11:10 PM Thursday27 - January 2022
ಬ್ರೇಕಿಂಗ್ ನ್ಯೂಸ್
ಶಾಲಾ ಸಮವಸ್ತ್ರ ಕಡ್ಡಾಯ, ಯಾವುದೇ ವಿನಾಯಿತಿ ಇಲ್ಲ: ಶಿಕ್ಷಣ ಸಚಿವ ಬಿ. ಸಿ.… ವಾರದಲ್ಲಿ 5 ದಿನ ಕೆಲಸ: ರಾಜ್ಯ ಸರಕಾರದಿಂದ ಆದೇಶ ವಾಪಸ್; ವಾರಂತ್ಯದಲ್ಲಿ ಎಲ್ಲ… ಡಾ. ಅಂಬೇಡ್ಕರ್‌ಗೆ ಅವಮಾನ: ಸೇವೆಯಿಂದ ವಜಾ ಮಾಡಲು ದಲಿತ ಸಂಘಟನೆಗಳ ಮಹಾ  ಒಕ್ಕೂಟ ಒತ್ತಾಯ ಹಾಡು ನಿಲ್ಲಿಸಿದ ಪ್ರಸಿದ್ಧ ಸಂಗೀತ ಕಲಾವಿದೆ, ಆರ್ಯಭಟ ಪ್ರಶಸ್ತಿ ವಿಜೇತೆ ಶೀಲಾ ದಿವಾಕರ್  ಗಣರಾಜ್ಯೋತ್ಸವ ಪರೇಡ್‌ ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ನಿರಾಕರಣೆ: ಮಂಗಳೂರಿನಲ್ಲಿ ಸ್ವಾಭಿಮಾನ ನಡಿಗೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗರಿಗೆದರಿದ ಗಣರಾಜ್ಯೋತ್ಸವ: ರಾಜ್ಯಪಾಲರಿಂದ ಧ್ವಜಾರೋಹಣ ಆಡಳಿತದಲ್ಲಿ ಮೇಜರ್ ಸರ್ಜರಿ: ರಾಜ್ಯದ 19 ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ ಗಣರಾಜ್ಯೋತ್ಸವ ಪಥ ಸಂಚಲನ: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ 6 ಮಂದಿ… ಏಪ್ರಿಲ್ 27ರಂದು ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಎತ್ತಿನಹೊಳೆ ಯೋಜನೆ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಿಎಂ ತಾಕೀತು

ಇತ್ತೀಚಿನ ಸುದ್ದಿ

ಮೊಟ್ಟೆಯಲ್ಲಿ ಕಮಿಷನ್ :  ಅಥಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಭಾರಿ ಪ್ರತಿಭಟನೆ

26/07/2021, 14:10

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಜನ ಪ್ರವಾಹ ಸಂಕಷ್ಟದಲ್ಲಿ ತತ್ತರಿಸಿ ಸಾವು ನೋವಿನ ನಡುವೆ ಇದ್ದರೆ ಬಿಜೆಪಿಯವರು ಅಪೌಷ್ಟಿಕ ಮಕ್ಕಳ ಹಾಗೂ ಗರ್ಭಿಣಿ ಹೆಣ್ಣು ಮಕ್ಕಳಿಗೆ ವಿತರಿಸ ಬೇಕಾದ ಆಹಾರಧಾನ್ಯ ಹಾಗೂ ಮೊಟ್ಟೆ ವಿತರಣೆಯಲ್ಲಿಯೂ ಕೂಡ ಹಣ ತಿನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಪಾದಿಸಿದರು.


ಅವರು ಸೋಮವಾರ ಅಥಣಿ ಮಿನಿ ವಿಧಾನಸೌಧ ಅಥಣಿ ಆವರಣದಲ್ಲಿ ಅಥಣಿ ಹಾಗೂ ತೆಲಸಂಗ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡಲು ಗುತ್ತಿಗೆದಾರರಿಂದ ಪ್ರತಿ ತಿಂಗಳು ಒಂದು ಕೋಟಿ ರೂಪಾಯಿ ಕಮಿಷನ್ ಗೆ ಬೇಡಿಕೆಯಿಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ  ಶಶಿಕಲಾ ಜೊಲ್ಲೆಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಹಸಿಲ್ದಾರ್
ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಈ ಹಿಂದೆ ಪ್ರವಾಹ ಬಂದಾಗ ಮುಂಬೈಯಲ್ಲಿದ್ದ ಬಿಜೆಪಿ ಜನಪ್ರತಿನಿಧಿಗಳು ಈಗ ಮುಖ್ಯಮಂತ್ರಿ ಬದಲಾವಣೆ ವಿಷಯ ಹಿಡಿದು ರಾಜಕಾರಣ ಮಾಡ್ತಿದ್ದಾರೆ ಹೊರತು ಪ್ರವಾಹ ಪೀಡಿತ ಜನರತ್ತ ನೋಡ್ತಿಲ್ಲ. ಸಾಮಾನ್ಯ ಜನ ಅಷ್ಟೆ ಅಲ್ಲ ಬಿಜೆಪಿಯವರೆ ಭ್ರಷ್ಟ ಪಕ್ಷ ಎಂದು ಹೇಳ್ತಿದ್ದಾರೆ, ಬಡವರ ಹೊಟ್ಟೆಗೆ ಮತ್ತು ಮಕ್ಕಳಿಗೆ ಕೊಡಬೇಕಾದ ಆಹಾರಧಾನ್ಯದಲ್ಲಿ ಕನ್ನ ಹಾಕುವುದು ನಿಮಗೆ ನಾಚುಕೆ ಯಾಗುವುದಿಲ್ಲವೆ ಎಂದು ಶಶಿಕಲಾ ಜೊಲ್ಲೆ ಅವರನ್ನು ಉದ್ದೇಶಿಸಿ ಹೇಳಿದರು.

ಅಥಣಿ ಭಾಗ ಸುಮಾರು 22 ಹಳ್ಳಿಗಳು ಪ್ರವಾಹದಿಂದ ಬಾಧಿತವಾಗಿವೆ ಇದನ್ನು ಕೇಳದ ಸರಕಾರ ತಮ್ಮ ಹಗರಣದಲ್ಲಿ ತೊಡಗಿವೆ ಎಂದು ನುಡಿದರು.

ನಂತರ ಮಾತನಾಡಿದ ತೆಲಸಂಗ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಇಡೀ ದೇಶದಲ್ಲಿ ಅತೀ ಭ್ರಷ್ಟ ಸರಕಾರ ಎಂದರೆ ಅದು ಬಿಜೆಪಿ ಪಕ್ಷ, ಅಪೌಷ್ಠಿಕ ಮಕ್ಕಳು ತಿನ್ನುವಂತಹ ಆಹಾರ ಧಾನದಲ್ಲಿಯೂ ಭ್ರಷ್ಟಾಚಾರ ಮಾಡಿ ಮೊಟ್ಟೆ ಕಮೀಷನ್ ಪಡೆಯುತ್ತಿರುವುದು ತೀರಾ ನಾಚಿಗೇಡಿತನ. ಇಂತಹ ಸಚಿವರನ್ನೂ ಯಡಿಯೂರಪ್ಪನವರು ಕೂಡಲೇ ವಜಾ ಗೊಳಿಸಿಬೇಕು ಎಂದು ಆಗ್ರಹಿಸಿದರು.

ನಂತರ ಅಥಣಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.


ಈ ವೇಳೆ ಎಸ್ ಕೆ ಬುಟಾಳಿ, ಬಸವರಾಜ ಬುಟಾಳಿ, ರಾವಸಾಬ ಐಹೊಳೆ, ಅನೀಲ ಸುಣಧೋಳಿ, ಸುನೀಲ ಸಂಕ,  ಶಿವಾನಂದ ಸಂಕ, ಅಸ್ಲಮ ನಾಲಬಂದ, ಬಸವರಾಜ ಠಕ್ಕಣ್ಣವರ, ರಾಜು ಜಮಖಂಡಿಕರ, ಗೌತಮ‌ ಪರಾಂಜಪೆ, ತೌಸಿಫ್ ಸಾಂಗಲೀಕರ್, ಪ್ರಕಾಶ ಕೋಳಿ, ಸುರೇಶ ಕೊಳಂಬಿ, ಚಿದಾನಂದ ಮುಕಣಿ, ಆಕಾಶ ಬುಟಾಳಿ, ಬಸವರಾಜ ಹಳ್ಳದಮಳ, ರವಿ ಬಕಾರಿ, ಸಿದ್ದು ಕೋಕಟನೂರ, ಸಚಿನ ಬುಟಾಳಿ, ರವಿ ಬಡಕಂಬಿ, ಸಚಿನ ಬಡಕಂಬಿ, ಸಲಾಂ ಕಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು