1:25 PM Monday5 - June 2023
ಬ್ರೇಕಿಂಗ್ ನ್ಯೂಸ್
ರೈಲು ದುರಂತ ಗಾಯಾಳುಗಳ ಪ್ರಧಾನಿ ಮೋದಿ ಭೇಟಿ: ಯೋಗಕ್ಷೇಮ ವಿಚಾರಣೆ; ಮಡಿದವರಿಗೆ 10… ಕಡಲನಗರಿ ಕುಡ್ಲದಲ್ಲಿ 2 ದಿನಗಳ ‘ಹಲಸಿನ ಹಬ್ಬ’; ಜಾಕ್ ಫ್ರುಟ್ ಐಸ್ ಕ್ರೀಂ,… ಫಲ್ಗುಣಿ ನದಿಗೆ ರುಚಿ ಗೋಲ್ಡ್ ತ್ಯಾಜ್ಯ ವಿಸರ್ಜಿಸುವ ಕೊಳವೆ ಪತ್ತೆ: ನಾಗರಿಕ ಹೋರಾಟ… ಒಡಿಸ್ಸಾ ರೈಲು ದುರಂತ: ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ 110 ಮಂದಿ… ಇವರೇ ಅದೃಷ್ಟವಂತ 110 ಮಂದಿ ಕನ್ನಡಿಗರು!: ಒಡಿಶಾದಲ್ಲಿ ಭೀಕರ ದುರಂತಕ್ಕೀಡಾದ ರೈಲಿನ ಪ್ರಯಾಣಿಕರು;… ಒಡಿಶಾ: ಭೀಕರ ರೈಲು ದುರಂತ; ಕರ್ನಾಟಕದ 110 ಮಂದಿ ಕನ್ನಡಿಗ ಪ್ರಯಾಣಿಕರು ಸೇಫ್ ಲೋಕಸಭೆ ಚುನಾವಣೆ: ನಳಿನ್, ಡಿವಿ, ಮಂಗಳಾ ಅಂಗಡಿ ಸಹಿತ 10ಕ್ಕೂ ಹೆಚ್ಚು ಸಂಸದರು… ಮಾಣಿ: ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆ ಕಚೇರಿ ಉದ್ಘಾಟನೆ; ವೆಲ್ ಕಮ್ ಡೇ… 5 ಲಕ್ಷ ರೂ. ವಂಚನೆ ಪ್ರಕರಣ: ಪೋಲಿಸ್ ಕಾನ್ ಸ್ಟೇಬಲ್ ಸಹಿತ 3… ಮುಡಾ ಉದ್ಯೋಗಿ ನೇಣಿಗೆ ಶರಣು: ಅನಾರೋಗ್ಯದಿಂದ ಬೇಸೆತ್ತು ಆತ್ಮಹತ್ಯೆ?

ಇತ್ತೀಚಿನ ಸುದ್ದಿ

ವಿದಾಯ ಭಾಷಣದಲ್ಲಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರರ ನೆನಪಿಸಿಕೊಂಡ ಯಡಿಯೂರಪ್ಪ !

26/07/2021, 17:51

ಬೆಂಗಳೂರು(reporterkarnataka news):

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ತನ್ನ ವಿದಾಯ ಭಾಷಣದಲ್ಲಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರನ್ನು ನೆನೆಸಿಕೊಂಡರು.

1985ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಇಡೀ ರಾಜ್ಯದಿಂದ ಕೇವಲ ಇಬ್ಬರು ಶಾಸಕರು ಆಯ್ಕೆಗೊಂಡಿದ್ದರು. ಶಿವಮೊಗ್ಗದ ಶಿಕಾರಿಪುರದಿಂದ ಬಿ.ಎಸ್. ಯಡಿಯೂರಪ್ಪ ಅವರು ಪುನರಾಯ್ಕೆಗೊಂಡಿದ್ದರೆ, ದಕ್ಷಿಣ ಕನ್ನಡದ ಬೆಳ್ತಂಗಡಿಯಿಂದ ವಸಂತ ಬಂಗೇರ ಮರು ಆಯ್ಕೆಗೊಂಡಿದ್ದರು. ಬಿಜೆಪಿಯಿಂದ ಇಡೀ ರಾಜ್ಯದಿಂದ ಇಬ್ಬರು ಶಾಸಕರು ಆಯ್ಕೆಗೊಂಡಿದ್ದನ್ನು ಯಡಿಯೂರಪ್ಪ ಅವರು ತನ್ನ ಪದತ್ಯಾಗದ ಮುನ್ನ ಮಾಡಿದ ವಿದಾಯ ಭಾಷಣದಲ್ಲಿ ನೆನಪಿಸಿಕೊಂಡರು. 

ವಿದಾಯ ಭಾಷಣದಲ್ಲಿ ತನ್ನ ಹೆಸರು ಪ್ರಸ್ತಾಪ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ವಸಂತ ಬಂಗೇರ ಅವರು, ಯಡಿಯೂರಪ್ಪ ಓರ್ವ ಹೋರಾಟಗಾರ. ಹುಟ್ಟು ಹೋರಾಟಗಾರ. ಬಿಜೆಪಿಯಿಂದ ನಾವಿಬ್ಬರೇ ಶಾಸಕರಿದ್ದೆವು. ಸದನದೊಳಗೂ ಅವರು ಹೋರಾಟ ನಡೆಸುತ್ತಿದ್ದರು. ಸದನದ ಬಾವಿಗೆ ಇಳಿದು ನಾವು ಪ್ರತಿಭಟನೆ ನಡೆಸುತ್ತಿದ್ದೆವು ಎಂದರು.
Big Breaking | ಯಡಿಯೂರಪ್ಪ ರಾಜೀನಾಮೆ ಘೋಷಣೆ; ಸಾಧನಾ ಸಮಾವೇಶದಲ್ಲಿ ಭಾವುಕರಾದ ಬಿಎಸ್‌ವೈ
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ನಾನು ಅವರನ್ನು ಭೇಟಿಯಾದದ್ದು ಬಹಳ ಕಡಿಮೆ. ನಮ್ಮೂರಿನ ದೇವಾಲಯಕ್ಕೆ ಅನುದಾನ ಕೇಳಲು ಶಾಸಕ ಹರೀಶ್ ಪೂಂಜ ಅವರ ಜತೆ ಒಂದು ಬಾರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ. 50 ಲಕ್ಷ ಅನುದಾನ ಮಂಜೂರು ಮಾಡಿದ್ದರು ಎಂದು ಬಂಗೇರ ನೆನಪಿಸಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು