2:24 AM Sunday3 - July 2022
ಬ್ರೇಕಿಂಗ್ ನ್ಯೂಸ್
ಸುಂಕ ಕಡಿತ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟು ಇಳಿಕೆಯಾಗಿದೆ? ಇಲ್ಲಿದೆ… ಗಡಿ ಗ್ರಾಮಗಳಲ್ಲಿ ನಿದ್ದೆ ಬಾರದ ರಾತ್ರಿಗಳು!!: ಭೂಕಂಪನ, ಭೂಕುಸಿತ, ವರ್ಷಧಾರೆಗೆ ತತ್ತರಿಸಿದ ಕೊಡಗು ಬೈಕ್ ಕಳ್ಳತನ ಮಾಡುತ್ತಿದ್ದ ಯುವ ಗ್ಯಾಂಗ್ ಪೊಲೀಸ್ ಬಲೆಗೆ: ಅಥಣಿ ಪೊಲೀಸರ ಯಶಸ್ವಿ… ಬೆಂಗಳೂರು ಸಹಿತ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ‘ಅಗ್ನಿವೀರ’ ಅವಕಾಶ: ಆ.10ರಿಂದ ಹಾಸನದಲ್ಲಿ ಭೂ ಸೇನಾ Rally ಮತ್ತೆ ಮತ್ತೆ ಭೂಕಂಪನ: ನಡುಗಿದ ಕಲ್ಲುಗುಂಡಿ, ಸಂಪಾಜೆ; ಭಯಬೇಡ, ಪಶ್ಚಾತ್ ಕಂಪನ ಅಷ್ಟೇ  ಕೊಡಗಿನಲ್ಲಿ ಪ್ರವಾಹದ ಭೀತಿ: ಜಲಾನಯನ ಪ್ರದೇಶದ ನಿವಾಸಿಗಳಿಗೆ ಮುನ್ನೆಚ್ಚರಿಕೆ ಸೂಚನೆ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ನೂಪುರ್ ಶರ್ಮ  ಹೇಳಿಕೆ ಕಾರಣ, ಕ್ಷಮೆಯಾಚಿಸಲಿ: ಸುಪ್ರೀಂ ಕೋರ್ಟ್ ಕನ್ನಯ್ಯ ಲಾಲ್ ಸಾವಿಗೆ ರಾಜಸ್ಥಾನ ಸರಕಾರವೇ ನೇರ ಹೊಣೆ, ಆರೋಪಿಗಳ ಗಲ್ಲಿಗೇರಿಸಿ: ಶಾಸಕ… ಮೂಡಿಗೆರೆ: ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಸ್ವಯಂ ಪ್ರೇರಿತ ಬಂದ್, ವಾರದ ಸಂತೆ… ಅಪಾಯವನ್ನು ಲೆಕ್ಕಿಸದೇ ಟ್ರಾಕ್ಟರ್ ಹಗ್ಗ ಜಗ್ಗಾಟ ಆಟ ಆಯೋಜನೆ: ಜಿಲ್ಲಾಡಳಿತ, ಪೊಲೀಸ್ ಇಲಾಖೆ…

ಇತ್ತೀಚಿನ ಸುದ್ದಿ

ನಡುಗಡ್ಡೆ ಸಂತಸ್ತರಿಗೆ ಶಾಶ್ವತ ಪರಿಹಾರ ಆಗ್ರಹಿಸಿ  ಕೆಡಿಪಿ ಸಭೆಗೆ ಮುತ್ತಿಗೆ: ಅಧಿಕಾರಿಗಳ ನಿಯೋಗ ಜತೆ ಶಾಸಕ ಡಿ.ಎಸ್. ಸ್ಥಳಕ್ಕೆ ಭೇಟಿ !

02/08/2021, 09:13

ವರದಿ: ಅಮರೇಶ್ ಲಿಂಗಸುಗೂರು ರಾಯಚೂರು

info.reporterkarnataka@gmail.com

ಪ್ರತಿ ವರ್ಷ ಮಳೆಗಾಲದಲ್ಲಿ ಕೃಷ್ಣಾ ನದಿ ನಡುಗಡ್ಡೆಗಳ ನಿವಾಸಿಗಳ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ 20 ವರ್ಷಗಳಿಂದ ಜಿಲ್ಲಾ ಹಾಗೂ ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತಾಪಂ ಸಭಾಂಗಣದಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಅಧ್ಯಕ್ಷ ತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ಮುತ್ತಿಗೆ ಹಾಕಲಾಯಿತು.

ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ಸಮಸ್ಯೆ ನನೆಗುದಿಗೆ ಬಿದ್ದಿದೆ. ಸರ್ವೆ 19ರಲ್ಲಿ 11 ಕುಟಂಬಗಳಿಗೆ ನಿವೇಶನಗಳ ಹಕ್ಕುಪತ್ರ ನೀಡಲಾಗಿದೆ. ಆದರೆ ಅಲ್ಲಿ ಹಳ್ಳದ ಬಸಿ ನೀರು ಬರುತ್ತಿದ್ದರಿಂದ ವಾಸ ಮಾಡಲು ಯೋಗ್ಯವಲ್ಲದ ಕಾರಣ ಯಳಗುಂದಿ ಗ್ರಾಮದ ಸರ್ಕಾರಿ ಭೂಮಿಯಲ್ಲಿ ನಿವೇಶನಗಳನ್ನು ಒದಗಿಸಬೇಕು. ಈ ಪೈಕಿ ನಡುಗಡ್ಡೆಯಲ್ಲಿ ವಾಸವಿರದ ಮೂರು ನಾಯಕ ಸಮುದಾಯದ ಕುಟಂಬಗಳಿಗೆ ನಿವೇಶನ ಹಕ್ಕುಪತ್ರ ನೀಡುವ ಮೂಲಕ ತಹಶೀಲ್ದಾರರ ಸ್ವಜಾತಿ ಪ್ರೇಮ ಮೆರೆದಿದ್ದಾರೆ. ಇದಲ್ಲದೆ ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೆಲೆಗುದಿಗೆ ಬಿದ್ದಿದೆ. ಇದರಲ್ಲಿ ಇಲ್ಲಿನ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ,ಸಹಾಯಕ ಆಯುಕ್ತರು, ತಹಶೀಲ್ದಾರ ಇಚ್ಚಾಶಕ್ತಿ ಇಲ್ಲದಿರುವುದೇ ಇದಕ್ಕೆ ಮೂಲಕಾರಣ ವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತ್ರೈಮಾಸಿಕ ಕೆಡಿಪಿ ಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಮನವಿ  ಸಲ್ಲಿಸಿದ್ದರು. ಇದನ್ನರಿತು ಎಚ್ಚೆತ್ತುಕೊಂಡ ಶಾಸಕರು ಅಧಿಕಾರಿಗಳ ನಿಯೋಗ ಸಂತ್ರಸ್ತರ ಶಾಶ್ವತ ಪರಿಹಾರಕ್ಕಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಧಿಕಾರಿಗಳು ಸಂತ್ರಸ್ತರಿಗೆ ನೀಡಬೇಕಾದ ಸರ್ಕಾರದ ಸೌಲಭ್ಯಗಳನ್ನು ನೀಡಲು ಮೀನಮೇಷ ಮಾಡುತ್ತಿರುವುದನ್ನು ಕಂಡ ಹನುಮಂತಪ್ಪ ವೆಂಕಟಾಪುರ ಹೋರಾಟಗಾರರು ತಾಲೂಕ ದಂಡಾಧಿಕಾರಿ ಜತೆ  ಮಾತಿನ ಚಕಮಕಿ ನಡೆಯಿತು.  ಆಗ ಸ್ಥಳದಲ್ಲಿದ್ದ ಶಾಸಕರು ಹಾಗೂ ಸಹಾಯಕ ಆಯುಕ್ತರು ಸಂಘಟಕರಿಗೆ ಸಮಜಾಯಿಸಿ ಅಧಿಕಾರಿಗಳಿಗೆ ಕೂಡಲೇ ದಾಖಲೆಗಳನ್ನು ಸಿದ್ಧಪಡಿಸಿ ಸಂತ್ರಸ್ತರಿಗೆ ಶಾಶ್ವತ ಪರಿಹಾರವನ್ನು ನೀಡಬೇಕೆಂದು ತಾಲೂಕ ದಂಡಾಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಹನುಮಂತಪ್ಪ ವೆಂಕಟಾಪುರ್(ಜಿಲ್ಲಾ ಸಂಘಟನಾ ಸಂಚಾಲಕರು), ಮಹಾದೇವಪ್ಪ ಪರಂಪರ (ತಾಲೂಕ ಸಂಚಾಲಕರು), ಹಾಜಪ್ಪ ಕರಡಕಲ್, ಶರಣಪ್ಪ ಕಟ್ಟಿಮನಿ, ಬಸವರಾಜ್ ಬಂಕದ ಮನೆ, ಲಕ್ಕಪ್ಪ ನಾಗರಾಳ, ಹಾಗೂ ಸಂಘಟನೆ ಸದಸ್ಯರು, ನೆರೆ ಸಂತ್ರಸ್ತ ಫಲಾನುಭವಿಗಳು ಇನ್ನಿತರ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು