2:51 PM Friday17 - September 2021
ಬ್ರೇಕಿಂಗ್ ನ್ಯೂಸ್
ವಿಶ್ವದ ಅಗ್ರ ಶ್ರೇಣಿಯ ಆಪಲ್ ‘ಐಫೋನ್ 13’ ಸರಣಿ ಬಿಡುಗಡೆ !; ಹಾಗಾದರೆ… ರಾಜ್ಯದ 372 ತಾಲೂಕುಗಳಲ್ಲಿ ಸ್ಮಶಾನವೇ ಇಲ್ಲ: ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು?… ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಬಿಗ್ ಶಾಕ್: ಹಾಗಾದರೆ ಸರಕಾರ ಹೊರಡಿಸಿದ ಹೊಸ… ದೇಗುಲ ಧ್ವಂಸ; ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಮಾಜಿ ಸಚಿವ ಯು.ಟಿ.ಖಾದರ್… ಬಾಲಿವುಡ್ ನಟ, ದಾನಿ ಸೋನು ಸೂದ್‌ಗೆ ಸೇರಿದ 6 ಸ್ಥಳಗಳಿಗೆ ಐಟಿ ದಾಳಿ:… ದಾವೂದ್ ಗ್ಯಾಂಗ್ ನಿಂದ ಹಲವು ನಗರಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು: 6 ಮಂದಿ… ಇನ್ನು ಕೇವಲ 24 ತಾಸಿನಲ್ಲಿ ಭೂ ಪರಿವರ್ತನೆ: ಕಂದಾಯ ಸಚಿವ ಆರ್. ಅಶೋಕ್… ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕೇಂದ್ರಗಳ ಪಟ್ಟಿ ಸಿದ್ಧ: ತೆರವು ಲಿಸ್ಟ್… ಮಾಜಿ ಸಚಿವ ಆಸ್ಕರ್ ಪಾರ್ಥಿವ ಶರೀರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುಷ್ಪನಮನ:… ಸಿನಿಮಾ ಸಂಭಾಷಣೆಕಾರ ಗುರು ಕಶ್ಯಪ್ ವಿಧಿವಶ: ಹೃದಯಾಘಾತದಿಂದ ಸಾವು

ಇತ್ತೀಚಿನ ಸುದ್ದಿ

ನಡುಗಡ್ಡೆಯಲ್ಲಿ ಪರದಾಡುತ್ತಿರುವ ಬಡ ಕುಟುಂಬಗಳು: ತಿರುಗಿ ನೋಡದ ಜನಪ್ರತಿನಿಧಿಗಳು, ಅಧಿಕಾರಿಗಳು!!

26/07/2021, 09:07

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಲಿಂಗಸಗೂರು ತಾಲೂಕಿನ ಶೀಲಹಳ್ಳಿ ದೊಡ್ಡಿಯ ಜನರು ಸಂಕಷ್ಟ ಎದುರಿಸುವಂತಾಗಿದೆ.ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ತಾಲೂಕು ಹಾಗೂ ಜಿಲ್ಲಾಡಳಿತ ವಿಫಲವಾಗಿದೆ.

ರಕ್ಷಣೆ ತಂಡ ಜತೆ ತಾಲೂಕು ಆಡಳಿತ ಆಗಮಿಸಿದಾಗ ಗ್ರಾಮಸ್ಥರು ಹಿಗ್ಗಾಮುಗ್ಗಾ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿ ವರ್ಷ ಮಳೆ ಬರುವಾಗ ಇವರು ಸಂಕಷ್ಟ ಎದುರಿಸುತ್ತಾರೆ.

ನೆರೆ ಸಂತ್ರಸ್ತರಿಗೆ ಪರಿಹಾರವೇ ಇಷ್ಟರವರೆಗೆ ದೊರಕಿಲ್ಲ.ಬರೀ ಆಶ್ವಾಸನೆ ನೀಡುತ್ತಾ ಜನಪ್ರತಿನಿಧಿಗಳು ಮತ್ತು ಅಧಿಕಾರಿ ಬಂದಿದ್ದಾರೆ. 

ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ಅಧಿಕಾರಿ ಸ್ಥಳಕ್ಕಾಗಮಿಸುತ್ತಾರೆ. ತಹಶೀಲ್ದಾರ್ ಚಾಮರಾಜ ಪಾಟೀಲ್ ಬೇಜವಾಬ್ದಾರಿ ಕೆಲಸ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಾರೆ.


ನಡುಗಡ್ಡೆ ನಿರಾಶ್ರಿತರಿಗೆ 25000 ಅನುದಾನ ನೀಡುವುದಾಗಿ ಭರವಸೆ ನೀಡಿದರು. ಸಹಾಯಕ ಆಯುಕ್ತರು ಸೇರಿದಂತೆ ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಮಳೆಗಾಲದಲ್ಲಿ ಗರ್ಭಿಣಿಯರಿಗೆ, ವೃದ್ಧರಿಗೆ ಬಹಳ ತೊಂದರೆಯಾಗುತ್ತಿದೆ. ಹಳ್ಳ ನೀರು ಖಾಲಿಯಾಗುವವರೆಗೂ ಕಾಯುವ ಪರಿಸ್ಥಿತಿ ಇಲ್ಲಿ ಕುಟುಂಬಗಳಿಗೆ ಎದುರಾಗಿದೆ. ಸುಮಾರು ಬಡ ಕುಟುಂಬಗಳು ಈ ದೊಡ್ಡಿಯಲ್ಲಿ ವಾಸವಾಗಿದೆ. ಮಳೆ ಬಂದರೆ ಇವರ ಕಥೆ ಮುಗಿಯಿತು.

ಆ ಕಡೆಯಿಂದ ಈ ಕಡೆಗೆ ಬರುವ ಮಾತೇ ಇಲ್ಲ . ಮಕ್ಕಳು ಶಾಲೆಗೆ ಹೋಗೋದೇ ಇಲ್ಲ. ರಸ್ತೆ ಕಡಿತಗೊಳ್ಳುತ್ತದೆ. ಶಾಸಕರು ಮಾತ್ರ ಮೌನಕ್ಕೆ ಶರಣಾಗುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು