಇಂದಿರಾ ಕ್ಯಾಂಟೀನ್ ನಲ್ಲಿ ಭೋಜನ ವೈಭವ: ಬಡವರ ತುತ್ತಿನ ರುಚಿ ಸವಿದ ಕಾರ್ಕಳ ಪುರಸಭೆ… ರಾಯಚೂರು: ಗಲ್ಲಿ ಗಲ್ಲಿಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾದ ಮಟ್ಕಾ ಸಾರಾಯಿ, ಇಸ್ಪೀಟ್ ದಂಧೆ;… ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ: 1ರಿಂದ 5ನೇ ತರಗತಿ ವರೆಗೆ ಕ್ಲಾಸ್ ಆರಂಭ; ಆನ್… ಹೀಗೂ ಉಂಟೇ?!: ಗಂಡನನ್ನೇ 5 ಲಕ್ಷಕ್ಕೆ ಮಾರಿದ ಪತ್ನಿ; ಹಣ ಸಂದಾಯದ ವೇಳೆ… ಮಂಗಳೂರು: ಓನೆಕ್ಸ್ ಪಬ್‌ ಮೇಲೆ ಸಿಸಿಬಿ ಪೊಲೀಸರ ದಾಳಿ; ಧ್ವನಿವರ್ಧಕ ವಶ ರಿಪೋರ್ಟರ್ ಕರ್ನಾಟಕ ವರದಿ ಫಲಶ್ರುತಿ: ಬೆಳಿಗ್ನೋರೂ ಶಾಲೆ ಪಕ್ಕದಲ್ಲಿ ಬ್ರಿಜ್ ಗೆ ಕೊನೆಗೂ… ಉಡುಪಿ ಜಿಲ್ಲಾದ್ಯಂತ ಭಾರಿ ಮಳೆ: ಅಜೆಕಾರಿನಲ್ಲಿ ಮನೆಗೆ ಸಿಡಿಲು ಬಡಿದು ಸುಟ್ಟು ಹೋದ…

ಇತ್ತೀಚಿನ ಸುದ್ದಿ

ಸಂಪುಟ ರಚನೆ ಬೆನ್ನಲ್ಲೇ ಅಸಮಾಧಾನ ಸ್ಫೋಟ: ಒಲೈಕಾರ್, ರಾಜು ಗೌಡ, ಹಾಲಾಡಿ ಬೆಂಬಲಿಗರಿಂದ ಪ್ರತಿಭಟನೆ; ರಸ್ತೆಯಲ್ಲಿ ಹೊರಳಾಡಿದ ಕಾರ್ಯಕರ್ತರು !!

04/08/2021, 16:29

ಬೆಂಗಳೂರು(reporterkarnataka.com): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಚೊಚ್ಚಲ ಸಂಪುಟದ ಸಚಿವರುಗಳು ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇತ್ತ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. 

ಶಾಸಕರಾದ ರಾಜು ಗೌಡ, ನೆಹರೂ ಒಲೈಕಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಂತಾದವರ  

ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಕೆಲವು ಕಡೆ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಹೊರಳಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿಯ ಸಿದ್ದಪ್ಪ ವೃತ್ತ ಬಳಿ ಒಲೈಕಾರ್ ಬೆಂಬಲಿಗರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೆಲವು ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ಹೊರಳಾಡಿದರು. ಈ ಸಂದರ್ಭದಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಸುರಪುರ ಶಾಸಕ ರಾಜು ಗೌಡ ಅವರ ಬೆಂಬಲಿಗರು ಬೆಂಗಳೂರಿನ ಗಾಂಧಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ರಾಜು ಗೌಡ ಸಚಿವರಾಗುತ್ತಾರೆಂದು ಅವರ ಬೆಂಬಲಿಗರು ಬೆಂಗಳೂರಿಗೆ ಆಗಮಿಸಿದ್ದರು. ಸಚಿವರ ಪಟ್ಟಿ ಹೊರಬೀಳುತ್ತಿದ್ದಂತೆ ತಮ್ಮ ನಾಯಕನಿಗೆ ಸ್ಥಾನ ಸಿಗಲಿಲ್ಲ ಎಂಬ ಆಕ್ರೋಶದಿಂದ ಪ್ರತಿಭಟನೆ ನಡೆಸಿದರು. ಕಾರ್ಯಕರ್ತರು ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬೆಂಬಲಿಗರು ಕೂಡ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ತನ್ನ ಹೆಸರು ಸಚಿವರ ಪಟ್ಟಿಯಲ್ಲಿರುವುದನ್ನು ಖಾತ್ರಿಪಡಿಸುತ್ತಿದ್ದಂತೆ ಕುಟುಂಬ ಸಮೇತರಾಗಿ ಬೆಂಗಳೂರಿನ ಕುಮಾರ ಪಾರ್ಕ್ ಬಳಿ ಇರುವ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈಶ್ವರಪ್ಪ ಅವರ ಜತೆ ಪತ್ನಿ ಜಯಲಕ್ಷ್ಮೀ, ಪುತ್ರ ಕಾಂತೇಶ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು